ಢಾಕಾ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಾಂಗ್ಲಾದೇಶದ ವಿಜಯ ದಿನಾಚರಣೆ (ವಿಮೋಚನಾ ದಿನ)ಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 16 ರಂದು ಢಾಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದಾರೆ ಎಂಬುದಾಗಿ ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿ ಕೋವಿಂದ್ ಅವರು ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ಡಿಸೆಂಬರ್ 16 ಮತ್ತು 17 ರಂದು ಬಾಂಗ್ಲಾಗೆ ಭೇಟಿ ನೀಡುತ್ತಿದ್ದಾರೆ ಎಂದು ಅಲ್ಲಿನ ಡೈಲಿ ಸ್ಟಾರ್ ಪತ್ರಿಕೆ ಭಾನುವಾರ ವರದಿ ಮಾಡಿದೆ.
“ಭಾರತದ 14 ನೇ ರಾಷ್ಟ್ರಪತಿಗಳು ಬಾಂಗ್ಲಾದೇಶಕ್ಕೆ ಮೊದಲ ಭೇಟಿ ನೀಡುತ್ತಿದ್ದಾರೆ” ಎಂದು ವಿದೇಶಾಂಗ ಸಚಿವ ಎ ಕೆ ಅಬ್ದುಲ್ ಮೊಮೆನ್ ಹೇಳಿದ್ದಾರೆ.
ಬಾಂಗ್ಲಾದೇಶ ಮತ್ತು ಭಾರತವು ಜಂಟಿಯಾಗಿ “ಲೋಗೋ ಮತ್ತು ಬ್ಯಾಕ್ಡ್ರಾಪ್” ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಡಿಸೆಂಬರ್ 6 ರಂದು ಮೈತ್ರಿ ದಿವಸ್ ಅನ್ನು ಆಚರಿಸಲಿದೆ ಎಂದು ವರದಿಗಳು ತಿಳಿಸಿವೆ.
ಢಾಕಾ ಟ್ರಿಬ್ಯೂನ್ನಲ್ಲಿನ ವರದಿಯ ಪ್ರಕಾರ, ಬಾಂಗ್ಲಾದೇಶ ಮತ್ತು ಭಾರತವು ಮುಂದಿನ ತಿಂಗಳು ಎರಡು ಮೆಗಾ ಈವೆಂಟ್ಗಳನ್ನು ಆಯೋಜಿಸುತ್ತಿವೆ. ಅದೆಂದರೆ ಮೈತ್ರಿ ದಿವಸ್ ಮತ್ತು ಬಾಂಗ್ಲಾದೇಶದ ವಿಜಯ ದಿನ. ಕ್ರಮವಾಗಿ ಡಿಸೆಂಬರ್ 6 ಮತ್ತು ಡಿಸೆಂಬರ್ 16 ರಂದು ಉನ್ನತ ಮಟ್ಟದ ಭೇಟಿಗಳ ವಿನಿಮಯದೊಂದಿಗೆ ನಡೆಯಲಿದೆ.
ವಿಜಯ ದಿನಾಚರಣೆಯ ಹೊರತಾಗಿ, ರಾಷ್ಟ್ರಪತಿ ಕೋವಿಂದ್ ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.