ನವೆಂಬರ್ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಘಟನೆಯೊಂದು ನಡೆದಿದೆ.
ಬಾಗಲಕೋಟೆಯ ನವನಗರದ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ತವಾಗಿ ವೇಷಭೂಷಣ ಸ್ಪರ್ಧೆ ನಡೆಯುದಿತ್ತು. ಆ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳಿಗೆ ತಮ್ಮ ಇಷ್ಟದ ವೇಷಗಳನ್ನು ಹಾಕಿಕೊಂಡು ಬರಲು ಶಿಕ್ಷಕರು ಮಕ್ಕಳಿಗೆ ತಿಳಿಸಿರುತ್ತಾರೆ. ಮಕ್ಕಳಿಗೆ ನಾನಾ ವೇಷಗಳನ್ನು ಹಾಕಿಕೊಂಡು ಹೋಗಲು ತುಂಬಾ ಸಂತೋಷ.
ಈ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಆ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ಕಲಿಯುತ್ತಿರುವ ಶ್ರೀಧರ ಗೌಳಿ ಎಂಬ ಆರು ವರ್ಷದ ಪುಟ್ಟ ಶಿಶು ಮನೆಗೆ ಬಂದು ವಿಷಯ ತಿಳಿಸುತ್ತಾನೆ. ಮನೆಯ ಸದಸ್ಯರು ಯಾವ ವೇಷ ಹಾಕೋಣ ? ಎಂಬ ಚರ್ಚೆಯಲ್ಲಿರುವಾಗ, ತಂದೆಯವರು ದಿನಾಲೂ ಶಾಖೆಗೆ ಹೋಗ್ತಿಯಲ ಅದ್ಕೆ ಸಂಘದ ಗಣವೇಶ ಹಾಕ್ತಿಯಾ ನೋಡು ಅಂತ ಸಲಹೆ ನೀಡುತ್ತಾರೆ.
ಅದನ್ನೆ ನಿರ್ಧರಿಸಿಕೊಂಡ ಆ ಪುಟ್ಟ ಶಿಶು ಸ್ವತಃ ಮನೆಯಲ್ಲಿ ಇರುವ ಗಣವೇಶದ ಭಾಗಗಳನ್ನು ಒಟ್ಟುಗೂಡಿಸಿಕೊಂಡು ಸಂಘದ ಸ್ವಯಂಸೇವಕನಾಗಿ ಗಣವೇಶ ಹಾಕಿಕೊಂಡು ಶಾಲಾ ವೇಷಭೂಷಣ ಸ್ಪರ್ಧೆಯಲ್ಲಿ ಯಾವುದೇ ಮುಜುಗರ, ಭಯ, ಅಂಜಿಕೆ ಇಲ್ಲದೇ ಭಾಗವಹಿಸಿಯೇ ಬಿಟ್ಟ. ಅಷ್ಟೇ ಅಲ್ಲದೆ ಇವನ ಸರದಿ ಬಂದಾಗ ವೇದಿಕೆ ಮೇಲೆ ನಿಂತು ಭಾರತ ಮಾತಾ ಕೀ ಜಯ್, ಜಯ್ ಭವಾನಿ, ಜಯ್ ಶಿವಾಜಿ ದೇಶ ಭಕ್ತಿಯ ಘೋಷಣೆಗಳನ್ನು ಕೂಗಿದ್ದನಂತೆ. ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಇನ್ನಿತರ ಮಕ್ಕಳು ಸಹಿತ ಇವನ ಘೋಷಣೆಗಳಿಗೆ ಜೈಕಾರ ಹಾಕಿ ಕಾರ್ಯಕ್ರಮವನ್ನು ದೇಶಭಕ್ತಿಯೆಡೆಗೆ ತೆಗೆದುಕೊಂಡು ಹೋದನಂತೆ.
ಶಾಲಾ ಕಾರ್ಯಕ್ರಮದಲ್ಲಿ ದೇಶಭಕ್ತಿಯ ಸಿಂಚನವನ್ನು ಹರಡಲು ಇಷ್ಟು ಧೈರ್ಯ, ನಿರ್ಭಯತೆ, ದೇಶಭಕ್ತಿಯ ಮೂಲ ಹುಡುಕುತ್ತ ಹೋದಂತೆ ಕಾಣಸಿಗುವುದು ಅವನೊಬ್ಬ ಪ್ರತಿನಿತ್ಯ ಶಾಖೆಗೆ ಹೋಗುವ ಸ್ವಯಂಸೇವಕ. ಅವನ ಮನೆಯ ಹತ್ತಿರ ನಡೆಯುತ್ತಿದ್ದ ಗಣೇಶ ಸಾಮಾನ್ಯ ವಿದ್ಯಾರ್ಥಿ(ಸಾಯಂ) ಶಾಖೆಯ ಸ್ವಯಂಸೇವಕ ಆ ಪುಟ್ಟ ಶಿಶು. ಒಂದೂವರೆ ವರ್ಷಗಳಿಂದ ತನ್ನ ಅಣ್ಣಂದಿರೊಂದಿಗೆ ಆ ಶಾಖೆಗೆ ಹೋಗುತ್ತಿದ್ದರ ಪರಿಣಾಮವೇ ಶಾಲೆಯಲ್ಲಿ ಗಣವೇಷದೊಂದಿಗೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟ ಪಟ್ಟ.
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಯಾವ ರೀತಿಯಲ್ಲಿ ಸಂಸ್ಕಾರ ನೀಡುತ್ತೇವೆಯೋ ಅದೇ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ. ದೇಶಭಕ್ತಿ ಅಂದರೆನೆ ಗೊತ್ತಲ್ಲದ ಈ ತರಹದ ಪುಟ್ಟ ಮಕ್ಕಳಿಗೆ ಸಂಘದ ಸಂಸ್ಕಾರದ ಮೂಲಕ ದೇಶಭಕ್ತಿಯ ಪ್ರತ್ಯಕ್ಷ ದರ್ಶನದಂತಹ ವ್ಯಕ್ತಿ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಶಾಖೆ ಕೇವಲ ಮಕ್ಕಳಿಗೆ ಬರೀ ಆಟ, ಯುವಕರಿಗೆ ಬರೀ ಶಾರೀರಿಕ ಸದೃಡತೆಯ, ಹಿರಿಯರಿಗೆ ಬರೀ ಯೋಗ ತರಗತಿಗಳ ಕೇಂದ್ರವಲ್ಲ. ಅದೊಂದು ಎಲ್ಲ ರೀತಿಯ ಸಂಸ್ಕಾರದ ಕೇಂದ್ರ. ಇದರಿಂದ ಮಾನಸಿಕವಾಗಿ, ಶಾರೀರಿಕವಾಗಿ, ಬೌದ್ಧಿಕವಾಗಿ ಸದೃಡರನ್ನಾಗಿಸಿ ದೇಶಭಕ್ತಿಯನ್ನು ನಿರಂತರವಾಗಿ ಪಸರಿಸುವ ಯಜ್ಞಶಾಲೆ.
ನಾನೋಬ್ಬ ಸ್ವಯಂಸೇವಕ ಅನ್ನಲು ಭಯ ಪಡುತ್ತಿದ್ದ ಕಾಲವೊಂದಿತ್ತು. ಆದರೆ ಶಾಲಾ ಕಾರ್ಯಕ್ರಮದಲ್ಲಿ ನಿರ್ಭಯವಾಗಿ ಪುಟ್ಟ ಶಿಶುಗಳು ಸಂಘದ ಗಣವೇಶದಲ್ಲಿ ಹಾಕಿಕೊಂಡು ಹೋಗುತ್ತಿರುವುದನ್ನು ನೋಡಿದ್ರೆ ಗೊತ್ತಾಗುತ್ತಿದೆ. ಸಂಘ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗುತ್ತಿದೆ. ಇದರ ಮೂಲಕ ದೇಶವನ್ನು ಪರಮ ವೈಭವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿರುವ ವೇಗ ಹೆಚ್ಚಾಗಿದೆ. ಪ್ರತಿಯೊಂದು ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡಿ ದೇಶದ ಉನ್ನತಿಗೆ ಶ್ರಮಿಸೋಣ ಎನ್ನುವ ಆಶಯದೊಂದಿಗೆ.
✍️ಸುರೇಶ ಮಾಗಿ
ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.