ಅಗರ್ತಾಲ: ತ್ರಿಪುರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ 334 ಸ್ಥಾನಗಳ ಪೈಕಿ 112 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಅಲ್ಲಿನ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಉಳಿದ 222 ಸ್ಥಾನಗಳಿಗೆ ಒಟ್ಟು 785 ಸ್ಪರ್ಧಿಗಳು ಕಣದಲ್ಲಿದ್ದಾರೆ. ನವೆಂಬರ್ 25ರಂದು ಚುನಾವಣೆ ನಡೆಯಲಿದೆ. ನವೆಂಬರ್ 28ಕ್ಕೆ ಫಲಿತಾಂಶ ಹೊರಬೀಳಲಿದೆ.
ಒಟ್ಟು 5,94,772 ಮತದಾರರು ಈ ಚುನಾವಣೆಗೆ ಮತ ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ.
ಬಿಜೆಪಿ ಈಗಾಗಲೇ ಒಟ್ಟು ಸ್ಥಾನಗಳಲ್ಲಿ ಸುಮಾರು 34% ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಉತ್ತರದ ಕಮಲಪುರ್, ಜಿರಾನಿಯಾ, ರಾನೀರ್ ಬಜಾರ್, ಮೋಹನ್ಪುರ, ಪಶ್ಚಿಮ ತ್ರಿಪುರದ ಬಿಶಾಲ್ಗಢ, ದಕ್ಷಿಣ ತ್ರಿಪುರಾದ ಶಾಂತಿರ್ ಬಜಾರ್ ಮತ್ತು ಉದಯ್ಪುರದಲ್ಲಿ ಬಹುಮತ ಪಡೆಯುವುದು ಖಚಿತಗೊಂಡಿದೆ.
ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರ ನಾಗರಿಕ ಸಂಸ್ಥೆಗಳ ಐದು ವರ್ಷಗಳ ಅವಧಿಯು 2020ರ ಡಿಸೆಂಬರ್ ತಿಂಗಳಲ್ಲಿ ಮುಕ್ತಾಯಗೊಂಡಿದೆ . ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬಿಜೆಪಿ ನೇತೃತ್ವದ ಆಡಳಿತವು ಚುನಾವಣೆಯನ್ನು ನಡೆಸಲಿಲ್ಲ. ನವೆಂಬರ್ 25 ರಂದು ಕೋವಿಡ್ ಪ್ರೋಟೋಕಾಲ್ಗಳಿಗೆ ಬದ್ಧವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೂಲಕ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಮಾಣಿಕ್ ಲಾಲ್ ಡೇ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.