ನವದೆಹಲಿ: ಭಾರತವು ಪಳೆಯುಳಿಕೆ ರಹಿತ ಇಂಧನಗಳಿಂದ ಶೇಕಡಾ 50 ರಷ್ಟು ಶಕ್ತಿಯ ಗುರಿಯನ್ನು ಸುಲಭವಾಗಿ ಸಾಧಿಸುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ 2030 ರ ಗಡುವಿನ ಮೊದಲು 500-ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುತ್ತದೆ ಎಂದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಹೇಳಿದ್ದಾರೆ.
2070 ರ ವೇಳೆಗೆ ಭಾರತವು ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುತ್ತದೆ ಎಂದು ಗ್ಲಾಸ್ಗೋದಲ್ಲಿ COP26 ಹವಾಮಾನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.
2030 ರ ವೇಳೆಗೆ ಪಳೆಯುಳಿಕೆ ರಹಿತ ಶಕ್ತಿ ಸಾಮರ್ಥ್ಯದ ರಾಷ್ಟ್ರೀಯ ನಿರ್ಧರಿತ ಕೊಡುಗೆ (NDC) ಗುರಿಯನ್ನು 450 ಗಿಗಾವ್ಯಾಟ್ಗಳಿಂದ 500 GW ಗೆ ಮೋದಿ ಹೆಚ್ಚಿಸಿದ್ದಾರೆ ಎಂದಿದ್ದಾರೆ.
“ನಾವು 2030 ರ ವೇಳೆಗೆ ಭಾರತವು 500 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವ ಪ್ರಧಾನ ಮಂತ್ರಿಯ ಗುರಿಯತ್ತ ಸಾಗಲು ಶ್ರಮಿಸುತ್ತಿದ್ದೇವೆ. ನಾವು 2030 ರ ವೇಳೆಗೆ 40 ಪ್ರತಿಶತ (ಪಳೆಯುಳಿಕೆಯೇತರ ಇಂಧನದಿಂದ ಶಕ್ತಿ) ಸಾಧಿಸುತ್ತೇವೆ ಎಂದು ನಾವು ಹೇಳಿದ್ದೇವೆ. ನಾವು 39 ಪ್ರತಿಶತ ತಲುಪಿದ್ದೇವೆ. 2030 ರ ವೇಳೆಗೆ ನಾವು ಶೇಕಡಾ 50 ರಷ್ಟು ಗುರಿಯನ್ನು ಸುಲಭವಾಗಿ ಸಾಧಿಸುತ್ತೇವೆ. ಪ್ರಧಾನ ಮಂತ್ರಿಗಳು 2030 ರವರೆಗೆ ಗುರಿಯನ್ನು ನೀಡಿದ್ದಾರೆ, ನಾವು ಅದಕ್ಕಿಂತ ಮೊದಲೇ ಸಾಧಿಸುತ್ತೇವೆ” ಎಂದಿದ್ದಾರೆ.
“ನಾವು 149 GW (ದೊಡ್ಡ ಜಲವಿದ್ಯುತ್ ಯೋಜನೆಗಳನ್ನು ಒಳಗೊಂಡಂತೆ) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಿದ್ದೇವೆ. ನಮ್ಮ ನಿರ್ಮಾಣದಲ್ಲಿ 63 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವಿದೆ. ಹಾಗಾಗಿ, ನಾವು ಈಗಾಗಲೇ 212 GW ನಲ್ಲಿ ಇದ್ದೇವೆ. ಆದ್ದರಿಂದ, ನಾವು 2030 ರ ವೇಳೆಗೆ 300 GW ಅನ್ನು ತಲುಪುದು ಕಷ್ಟ ಎಂದು ಭಾವಿಸುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.