ನವದೆಹಲಿ: QS ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕ 2022ರ ಫಲಿತಾಂಶಗಳನ್ನು Quacquarelli Symonds ಬಿಡುಗಡೆ ಮಾಡಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ 42 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ, ಐಐಟಿ ಬಾಂಬೆ ಈ ಶ್ರೇಯಾಂಕದಲ್ಲಿ 100 ರಲ್ಲಿ 72 ಅಂಕಗಳನ್ನು ಗಳಿಸಿದ ಭಾರತದ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಇದು ಮೊದಲ ಸ್ಥಾನ ಪಡೆದಿದೆ.
ಐಐಟಿ ಬಾಂಬೆ ನಂತರ, ಐಐಟಿ ದೆಹಲಿಯು QS ಏಷ್ಯಾ ಶ್ರೇಯಾಂಕ 2022 ರಲ್ಲಿ 45 ನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ. 100 ಅಂಕಗಳ ಅಂಕಗಳ ಪೈಕಿ IIT ದೆಹಲಿಯು ಶ್ರೇಯಾಂಕದಲ್ಲಿ 69.6 ಅಂಕಗಳನ್ನು ಪಡೆದುಕೊಂಡಿದೆ.
QS ಏಷ್ಯಾ ಶ್ರೇಯಾಂಕ 2022 ರ ಪ್ರಕಾರ, ಐಐಟಿ ಬಾಂಬೆ ಶೈಕ್ಷಣಿಕ ರೆಪ್ಯುಟೇಶನ್ನಲ್ಲಿ 81.4 ಮತ್ತು ಉದ್ಯೋಗದಾಯಕತೆಯಲ್ಲಿ 96 ಅಂಕಗಳನ್ನು ಪಡೆದುಕೊಂಡಿದೆ. ಸಂಸ್ಥೆಯು ಸಿಟೇಶನ್ ಸೌಲಭ್ಯದಲ್ಲಿ 23 ಮತ್ತು ಫೆಸಿಲಿಟಿ ಸ್ಟುಡೆಂಟ್ ರೇಷನ್ನಲ್ಲಿ 44.7 ಅಂಕಗಳನ್ನು ಗಳಿಸಿದೆ. IIT ಬಾಂಬೆ ಪಿಎಚ್ಡಿ ನೀಡುವಲ್ಲಿ 100 ಅಂಕಗಳನ್ನು ಗಳಿಸಿದೆ ಮತ್ತು ಇದು ಪೇಪರ್ ಪರ್ ಫೆಸಿಲಿಟಿಯಲ್ಲಿ 84.2, ಅಂತರಾಷ್ಟ್ರೀಯ ಅಧ್ಯಾಪಕರಲ್ಲಿ 11, ಇಂಟರ್ನ್ಯಾಷನಲ್ ರಿಸರ್ಚ್ ನೆಟ್ವರ್ಕ್ನಲ್ಲಿ 78.5, ಇನ್ಬೌಂಡ್ ಮತ್ತು ಔಟ್ಬೌಂಡ್ ಎಕ್ಸ್ಚೇಂಜ್ನಲ್ಲಿ 14.5 ಮತ್ತು 8.3 ಅಂಕ ಗಳಿಸಿದೆ. ಐಐಟಿ ಬಾಂಬೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ 4.4 ಅಂಕಗಳನ್ನು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.