ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ದೇಶದಲ್ಲಿ ಔಷಧಿಗಳ ಸಮರ್ಪಕ ಬಳಕೆಯನ್ನು ಉತ್ತೇಜಿಸಲು ನ್ಯಾಷನಲ್ ಫಾರ್ಮುಲರಿ ಆಫ್ ಇಂಡಿಯಾದ 6 ನೇ ಆವೃತ್ತಿಯನ್ನು ಗುರುವಾರ ಪ್ರಾರಂಭಿಸಿದರು.
ಭಾರತೀಯ ಫಾರ್ಮಾಕೊಪೊಯಿಯಾ ಆಯೋಗವು ನ್ಯಾಷನಲ್ ಫಾರ್ಮುಲರಿ ಆಫ್ ಇಂಡಿಯಾ-NFI ಅನ್ನು ಪ್ರಕಟಿಸಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಮಾಂಡವೀಯ ಅವರು, ಹೊಸ ಆವೃತ್ತಿಯನ್ನು ತರುವಲ್ಲಿ ಸಹಕರಿಸಿದ ಎಲ್ಲಾ ತಜ್ಞರು, ವೈದ್ಯರು ಮತ್ತು ಸಂಶೋಧಕರ ಶ್ರಮವನ್ನು ಶ್ಲಾಘಿಸಿದರು.
ವೈದ್ಯರು, ಔಷಧಿ ವಲಯದವರು, ದಾದಿಯರು ಮತ್ತು ದಂತವೈದ್ಯರಂತಹ ಎಲ್ಲಾ ಆರೋಗ್ಯ ವೃತ್ತಿಪರರಿಗೆ NFI- 2021 ಮಾರ್ಗದರ್ಶನದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ದೈನಂದಿನ ಕ್ಲಿನಿಕಲ್ ಅಭ್ಯಾಸಗಳಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.
Released the National Formulary of India 2021, which will serve as a guidance document for pharmacies, hospitals and medical & paramedical academic institutions. pic.twitter.com/BFNGTieF6a
— Dr Mansukh Mandaviya (@mansukhmandviya) October 28, 2021
ಔಷಧಗಳು ವಿವಿಧ ದೇಹಗಳಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ ಮತ್ತು ಔಷಧಿಗಳ ವಿಷಯ, ಪರಿಣಾಮ ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಎಂದು ಡಾ. ಮಾಂಡವೀಯ ಹೇಳಿದರು.
ರೋಗಿಗಳಿಗೆ ಔಷಧಿಗಳನ್ನು ಶಿಫಾರಸು ಮಾಡುವಾಗ NFI ವೈದ್ಯರಿಗೆ ಮತ್ತು ಆರೋಗ್ಯ ವೃತ್ತಿಪರರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.