ನವದೆಹಲಿ: ಜನಸಂಘದ ದಿನಗಳಿಂದ ಇಲ್ಲಿಯವರೆಗಿನ ಕಾರ್ಯಕರ್ತರ ಕುರಿತ ಸ್ಫೂರ್ತಿದಾಯಕ ಕಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಂಚಿಕೊಂಡಿದ್ದಾರೆ.
ಕಾರ್ಯಕರ್ತರ ಪ್ರೇರಣಾದಾಯಿ ಕಥೆಗಳನ್ನು ನಮೋ ಆ್ಯಪ್ನ ‘ಕಮಲ್ ಪುಷ್ಪ್’ ಎಂಬ ವಿಭಾಗದಲ್ಲಿ ಪಡೆಯಬಹುದಾಗಿದೆ
ನಾಯಕರಾದ ಪಂಡಿತ್ ದೇವೇಂದ್ರ ಶಾಸ್ತ್ರಿ ಮತ್ತು ಎಸ್. ಮಲ್ಲಿಕಾರ್ಜುನಯ್ಯ ಅವರು ಮಾಡಿದ ಕಾರ್ಯಗಳ ತುಣುಕುಗಳನ್ನು ಪ್ರಧಾನಿ ಮೋದಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಉತ್ತರಾಖಂಡದ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ್ ದೇವೇಂದ್ರ ಶಾಸ್ತ್ರಿ ಜೀ ಅವರು ತಮ್ಮ ಜೀವನದುದ್ದಕ್ಕೂ ತತ್ವಬದ್ಧ ರಾಜಕಾರಣದ ದಾರಿದೀಪವಾಗಿದ್ದರು” ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
A freedom fighter from Uttarakhand, Pandit Devendra Shastri ji was a beacon of principled politics all his life.
Know more about this selfless soul on Kamal Pushp module of NaMo App.#KamalPushphttps://t.co/DCcPfNNAYe
— Narendra Modi (@narendramodi) October 26, 2021
ಕರ್ನಾಟಕದಲ್ಲಿ ಬಿಜೆಪಿಯನ್ನು ಜನಪ್ರಿಯಗೊಳಿಸಲು ಮಲ್ಲಿಕಾರ್ಜುನಯ್ಯ ಅವರು ತಮ್ಮ ಜೀವನದುದ್ದಕ್ಕೂ ನಿಸ್ವಾರ್ಥ ಪರಿಶ್ರಮದಿಂದ ಶ್ರಮಿಸಿದ್ದಾರೆ ಎಂದು ಪ್ರಧಾನಿ ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
Mallikarjunaiah ji toiled all his life through selfless hard work, to popularise BJP in Karnataka. Read to know more about this inspiring BJP worker on Kamal Pushp module of NaMo App.#KamalPushphttps://t.co/yezkaO8Z2m
— Narendra Modi (@narendramodi) October 26, 2021
“ನಮೋ ಅಪ್ಲಿಕೇಶನ್ನಲ್ಲಿ ‘ಕಮಲ್ ಪುಷ್ಪ್’ ಎಂದು ಕರೆಯಲ್ಪಡುವ ಅತ್ಯಂತ ಆಸಕ್ತಿದಾಯಕ ವಿಭಾಗವಿದೆ, ಇದು ನಮ್ಮ ಸಿದ್ಧಾಂತವನ್ನು ಜನಪ್ರಿಯಗೊಳಿಸಲು ಶ್ರಮಿಸಿದ ಜನಸಂಘದ ದಿನಗಳಿಂದ ಇಂದಿನವರೆಗೆ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸಿದ ನಾಯಕರು ಬಗ್ಗೆ ತಿಳಿದುಕೊಳ್ಳಲು ನಮಗೆ ಅವಕಾಶ ನೀಡುತ್ತದೆ. ಇದಕ್ಕೆ ಕೊಡುಗೆ ನೀಡಿ ಮತ್ತು ಈ ವಿಭಾಗವನ್ನು ಉತ್ಕೃಷ್ಟಗೊಳಿಸಿ” ಎಂದಿದ್ದಾರೆ.
ಜನರ ಆಶೀರ್ವಾದದಿಂದ ಬಿಜೆಪಿಗೆ ಹಲವಾರು ರಾಜ್ಯಗಳು ಮತ್ತು ಕೇಂದ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ, ಹಲವು ತಲೆಮಾರುಗಳ ಕಾರ್ಯಕರ್ತರು ಪಕ್ಷ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಜೀವನವನ್ನು ಸಮರ್ಪಿಸಿದ್ದು ಇದಕ್ಕೆ ಮುಖ್ಯ ಕಾರಣ ಎಂದು ಮೋದಿ ಹೇಳಿದ್ದಾರೆ.
The NaMo App has a very interesting section known as ‘Kamal Pushp’ that gives you the opportunity to share and know about inspiring Party Karyakartas from the Jana Sangh days to the present, who toiled to popularise our ideology. Do contribute and enrich this section.
— Narendra Modi (@narendramodi) October 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.