ಇತ್ತೀಚೆಗೆ ಕೆಲವರು ಸಂಘದ ಬಗ್ಗೆ ರಾತ್ರಿ ಬೆಳಗಾದರೆ ಬಯ್ಯುವ ಅಥವಾ ಅಪಪ್ರಚಾರ ಮಾಡುವುದರಲ್ಲೇ ಮುಳುಗಿದ್ದಾರೆ. ಒಬ್ಬರು ಹೇಳಿದ್ದರು RSS ತಾಲೀಬಾನಿಗಳಿದ್ದಂತೆ ಎಂದು.! ತಾಲೀಬಾನಿಗಳೆಂದರೆ ಯಾರು ಅವರ ಉದ್ದೇಶ ಏನು ಎಂದು ತಿಳಿದುಕೊಳ್ಳದೇ ಪಾಪ RSS ಅನ್ನು ತಾಲೀಬಾನಿಗಳಿಗೆ ಹೋಲಿಸಿದ್ದಾರೆ. ಇದು ಮೊದಲೇನಲ್ಲ. ಹಿಂದಿನಿಂದಲೂ ಸಂಘದ ಬಗ್ಗೆ ಹಾಗೂ ಸಂಘ ಕಾರ್ಯದ ಬಗ್ಗೆ ಇಲ್ಲ ಸಲ್ಲದ ಅಪವಾದವನ್ನು ಮಾಡಿಕೊಂಡು ಬಂದಿದ್ದಾರೆ. ತಾಲೀಬಾನಿಗಳ ಹುಟ್ಟು ಏಕಾಯಿತು? ಎಂದು ಇದೇ ವ್ಯಕ್ತಿ ಹೇಳಲು ಸಾಧ್ಯವೇ ? ಖಂಡಿತ ಇಲ್ಲ ಬಿಡಿ ! ಸಂಘ ಸ್ಥಾಪನೆಯಾಗಿದ್ದು ನಾವು ಮರೆತಿರುವಂತಹ ಸಂಗತಿಯನ್ನು ಇನ್ನೊಮ್ಮೆ ನೆನಪಿಸಲು, ರಾಷ್ಟ್ರೋದ್ಧಾರದ ಸತ್ಯಮಾರ್ಗವನ್ನು ಮನಗಾಣಿಸುವುದಕ್ಕೆ ಹೊರತು ಯಾರದೋ ಮೇಲೆ ಯುದ್ಧ ಮಾಡಲಲ್ಲ ಎಂಬುದು ಮೊದಲು ತಿಳಿದುಕೊಳ್ಳಬೇಕು. ಸಂಘದ ಕಾರ್ಯ ರಾಷ್ಟ್ರ ನಿರ್ಮಾಣದ ಕಾರ್ಯವೇ ಹೊರತು ಬೇರೆ ದೇಶದ ಮೇಲೆ ಯುದ್ಧ ಹೋಗುವುದಲ್ಲ.
ಇನ್ನೋರ್ವರು ಇತ್ತೀಚೆಗೆ RSS ನಲ್ಲಿ ತರಬೇತಿ ಪಡೆದ ಸಾವಿರಾರು ಮಂದಿ IAS, KAS ನಲ್ಲಿ ಆಯ್ಕೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಕಸ್ಮಾತ್ ಅವರು ಹೇಳಿದಂತೆ ಪ್ರತಿ ವರ್ಷ ಸಾವಿರಾರು ಮಂದಿ RSS ನಿಂದ ತರಬೇತಿ ಪಡೆದವರು ಆಯ್ಕೆಯಾಗಿದ್ದರೆ ದೇಶ ಅದೆಂದೋ ನಂ.1 ಆಗಿರುತ್ತಿತ್ತು. ಅಲ್ಲದೇ ಅದಕ್ಕಿಂತ ಖುಷಿಯ ಸಂಗತಿ ಓರ್ವ ಸ್ವಯಂಸೇವಕನಿಗೆ ಮತ್ತೊಂದು ಇರುತ್ತಿರಲಿಲ್ಲ. ಹೌದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೋತ್ಥಾನದ ವತಿಯಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲವಿರುವ ಕುಟುಂಬದ ಪ್ರತಿಭಾವಂತರನ್ನು ಪ್ರತಿಷ್ಠಿತ ಐ.ಐ.ಟಿ- ಜೆ.ಇ.ಇ ಶಿಕ್ಷಣ ಪಡೆಯುವಂತೆ ಮಾಡುವ ಸಲುವಾಗಿ 2012 ರಲ್ಲಿ ತಪಸ್ ಯೋಜನೆ ಪ್ರಾರಂಭ ಮಾಡಿತು. ಅಲ್ಲದೇ IAS, KAS ಬರೆಯುವವರಿಗೂ ಸಹ ತೇಜಸ್ ಯೋಜನೆ ಪ್ರಾರಂಭ ಮಾಡಿದೆ. ಇದರಲ್ಲಿ ಆಯ್ಕೆಯಾದ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣದ ಜೊತೆಗೆ ವಸತಿ, ಆಹಾರ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಅಷ್ಟಕ್ಕೂ RSS ತರಬೇತಿ ನೀಡುತ್ತಿರುವುದು ಒಳ್ಳೆಯ ಕೆಲಸಕ್ಕೇ ಹೊರತು ಯಾವುದೋ ದೇಶದ್ರೋಹಿ ಕೆಲಸಕ್ಕಲ್ಲವಲ್ಲ ! ದೇಶದ್ರೋಹಿ ಸಂಘಟನೆಗಳಿಂದ ಪ್ರತಿ ವರ್ಷ ISIS ಗೆ ಸೇರುತ್ತಿರುವವರ ಬಗ್ಗೆ ಮಾತನಾಡಲು ಧೈರ್ಯವಿಲ್ಲದೆ ದೇಶ ಸೇವೆ ಮಾಡುತ್ತಿರುವ ಸಂಘದ ಬಗ್ಗೆ ಮಾತನಾಡಿ ತುಚ್ಛವಾದರು ಅಷ್ಟೇ.!
ಈ ಮೇಲಿನ ಎರಡು ಹೇಳಿಕೆಗಳಿಂದ ಸಂಘಕ್ಕೆ ಒಳ್ಳೆಯದೇ ಹೊರತು ಕೆಟ್ಟದ್ದಲ್ಲ! ಅದು ಹೇಗೆ? ಸಾಗರದ ಒಳಹೊಕ್ಕಾಗ ಮಾತ್ರ ಹೇಗೆ ಅದರಲ್ಲಿರುವ ಅನನ್ಯವಾದ ಜೀವ ಸಂಕುಲಗಳ ಬಗ್ಗೆ ನಮಗೆ ತಿಳಿಯುತ್ತದೆಯೋ, ಸಂಘದ ಬಗ್ಗೆ ಪದೇ ಪದೇ ಹೀಗೆ ಅಪಪ್ರಚಾರ ಮಾಡುತ್ತಿರುವವರಿದ್ದರೆ ಸಂಘ ಪ್ರಪಂಚಕ್ಕೆ ತಿಳಿಯುವ ಕೆಲಸವಾಗುತ್ತದೆ. ಇದರ ಮೂಲಕ ಸಂಘದ ಕಾರ್ಯಗಳು ಮೂಲೆ ಮೂಲೆಗೂ ತಲುಪಿ ರಾಷ್ಟ್ರ ನಿರ್ಮಾಣದ ಕಾರ್ಯ ಇನ್ನೂ ಹೆಚ್ಚಾಗುತ್ತದೆಯೇ, ಹೊರತು ಸಂಘದ ಶಕ್ತಿಗುಂದುವುದಿಲ್ಲ ಎಂಬುದು ವಿರೋಧಿಗಳು, ಅಪಪ್ರಚಾರ ಮಾಡುವವರು ಗಮನಿಸಬೇಕಾದ ಸಂಗತಿ.
ಅದೇನೇ ಅಪಪ್ರಚಾರ ಮಾಡಲಿ ಈಗಾಗಲೇ ಸಂಘದ ಸ್ವಯಂಸೇವಕರು ಪ್ರಪಂಚದ ಮೂಲೆ ಮೂಲೆಯಲ್ಲಿದ್ದಾರೆ, ದೇಶದ ರಾಷ್ಟ್ರಪತಿಯಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯನವರೆಗೂ ಸ್ವಯಂಸೇವಕರಿದ್ದಾರೆ. ಕೆಲವೇ ವರ್ಷಗಳಲ್ಲಿ IAS , KAS ನಲ್ಲೂ ಸಂಘದ ಸ್ವಯಂಸೇವಕರಿರುತ್ತಾರೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ.!
ನಿಂದಕರಿರಬೇಕು
ಹಂದಿಯಿದ್ದರೆ ಕೇರಿ ಹೇಗೆ, ಶುದ್ಧಿಯೋ ಹಾಗೆ
ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು
ನಮ್ಮ ಪೊಂದಿಹ ಪುಣ್ಯವನು ಒಯ್ಯುವರಯ್ಯ
ದುಷ್ಟಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ
ಎಂದು ಪುರಂದರ ದಾಸರು ಹೇಳಿದಂತೆ, ನಿಂದಕರಿದ್ದರೆ ಸಂಘದ ಕಾರ್ಯ ಬಹು ದೂರ ತಲುಪುತ್ತದೆ…..
✍ ಕಲಾನಾಥ್
ಸಂಘದ ಬಗ್ಗೆ ಪದೇ ಪದೇ ಹೀಗೆ ಅಪಪ್ರಚಾರ ಮಾಡುತ್ತಿರುವವರಿದ್ದರೆ ಸಂಘ ಪ್ರಪಂಚಕ್ಕೆ ತಿಳಿಯುವ ಕೆಲಸವಾಗುತ್ತದೆ.! ಇದರ ಮೂಲಕ ಸಂಘದ ಕಾರ್ಯಗಳು ಮೂಲೆ ಮೂಲೆಗೂ ತಲುಪಿ ರಾಷ್ಟ್ರ ನಿರ್ಮಾಣದ ಕಾರ್ಯ ಇನ್ನೂ ಹೆಚ್ಚಾಗುತ್ತದೆಯೇ, ಹೊರತು ಸಂಘದ ಶಕ್ತಿಗುಂದುವುದಿಲ್ಲ ಎಂಬುದು ವಿರೋಧಿಗಳು, ಅಪಪ್ರಚಾರ ಮಾಡುವವರು ಗಮನಿಸಬೇಕಾದ ಸಂಗತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.