ಬೆಂಗಳೂರು: ಬೆಲ್ಜಿಯಂನಿಂದ ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ ಅನ್ನು ಆಮದು ಮಾಡಲಾಗಿದ್ದು, ಇದನ್ನು ರೈಲು ಭದ್ರತಾ ಪಡೆಯ ಸೈಬರ್ ಸೆಲ್ ಆವರಣದಲ್ಲಿ ಅಳವಡಿಸಲಾಗಿದೆ.
ದೇಶದಲ್ಲಿ ಇಂತಹ ಪ್ರಯೋಗ ಇದೇ ಮೊದಲನೆಯದಾಗಿದ್ದು, ಈ ಗೋಡೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ವರ್ಧಿತ ಪದರವನ್ನು ನೀಡಲಿದೆ. ಇದು 16 ಅಡಿ ಉದ್ದ, 10 ಅಡಿ ಅಗಲ ಅಳತೆ ಇದೆ. 16 ವಿಂಡೋಗಳನ್ನು ಈ ಗೋಡೆ ಹೊಂದಿದ್ದು, ಏಕಕಾಲಕ್ಕೆ ರೈಲ್ವೆ ನಿಲ್ದಾಣದಾದ್ಯಂತ ಕಣ್ಗಾವಲು ವಹಿಸಲು ಇದು ಪೂರಕವಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಚಲನೆಯನ್ನು ಇದು ಹೊಂದಿದೆ. ಆರ್ಪಿಎಫ್ ವ್ಯವಸ್ಥೆಯ ಕಮಾಂಡ್ ನಿಯಂತ್ರಣ ಕೇಂದ್ರವನ್ನು ನಿಭಾಯಿಸಲಿದೆ.
ಈ ಹೊಸ ವ್ಯವಸ್ಥೆಯು ಆರ್ಪಿಎಫ್ನ ಭಾಗವಾಗಿದ್ದು, 2.2 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.