
ಅಯೋಧ್ಯೆ: ಇಂದು ಅಯೋಧ್ಯೆಯಲ್ಲಿ ರಾಮನವಮಿ ಹಬ್ಬದ ಪ್ರಮುಖ ಭಾಗವಾಗಿ ಸೂರ್ಯ ತಿಲಕ ಕಾರ್ಯಕ್ರಮ ನಡೆಯಿತು. ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಹಣೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಈ ವಿಶೇಷ ಘಟನೆಯು ಭಕ್ತರಿಗೆ ಅತ್ಯಂತ ಆಕರ್ಷಣೆಯ ಕೇಂದ್ರವಾಗಿತ್ತು.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮ ಲಲಾನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿತು. ಸುಮಾರು 4 ನಿಮಿಷಗಳ ಕಾಲ ಸೂರ್ಯನ ಕಿರಣಗಳು ರಾಮಲಲಾನ ಹಣೆಯ ಮೇಲೆ ತಿಲಕದಂತೆ ಗೋಚರಿಸಿತು. ಈ ದಿವ್ಯ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಟಿವಿ ಮೂಲಕ ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರಿನ ವಿಜ್ಞಾನಿಗಳ ತಂಡವು ರಚಿಸಿದ ದರ್ಪಣಗಳು ಮತ್ತು ಲೆನ್ಸ್ಗಳ ವ್ಯವಸ್ಥೆಯ ಮೂಲಕ ಸೂರ್ಯನ ಕಿರಣಗಳನ್ನು ಗರ್ಭಗುಡಿಯೊಳಗೆ ನೇರವಾಗಿ ನಿರ್ದೇಶಿಸಲಾಗುತ್ತದೆ. ಇದು ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಅದ್ಭುತ ಘಟನೆಯಾಗಿದೆ.
ಈ ವರ್ಷ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಯು ಮಾರ್ಚ್ 27ರಂದು ನಡೆಯುತ್ತಿದ್ದರೆ, ದೇಶದ ಬಹುತೇಕ ಭಾಗಗಳಲ್ಲಿ ಮಾರ್ಚ್ 26ರಂದು ಆಚರಿಸಲಾಗಿದೆ. ನವಮಿ ತಿಥಿ ಮಾರ್ಚ್ 27ರ ಬೆಳಿಗ್ಗೆ 10:06ರವರೆಗೆ ಇದ್ದುದರಿಂದ ಅಯೋಧ್ಯೆಯಲ್ಲಿ ಇಂದು ಭವ್ಯ ಆಚರಣೆ ನಡೆಯುತ್ತಿದೆ.
ಸೂರ್ಯ ತಿಲಕವು ರಾಮನ ಸೂರ್ಯವಂಶದ ಸಂಕೇತವಾಗಿದ್ದು, ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ಸುಮಾರು 19 ವರ್ಷಗಳ ಖಗೋಳೀಯ ಚಕ್ರದಲ್ಲಿ ವಿಶೇಷ ಮಹತ್ವ ಪಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


