ನವದೆಹಲಿ: ಇದೇ ಮೊದಲ ಬಾರಿಗೆ, ಭಾರತದ ರಫ್ತುಗಳು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ $ 100 ಬಿಲಿಯನ್ ಗಡಿ ದಾಟಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತವು ಒಟ್ಟು 101.89 ಬಿಲಿಯನ್ ಡಾಲರ್ ರಫ್ತು ಮಾಡಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ಭಾರತದ ರಫ್ತುಗಳು $ 197 ಬಿಲಿಯನ್ ತಲುಪಿದೆ. ಸೆಪ್ಟೆಂಬರ್ನಲ್ಲಿ ರಫ್ತು $ 33.44 ಬಿಲಿಯನ್ ಇತ್ತು, ಆಗಸ್ಟ್ನಲ್ಲಿ $ 33.28 ಬಿಲಿಯನ್ ಮತ್ತು ಜುಲೈನಲ್ಲಿ $ 35.17 ಬಿಲಿಯನ್ ಇತ್ತು.
ಒಂದು ವರ್ಷದಲ್ಲಿ $ 400 ಬಿಲಿಯನ್ ರಫ್ತು ಮಾಡುವ ಗುರಿ ಹೊಂದಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಭಾರತದ ರಫ್ತುಗಳು 197 ಬಿಲಿಯನ್ ಡಾಲರ್ಗಳನ್ನು ಮುಟ್ಟಿದೆ. ಈ ಹಣಕಾಸು ವರ್ಷದಲ್ಲಿ $ 400 ಬಿಲಿಯನ್ ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ.
ವಾಣಿಜ್ಯ ಸಚಿವಾಲಯ ಹೊರಡಿಸಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2021 ರಲ್ಲಿ ಪೆಟ್ರೋಲಿಯಂ ರಫ್ತುಗಳ ಮೌಲ್ಯ $ 28.53 ಬಿಲಿಯನ್ ಇದ್ದು, ಪೆಟ್ರೋಲಿಯಂ ರಫ್ತುಗಳ ಮೇಲೆ 18.72 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಇದು ಸೆಪ್ಟೆಂಬರ್ 2020 ರಲ್ಲಿ $ 24.03 ಬಿಲಿಯನ್ ಆಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.