ಶಾಲಾ ಜೀವನ ಒಬ್ಬರ ಜೀವನವನ್ನು ರೂಪಿಸುತ್ತದೆ, ಜೀವನಕ್ಕೆ ಸಾಮರ್ಥ್ಯ ತುಂಬುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಒಬ್ಬರ ವ್ಯಕ್ತಿತ್ವವನ್ನು ವಿಕಸನಪಡಿಸಲು ಇಷ್ಟೇ ಸಾಲದು, ಇದಕ್ಕಾಗಿಯೇ ಶಾಲೆಗಳು ಮತ್ತು ಸಂಸ್ಥೆಗಳು ಹಲವು ವಿನೋದ ರೀತಿಯ ಅಧ್ಯಯನ ಸ್ಪರ್ಧೆಗಳನ್ನು, ವಿವಿಧ ಚಟುವಟಿಕೆಗಳನ್ನು ಮತ್ತು ರಸಪ್ರಶ್ನೆಗಳನ್ನು ಆಯೋಜಿಸುತ್ತವೆ. ಈ ರೀತಿಯ ಚಟುವಟಿಕೆಗಳು ಮಕ್ಕಳಿಗೆ ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಹಕಾರಿಯಾಗುತ್ತದೆ, ಮಾತ್ರವಲ್ಲದೆ ಅವರ ಸಾಮಾನ್ಯಜ್ಞಾನವನ್ನು ಕೂಡ ವೃದ್ಧಿಸುತ್ತದೆ ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಇದಕ್ಕಾಗಿ ವಿಜ್ಞಾನ ಭಾರತಿ (VIBHA)ಯು ವಿಗ್ಯಾನ್ ಪ್ರಸಾರ್ ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಲು ಸ್ಪರ್ಧೆಗಳನ್ನು ಆಯೋಜಿಸುತ್ತದೆ.
ಈ ವರ್ಷ ಕೂಡ, ಬಹುನಿರೀಕ್ಷಿತ ವಿದ್ಯಾರ್ಥಿ ವಿಗ್ಯಾನ್ ಮಂಥನ್ ಅನ್ನು ಆಯೋಜನೆ ಮಾಡಲಾಗಿದೆ. ಇದು ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಯಾಗಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವಿಭಿನ್ನ ವಿಧಾನದೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.
ಖ್ಯಾತ ಬಂಗಾಳಿ ಶಿಕ್ಷಣತಜ್ಞ, ಇತಿಹಾಸ ತಜ್ಞ, ಕೈಗಾರಿಕೋದ್ಯಮಿ, ರಸಾಯನಶಾಸ್ತ್ರಜ್ಞ, ಸಮಾಜಸೇವಕ ಮತ್ತು ರಸಾಯನಶಾಸ್ತ್ರದಲ್ಲಿ ಮೊದಲ ಆಧುನಿಕ ಭಾರತೀಯ ಸಂಶೋಧನಾ ಶಾಲೆಯನ್ನು ಸ್ಥಾಪನೆ ಮಾಡಿದ ಹಾಗೂ ಭಾರತದ ರಸಾಯನ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಆಚಾರ್ಯ ಪ್ರಫುಲ್ಲ ಚಂದ್ರ ರೇ ಅವರ ವಿಷಯವನ್ನಾಧರಿಸಿ ಈ ವರ್ಷದ ಮಂಥನವನ್ನು ಆಯೋಜನೆ ಮಾಡಲಾಗಿದೆ.
ಯಾರೆಲ್ಲಾ ಭಾಗವಹಿಸಬಹುದು?
ಭಾರತದ ಅತಿ ದೊಡ್ಡ ವಿಜ್ಞಾನ ಪ್ರತಿಭಾ ಶೋಧನಾ ಸ್ಪರ್ಧೆ ವಿದ್ಯಾರ್ಥಿ ವಿಗ್ಯಾನ್ ಮಂಥನವು ಸಿಬಿಎಸ್ಇ, ಐಸಿಎಸ್ಇ ಮತ್ತು ಸ್ಟೇಟ್ ಬೋರ್ಡ್ನ 6ನೇ ತರಗತಿಯಿಂದ 11 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ಮುಕ್ತವಾಗಿದೆ.
ಪಠ್ಯಕ್ರಮ ಹೇಗಿರಲಿದೆ?
ಎನ್ಸಿಇಆರ್ಟಿಯ ವಿಜ್ಞಾನ ಮತ್ತು ಗಣಿತದ ಪಠ್ಯಪುಸ್ತಕಗಳ ವಿಷಯಗಳನ್ನು ಸ್ಪರ್ಧೆ ಒಳಗೊಂಡಿರಲಿದೆ. ಇದನ್ನು ಹೊರತುಪಡಿಸಿ, ವಿಜ್ಞಾನ, ತರ್ಕ ಮತ್ತು ತಾರ್ಕಿಕತೆಯನ್ನು ಒಳಗೊಂಡಿರಲಿದೆ.
ಅಲ್ಲದೆ, ಆಚಾರ್ಯ ಪ್ರಫುಲ್ಲಚಂದ್ರ ರೇ ಅವರ ಜೀವನಗಾಥೆ ಮತ್ತು ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ವಿಜ್ಞಾನದ ಬಗೆಗಿನ ಪ್ರಶ್ನೆಗಳು ರಸಪ್ರಶ್ನೆಯಲ್ಲಿ ಇರಲಿದೆ.
ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಪಂಜಾಬಿ, ಬಂಗಾಲಿ, ಒಡಿಯ ಮತ್ತು ಅಸ್ಸಾಮಿ ಭಾಷೆಯಲ್ಲಿ ಪರೀಕ್ಷೆಯನ್ನು ಆಯೋಜನೆ ಮಾಡಲಾಗುತ್ತದೆ.
ಪರೀಕ್ಷೆಯ ವಿಧಾನ ಹೇಗಿರಲಿದೆ?
ಶಾಲಾ ಹಂತದಲ್ಲಿ ಒಂದುವರೆ ಗಂಟೆ ಅವಧಿಯ ಕೇವಲ ಒಂದು ಪರೀಕ್ಷೆ ಇರುತ್ತದೆ. ಇದರಲ್ಲಿ ನೂರು ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. ಒಂದೊಂದು ಪ್ರಶ್ನೆಗಳಿಗೆ ತಲಾ ಒಂದೊಂದು ಅಂಕ ಇರುತ್ತದೆ.
ಪರೀಕ್ಷೆ ಎರಡು ವಿಭಾಗಗಳನ್ನು ಹೊಂದಿರಲಿದೆ
ವಿಭಾಗ ‘ಎ’ನಲ್ಲಿ, ವಿಜ್ಞಾನಕ್ಕೆ ಭಾರತದ ಕೊಡುಗೆ, ಆಚಾರ್ಯ ಪ್ರಫುಲ್ಲಚಂದ್ರ ರೇ ಅವರ ಜೀವನಗಾಥೆ, ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ 40 ಪ್ರಶ್ನೆಗಳಿಗೆ ಅಧ್ಯಯನ ವಿಷಯಗಳನ್ನು ವಿಜ್ಞಾನ ಭಾರತ ಒದಗಿಸುತ್ತದೆ.
ವಿಭಾಗ ‘ಬಿ’ಯು ಎನ್ಸಿಆರ್ಟಿಸಿ ಪಠ್ಯಕ್ರಮ ಮತ್ತು ತರ್ಕ ಮತ್ತು ತಾರ್ಕಿಕತೆ (ಮುಕ್ತ ಮೂಲ) ಗೆ ಸಂಬಂಧಿಸಿದ ಅರವತ್ತು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಜೂನಿಯರ್ ಗ್ರೂಪ್ (ತರಗತಿ VI ರಿಂದ VIIವರೆಗೆ) ಮತ್ತು ಸೀನಿಯರ್ ಗ್ರೂಪ್ (IXರಿಂದ XIವರೆಗೆ)ಗೆ ಪ್ರತ್ಯೇಕ ಪರೀಕ್ಷೆಗಳನ್ನು ಆಯೋಜನೆ ಮಾಡಲಾಗುತ್ತದೆ.
ಯಾವಾಗ ಆಯೋಜನೆಗೊಳ್ಳಲಿದೆ?
2021 ರ ನವೆಂಬರ್ 30 ಮತ್ತು 2021 ರ ಡಿಸೆಂಬರ್ 5
ವಿಜೇತರಿಗೆ ಏನು ಸಿಗಲಿದೆ?
ವಿಜೇತರು ನ್ಯಾಷನಲ್ ಸೈನ್ಸ್ ಲ್ಯಾಬೋರೇಟರಿ & ಸೆಂಟರ್ಗೆ ಭೇಟಿ ನೀಡುವ ಅವಕಾಶವನ್ನು ಪಡೆಯಲಿದ್ದಾರೆ. ಮಾತ್ರವಲ್ಲದೆ ದೇಶದ ಪ್ರತಿಷ್ಠಿತ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅವಕಾಶವನ್ನೂ ಪಡೆಯಲಿದ್ದಾರೆ.
For registration Click : 👇
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.