ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು “ಶಿಕ್ಷಕ ಪರ್ವ” ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿದರು.
ಪ್ರಧಾನಿ ಮೋದಿ ಭಾರತೀಯ ಸಂಜ್ಞಾಭಾಷಾ ಶಬ್ದಕೋಶವನ್ನು (ಶ್ರವಣದೋಷವುಳ್ಳವರಿಗೆ ಯುನಿವರ್ಸಲ್ ಡಿಸೈನ್ ಆಫ್ ಲರ್ನಿಂಗ್ಗೆ ಅನುಗುಣವಾಗಿ ಆಡಿಯೋ ಮತ್ತು ಪಠ್ಯ ಎಂಬೆಡೆಡ್ ಸೈನ್ ಲಾಂಗ್ವೇಜ್ ವೀಡಿಯೋ ಬಿಡುಗಡೆ ) ಮಾತನಾಡುವ ಪುಸ್ತಕಗಳು (ದೃಷ್ಟಿಹೀನರಿಗೆ ಆಡಿಯೋಬುಕ್ಸ್), ಸಿಬಿಎಸ್ಇಯ ಶಾಲಾ ಗುಣಮಟ್ಟದ ಭರವಸೆ ಮತ್ತು ಮೌಲ್ಯಮಾಪನ ಚೌಕಟ್ಟನ್ನು ಬಿಡುಗಡೆ ಮಾಡಿದರು. NIPUN ಭಾರತ್ ಮತ್ತು ವಿದ್ಯಾಂಜಲಿ ಪೋರ್ಟಲ್ಗಾಗಿ ಶಿಕ್ಷಕರ ತರಬೇತಿ ಕಾರ್ಯಕ್ರಮ NISHTHA (ಶಾಲಾ ಸ್ವಯಂಸೇವಕರು/ ದಾನಿಗಳು/ ಶಾಲಾ ಅಭಿವೃದ್ಧಿಗೆ CSR ಕೊಡುಗೆದಾರರಿಗೆ ಅನುಕೂಲ ಮಾಡಿಕೊಡಲು) ಆರಂಭಿಸಿದರು.
‘ಶಿಕ್ಷಕ ಪರ್ವ -2021’ ನ ಥೀಮ್ “ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು: ಭಾರತದ ಶಾಲೆಗಳಿಂದ ಕಲಿಕೆಗಳು” ಎಂಬುದಾಗಿದೆ. ಇದು ಎಲ್ಲಾ ಹಂತಗಳಲ್ಲಿ ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ವಿನೂತನ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ಅಲ್ಲದೇ ದೇಶಾದ್ಯಂತ ಶಾಲೆಗಳಲ್ಲಿ ಗುಣಮಟ್ಟ, ಅಂತರ್ಗತ ಅಭ್ಯಾಸಗಳು ಮತ್ತು ಸಮರ್ಥ್ಯವನ್ನು ಸುಧಾರಿಸುತ್ತದೆ.
ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಶಿಕ್ಷಣ ರಾಜ್ಯ ಸಚಿವರಾದ ಜಿತಿನ್ ಪ್ರಸಾದ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.