ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಪರಿವಾರ ಸಂಘಟನೆಗಳ ಹೆಸರನ್ನು ಕೇಳಿದರೆ ಸಾಕು ಪ್ರಪಂಚದಾದ್ಯಂತ ಅದೆಷ್ಟೋ ಜನರಿಗೆ ಉರಿ ಹತ್ತಿಬಿಡುತ್ತದೆ.!
ಪ್ರಪಂಚದಲ್ಲಿ ಶಕ್ತಿಗೇ ಪುರಸ್ಕಾರ ಎಂಬ ಸನಾತನ ಸತ್ಯವನ್ನು ಸಂಘವು ಕಂಡುಕೊಂಡಿದೆ. ಅದಕ್ಕಾಗಿ ಶಕ್ತಿಯ ಆಧಾರದ ಮೇಲೆಯೇ ಸಂಘಟನೆಯನ್ನು ಸಂಘವು ಕಟ್ಟಿ ಬೆಳೆಸಿದೆ. ಸಂಘದ್ದು ಯಾವುದೋ ಒಂದು ಹೊಸ ಕೆಲಸವಲ್ಲ. ಇಡೀ ಸಮಾಜ ಮರೆತಿರುವಂತಹ ಸಂಗತಿಯನ್ನೇ ಇನ್ನೊಮ್ಮೆ ನೆನಪಿಸುವ ಕೆಲಸ ಸಂಘದ್ದಾಗಿದೆ. ಹಾಗಾದರೆ ನಾವು ಮರೆತಿರುವ ಸಂಗತಿಗಳಾವುವು ಎಂದು ನೋಡುವುದಾದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು, ನಮ್ಮ ಆಚರಣೆಗಳು, ನಮ್ಮ ಶಿಕ್ಷಣ ಪದ್ಧತಿಗಳು. ಸಂಘವು ಸಮಾಜ ಮರೆತಿರುವ ಈ ಎಲ್ಲವನ್ನೂ ಹಿಂದೂ ಸಮಾಜಕ್ಕೆ ನೆನಪಿಸುವ ಕಾರ್ಯ ಮಾಡುತ್ತಲೇ ಇದೆ. ಎಲ್ಲಿ ಹಿಂದೂ ಧರ್ಮ ಸರ್ವ ವ್ಯಾಪಿಯಾಗುತ್ತದೋ ಎಂಬ ಭಯದಿಂದ ಸಂಘದ ಮೇಲೆ ಉರಿಯಷ್ಟೇ.!
ಸಂಘ ಸ್ಥಾಪನೆಯಾದಗಿನಿಂದಲೂ ಇಲ್ಲಿಯವರೆಗೆ ಸೇವೆ ಮಾಡುತ್ತಾ, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ. ದೇಶಕ್ಕೆ ರಾಷ್ಟ್ರಪತಿ, ಪ್ರಧಾನಿಗಳನ್ನು ನೀಡಿದೆ. 90 ವರ್ಷದಿಂದಲೂ ಸಹ ಒಂದು ಚೂರು ಅಳುಕದೆ, ಯಾವ ಬಲ ಪ್ರಯೋಗಕ್ಕೂ ಬಗ್ಗದೇ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದೆ. 90 ವರ್ಷಗಳಿಂದ ಒಂದು ಸಂಘಟನೆಯಲ್ಲಿ ಒಡಕು ಮೂಡದೇ, ಎರಡು ಮೂರು ಸಂಘಟನೆಗಳಾಗಿ ಮಾರ್ಪಡದೇ ಒಂದೇ ಸಂಘಟನೆಯಾಗಿ ದೇಶಾದ್ಯಂತ ಗಟ್ಟಿಯಾಗಿ ನಿಂತಿರುವುದನ್ನು ನೋಡಿ ಸಂಘದ ಮೇಲೆ ಉರಿ.!
ರಾಷ್ಟ್ರಾದ್ಯಂತ ಸ್ವಯಂಸೇವಕರು ಪ್ರತಿನಿತ್ಯ ಶಾಖೆಗಳನ್ನು ನಡೆಸುತ್ತಾರೆ, 5 ವರ್ಷದ ಸಣ್ಣ ಬಾಲಕನಿಂದ ಹಿರಿಯ ಜೀವದವರೆಗೂ ನಿತ್ಯ ಶಾಖೆಗಳಿಗೆ ಬಂದು ಆಟವನ್ನ ಆಡಿ, ಒಂದಿಷ್ಟು ಸದ್ವಿಚಾರಗಳನ್ನು ತಿಳಿದುಕೊಂಡು ಪ್ರಾರ್ಥನೆಯನ್ನು ಮಾಡುತ್ತಾರೆ. ಲಕ್ಷಾಂತರ ಜನರು ದೇಶಾದ್ಯಂತ ದಿನ ನಿತ್ಯ ದ ಶಾಖೆಗೆ ತೆರಳುತ್ತಾರೆ. ಯಾವುದೇ ಹಣ ಆಮಿಷಗಳಿಗೆ ಬಲಿಯಾಗದೇ ದಿನ ನಿತ್ಯದ ಶಾಖೆಗೆ ಸಣ್ಣ ಸಣ್ಣ ಮಕ್ಕಳು ತೆರಳುವುದು ನೋಡಿ ಅವರಿಗೆ ಉರಿ.!
ಯಾವುದೇ ಪ್ರಕೃತಿ ವಿಕೋಪಗಳು ನಡೆಯಲಿ, ಯಾವುದೇ ಅಹಿತಕರ ಘಟನೆಗಳು ನಡೆಯಲಿ, ಅಲ್ಲಿ ಸಂಘದ ಸ್ವಯಂಸೇವಕರು ಹಾಜರಾಗಿ ಸೇವಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಕೊರೊನಾ ಸಾಂಕ್ರಾಮಿಕದವರೆಗೂ ನಾವು ಸಂಘದ ಸೇವಾ ಕಾರ್ಯಗಳ ಬಗ್ಗೆ ನೋಡಿದ್ದೇವೆ. ಸಂಘವು ಕೇವಲ ಸ್ವಯಂಸೇವಕರಿಗಷ್ಟೇ ಇಲ್ಲ, ಸಂಘದ ಹೊರಗಿರುವ ಹಿಂದೂ ಜನರಿಗಾಗಿ ಇದೆ. ಯಾವುದೇ ಫಲಾಪೇಕ್ಷೆ ಇಲ್ಲದೇ, ಯಾವುದೇ ಪ್ರಚಾರ, ಆಮಿಷಗಳಿಲ್ಲದೇ ನನ್ನ ಶಕ್ತಿ ನನ್ನ ಧರ್ಮಕ್ಕೆ, ನನ್ನ ರಾಷ್ಟ್ರಕ್ಕೆ ಮೀಸಲು ಎಂಬ ಸ್ವಯಂಸೇವಕರ ಭಾವನೆಯನ್ನು ನೋಡಿ ಅವರುಗಳಿಗೆ ಎಲ್ಲಿಲ್ಲದ ಉರಿ.!
ಸಂಘದ ಶಾಖೆಗಳಲ್ಲಿ, ಸಾಂಘಿಕ್ಗಳಲ್ಲಿ, ಶಿಬಿರಗಳಲ್ಲಿ ಭಾಗವಹಿಸುವ ಸ್ವಯಂಸೇವಕ ನೀನು ಯಾವ ಜಾತಿಯವನು ಎಂದು ಅಪ್ಪಿ ತಪ್ಪಿಯೂ ಕೇಳುವುದಿಲ್ಲ. ಎಲ್ಲರೂ ಒಟ್ಟಿಗೆ ಆಟ ಆಡುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ, ಒಟ್ಟಿಗೆ ಮಲಗುತ್ತಾರೆ ಅಲ್ಲಿ ಯಾವುದೇ ಜಾತಿಗೆ ಪ್ರಾಶಸ್ತ್ಯವಿಲ್ಲ. ನಾವೆಲ್ಲಾ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಸ್ವಯಂಸೇವಕನಲ್ಲಿಯೂ ಆಳವಾಗಿ ಬೇರೂರಿರುತ್ತದೆ. ಯಾವುದೇ ಜಾತಿಯನ್ನು ಲೆಕ್ಕಿಸದೇ ಜಗಳವಾಡದೇ ಹೇಗೆ ಎಲ್ಲಾ ಒಟ್ಟಿಗೆ ಸೇರುತ್ತಾರೆ ಎಂದು ಯೋಚಿಸುತ್ತಾ, ಸಂಘದ ಕಾರ್ಯಗಳನ್ನು ನೋಡಿ ನೋಡಿ ಅವರಿಗೆ ಉರಿ.!
ಸಮಸ್ತ ಹಿಂದು ಜನತೆಯ ಸುಖವೇ ನನ್ನ ಹಾಗೂ ನನ್ನ ಕುಟುಂಬದ ಸುಖ, ಹಿಂದು ಜನತೆಯ ಮೇಲೆರಗಿ ಬರುವ ವಿಪತ್ತೇ ನಮ್ಮೆಲ್ಲರಿಗೂ ಘೋರ ಗಂಡಾಂತರ, ಹಿಂದು ಜನತೆಯ ಅಪಮಾನವೇ ನಮ್ಮೆಲ್ಲರ ಅಪಮಾನ ಎಂಬ ನಿಷ್ಟೆಯೊಂದಿಗೆ ಸಂಘ ಉಸಿರಾಡುತ್ತಿದೆ. ತನ್ನ ದೇಶ, ತನ್ನ ದೇಶ ಬಾಂಧವರ ವಿನಃ ಮತ್ತಾವುದರ ಮೋಹ ಇಲ್ಲವೋ, ತನ್ನ ಧರ್ಮ ಹಾಗೂ ಧರ್ಮ ಕಾರ್ಯದ ವಿನಃ ಇನ್ನಾವ ಕಾರ್ಯವೂ ಮುಖ್ಯವಲ್ಲ ಎಂಬ ಸಂದೇಶವನ್ನು ಪ್ರತಿಯೋರ್ವ ಸ್ವಯಂಸೇವಕನೂ ಕೂಡಾ ನೀಡುತ್ತಾನೆ. ಇಂತಹ ರಾಷ್ಟ್ರಹಿತದ ಸಂದೇಶವನ್ನು ಕೇಳಲಾಗದೆ ಅವರಿಗೆ ಉರಿ.!
ಪ.ಪೂ. ಡಾ ಜಿ ಹೆಡಗೇವಾರ್ ರವರು ಹೇಳಿದಂತೆ ಸಂಘ ಒಂದು ವ್ಯಾಯಾಮ ಶಾಲೆಯಲ್ಲ, ಸೈನಿಕ ಶಾಲೆಯೂ ಅಲ್ಲ. ಅದೊಂದು ಉಕ್ಕಿಗಿಂತಲೂ ಕಠೋರವಾಗಿರುವ ಅಭೇದ್ಯ ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯಾಗಿದೆ. ಎಂದೆಂದಿಗೂ ಸಂಘದ ಉದ್ದೇಶ ಸ್ವಧರ್ಮ ಹಾಗೂ ಸ್ವರಾಷ್ಟ್ರಗಳ ರಕ್ಷಣೆಯೇ ಎಂಬುದನ್ನು ಮರೆಯಬಾರದು. ಹಿಂದೂಸ್ಥಾನ ಹಿಂದೂಗಳದ್ದೇ ಹೊರತು ಇನ್ಯಾರದ್ದೂ ಅಲ್ಲ. ಬೇರೆಯ ಜನರು ಒಳ್ಳೆಯ ರೀತಿಯಲ್ಲಿ ಈ ದೇಶದಲ್ಲಿ ಇರುವುದಾದರೆ, ಅವಶ್ಯಕವಾಗಿ ಇರಲಿ. ಹಿಂದೂ ಸಮಾಜ ಅವರಿಗೆ ಎಂದೂ ತೊಂದರೆ ಮಾಡುವುದಿಲ್ಲ. ನಮ್ಮ ಅನ್ನ ತಿಂದು ನಮಗೇ ಕುತಂತ್ರ ಮಾಡಲು ಬಯಸಿದರೆ ಎಂದೂ ಹಿಂದೂ ಸಮಾಜ ಸುಮ್ಮನೆ ಕೂರುವುದಿಲ್ಲ ಹಾಗೂ ಕೂತಿಲ್ಲ ಎಂಬುದಕ್ಕೆ ಹಿಂದೂ ಸಮಾಜವೇ ಸಾಕ್ಷಿ.!
ನೀವು ಇವುಗಳನ್ನು ನೋಡಿಕೊಂಡು ಉರಿದುರಿದು ಬೀಳಿ, ನಮಗ್ಯಾವ ತೊಂದರೆಯೂ ಇಲ್ಲ.! ನೀವು ಉರಿದಷ್ಟು ನೀವೇ ಸುಡುತ್ತೀರಿ, ಹೊರತು ನಾವಲ್ಲ.!
✍️ ನಿವಣೆ ಕಲಾನಾಥ್ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.