ನವದೆಹಲಿ: ಭಾರತೀಯ ರೈಲ್ವೆಯು ಮಹಿಳೆಯರ ಸುರಕ್ಷತೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಪೂರ್ವ ರೈಲ್ವೆ ಇಲಾಖೆಯು ರೈಲ್ವೆ ಮೊಬೈಲ್ ಟ್ರ್ಯಾಕ್ ಪ್ರತಿಕ್ರಿಯೆ ಮತ್ತು ನೆರವು (Railway Mobile Instant Tracking Response and Assistance) ‘ ಆರ್-ಮಿತ್ರ’ನ್ನು ಜಾರಿಗೆ ತಂದಿದೆ.
ದಿನದಿಂದ ದಿನಕ್ಕೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಪರಾಧಗಳನ್ನು ತಡೆಗಟ್ಟಲು ಈ ಹೊಸ ಆ್ಯಪ್ನ್ನು ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಆರ್-ಮಿತ್ರ ಆಪ್ನ್ನು ಡೌನ್ಲೋಡ್ ಮಾಡಿಕೊಂಡಲ್ಲಿ ಮಹಿಳೆಯು ಯಾವುದೇ ತೊಂದರೆಗೆ ಸಿಲುಕಿದಲ್ಲಿ 56161ಕ್ಕೆ ಸಂದೇಶವೊಂದನ್ನು ಕಳುಹಿಸಬಹುದು. ಇದು ಜಿಪಿಎಸ್ ಹಾಗೂ ಜಿಪಿಆರ್ಎಸ್ ಸಹಾಯದಿಂದ ಅವರಿದ್ದ ಸ್ಥಳದ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಈ ಆ್ಯಪ್ ಆನ್ಲೈನ್ ಅಥವಾ ಆಫ್ಲೈನ್ ಎರಡೂ ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.