ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ.
ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಆತ ತನ್ನ ಮನೆಯ ಸಮೀಪ ಹಾದುಹೋಗುವ ರೈಲ್ವೆ ಮಾರ್ಗದ ಬಳಿ ಆಟವಾಡುತ್ತಿದ್ದಾಗ ಕಣ್ಣು ರೈಲ್ವೆ ಹಳಿಗಳ ನಡುವೆ ಉಂಟಾದ ಬಿರುಕಿನ ಕಡೆಗೆ ಬಿದ್ದವು. ಕೂಡಲೇ ತನ್ನ ಮನೆಯ ಕಡೆಗೆ ಓಡಿ ಹೋಗಿ ತನ್ನ ತಾಯಿ ಸೋನಾಲಿ ನಾಸ್ಕರ್ ಗೆ ಈ ವಿಷಯದ ಬಗ್ಗೆ ತಿಳಿಸಿದನು. ಆಗ ಸೋನಾಲಿ ತನ್ನ ಮನೆಯ ಬಳಿ ಇರುವ ಜನರ ಬಳಿ ಕೆಂಪು ಬಟ್ಟೆಯನ್ನ ತೆಗೆದುಕೊಂಡು ರೈಲ್ವೇ ಟ್ರ್ಯಾಕ್ ಹತ್ತಿರ ತಲುಪಿದಳು.
ಆ ಸಂದರ್ಭದಲ್ಲಿ ಸೀಲ್ದಾಹಗಾಮಿ-ಬಿದ್ಯಾಧರಪುರ ಕ್ಯಾನಿಂಗ್ ಸ್ಟಾಫ್ ವಿಶೇಷ ರೈಲು ಆ ಹಳಿಯಲ್ಲಿ ಬರುತ್ತಿತ್ತು. ಕೂಡಲೇ ರೈಲನ್ನು ನೋಡಿ ಅಲ್ಲಿದ್ದ ಜನರು ರೈಲನ್ನು ನಿಲ್ಲಿಸಲು ತಮ್ಮ ಕೈಯಲ್ಲಿದ್ದ ಕೆಂಪು ಬಟ್ಟೆಯನ್ನು ಹಾರಿಸಲಾರಂಭಿಸಿದರು. ದೂರದಿಂದ ಜನರು ಬೀಸುತ್ತಿದ್ದ ಕೆಂಪು ಬಟ್ಟೆ ಕಂಡ ರೈಲು ಚಾಲಕ ರೈಲು ನಿಲ್ಲಿಸುತ್ತಾನೆ. ಬಳಿಕ ವಿದ್ಯಾಧರಪುರ ಬುಕಿಂಗ್ ಸುಪರ್ವೈಸರ್ ರನ್ನ ಸಂಪರ್ಕಿಸಲಾಯಿತು. ಆಗ ಎಂಜಿನಿಯರಿಂಗ್ ವಿಭಾಗದ ಉದ್ಯೋಗಿಗಳು ಆಗಮಿಸಿ ಹಳಿಯನ್ನು ಸರಿಪಡಿಸಿದರು. 40 ನಿಮಿಷಗಳ ಹಳಿ ದುರಸ್ತಿಯ ಮಾಡಿದ ನಂತರ ರೈಲನ್ನು ಓಡಿಸಲಾಯಿತು.
ಬಳಿಕ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ ಕೇಂದ್ರ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಹಾಗೂ ಪ್ರಧಾನಿ ಮೋದಿ, ಮಗುವನ್ನು ಅಭಿನಂದಿಸಿ ಮತ್ತು ಹಾರೈಸಿದ್ದಾರೆ.
The sense of responsibility and presence of mind of a 7 year old boy named Deep Naskar, saved the lives of hundreds of people by stopping the Canning Local at Bidyadharpur.
I am thankful to him and wish him best in his future endeavors. pic.twitter.com/k8A1B1kidS— Dr. Subhas Sarkar (@Drsubhassarkar) August 5, 2021
ಕೇಂದ್ರ ರಾಜ್ಯ ಸಚಿವ ಸುಭಾಷ್ ಸರ್ಕಾರ್, ಬಿದ್ಯಾಧರಪುರದಲ್ಲಿ 7 ವರ್ಷದ ಬಾಲಕ ದೀಪ್ ನಾಸ್ಕರ್ನ ಜವಾಬ್ದಾರಿ ಮತ್ತು ಆತನ ಸಮಯಪ್ರಜ್ಞೆಯಿಂದಾಗಿ ಕ್ಯಾನಿಂಗ್ ಲೋಕಲ್ ರೈಲನ್ನು ತಡೆದು ನೂರಾರು ಜನರ ಜೀವ ಉಳಿಯಿತು. ನಾನು ಬಾಲಕನಿಗೆ ಆಭಾರಿಯಾಗಿದ್ದೇನೆ. ಆತನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಪುಟ್ಟ ಬಾಲಕನ ಈ ಸಮಯ ಪ್ರಜ್ಞೆ ಹಾಗೂ ಸಾಹಸವನ್ನ ಪ್ರಧಾನಿ ಮೋದಿ ಕೂಡ ಕೊಂಡಾಡಿದ್ದು ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ರೀತಿ ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆ ಮೆರೆದು ಮಾದರಿಯಾಗಿದ್ದಾನೆ.
✍️ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.