ದಿಸ್ಪುರ್: ಅಸ್ಸಾಂ ಬಜೆಟ್ ಅಧಿವೇಶನದ ಮೊದಲ ದಿನದಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಅಸ್ಸಾಂ ಗೋ ಸಂರಕ್ಷಣಾ ಮಸೂದೆ 2021 ನ್ನು ಮಂಡಿಸಿದರು.
ಅದರನ್ವಯ ಹಿಂದೂ, ಜೈನ, ಸಿಖ್ಖರು ಸೇರಿದಂತೆ ಇನ್ನಿತರ ಗೋಮಾಂಸ ತಿನ್ನದ ಸಮುದಾಯಗಳು ವಾಸಿಸುವ ಪ್ರದೇಶದಲ್ಲಿ ಗೋಮಾಂಸ ಮಾರಾಟ, ಖರೀದಿ ನಿಷೇಧ ಮಾಡಲು ಪ್ರಸ್ತಾಪಿಸಿದೆ. ಹಾಗೆಯೇ ಯಾವುದೇ ದೇವಾಲಯಗಳ 5 ಕಿಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟವನ್ನು, ಖರೀದಿ ಮಾಡುವುದನ್ನು ನಿಷೇಧ ಮಾಡುವಂತೆ ಈ ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.
ಹಾಗೆಯೇ ಯಾವುದೇ ಗೋ ವಧೆಗಳಂತಹ ಚಟುವಟಿಕೆಗಳಿಗೂ ಪಶುವೈದ್ಯಕೀಯ ಅಧಿಕಾರಿಗಳ ಪ್ರಮಾಣ ಪತ್ರ ಅಗತ್ಯವಾಗಿದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಗೋ ಹತ್ಯೆ ನಡೆಸುವಂತಿಲ್ಲ ಎಂಬುದಾಗಿಯೂ ಮಂಡಿಸಲಾದ ಮಸೂದೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ ಗೋವುಗಳಿಗೆ 14 ವರ್ಷಗಳಾಗುವ ಮೊದಲು ಈ ರೀತಿಯ ಪ್ರಮಾಣಪತ್ರಗಳನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ನೀಡುವಂತಿಲ್ಲ. ಗೋವುಗಳನ್ನು ಸಾಗಿಸಲು ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಅಸ್ಸಾಂ ಕ್ಯಾಟಲ್ ಪ್ರಿಸರ್ವೇಷನ್ ಮಸೂದೆ 1950 ಕ್ಕೆ. ತಿದ್ದುಪಡಿ ಮಾಡಿ, ಅಸ್ಸಾಂ ಕ್ಯಾಟಲ್ ಪ್ರಿಸರ್ವೇಷನ್ ಮಸೂದೆ 2021 ನ್ನು ಮಂಡನೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ರಾಜ್ಯದಲ್ಲಿ ಕಾನೂನು ಬಾಹಿರ ಗೋ ಹತ್ಯೆ, ಅಕ್ರಮ ಸಾಗಾಟ ತಡೆಯುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.