ಲಡಾಖ್: ಪೂರ್ವ ಲಡಾಖ್ನ ಕುಂಗ್ಯಾಮ್ ಗ್ರಾಮದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವರ್ಚುಅಲ್ ಆಗಿ 63 ಸೇತುವೆಗಳನ್ನು ಉದ್ಘಾಟನೆ ಮಾಡಿದ್ದಾರೆ.
ಲೇಹ್- ಲೋಮ ರೋಡ್ ಮೇಲೆ ನಿರ್ಮಾಣ ಮಾಡಲಾಗಿರುವ ಕುಂಜನ್ ಸೇತುವೆ ಸೇರಿದಂತೆ ದೇಶದಾದ್ಯಂತ ಬಿಆರ್ಒ ಸ್ಥಾಪಿಸಿದ 63 ಸೇತುವೆಗಳನ್ನು ರಾಜನಾಥ್ ಅವರು ಉದ್ಘಾಟನೆ ಮಾಡಿದ್ದಾರೆ.
ವರದಿಗಳ ಪ್ರಕಾರ, ಲಡಾಖ್ನ 11, ಜಮ್ಮು-ಕಾಶ್ಮೀರದ 4, ಹಿಮಾಚಲ ಪ್ರದೇಶದ 3, ಉತ್ತರಾಖಂಡದ 6, ಸಿಕ್ಕಿಂನ 8, ಅರುಣಾಚಲ ಪ್ರದೇಶದ 29, ನಾಗಾಲ್ಯಾಂಡ್ ಮತ್ತು ಮಣಿಪುರದ ತಲಾ ಒಂದು ಸೇತುವೆಗಳನ್ನು ಇಂದು ಉದ್ಘಾಟನೆ ಮಾಡಲಾಗಿದೆ. ಈ ಸೇತುವೆಗಳನ್ನು ನಿರ್ಮಾಣ ಮಾಡಲು ಬಿಆರ್ಒ ಆಧುನಿಕ ತಂತ್ರಜ್ಞಾನಗಳನ್ನು ಬಳಸಿದೆ ಎಂದು ಮೂಲಗಳು ತಿಳಿಸಿವೆ.
ಇವುಗಳು ಕ್ಲಾಸ್-70 ಸೇತುವೆಗಳಾಗಿದ್ದು, ಟ್ಯಾಂಕ್ ಮತ್ತು ಇತರ ಘನ ವಾಹನಗಳನ್ನು ತಡೆಯುವ ಶಕ್ತಿ ಹೊಂದಿವೆ. ಯೋಧರಿಗೆ ಮಾತ್ರವಲ್ಲದೆ ಸ್ಥಳೀಯ ಜನರಿಗೂ ಕೂಡ ಈ ಸೇತುವೆಗಳು ಕಾರ್ಯತಾಂತ್ರಿಕ ಮತ್ತು ಕ್ಷಿಪ್ರ ಚಲನೆಗೆ ಅವಕಾಶ ಮಾಡಿಕೊಡಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.