ಶ್ರೀನಗರ: ಜಮ್ಮುವಿನ ವಾಯುಸೇನೆ ನೆಲೆಯಲ್ಲಿ ಅವಳಿ ಸ್ಫೋಟಗಳು ನಡೆದ ಬೆನ್ನಲ್ಲೇ ಮತ್ತೆರಡು ಡ್ರೋನ್ಗಳು ಈ ಭಾಗದಲ್ಲಿ ಪತ್ತೆಯಾಗಿವೆ. ಈ ಡ್ರೋನ್ಗಳನ್ನು ಗುರಿಯಾಗಿಸಿ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 27-28ರ ಮಧ್ಯರಾತ್ರಿ ರತ್ನುಚಕ್-ಕಲುಚಕ್ ಮಿಲಿಟರಿ ಪ್ರದೇಶದ ಆಗಸದಲ್ಲಿ ಭಾರತೀಯ ಸೇನೆಯು ಎರಡು ಅನುಮಾನಸ್ಪದ ಡ್ರೋನ್ಗಳನ್ನು ಪತ್ತೆ ಮಾಡಿದೆ ಎಂದು ಮೂಲಗಳು ವರದಿ ಮಾಡಿವೆ.
ಡ್ರೋನ್ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೈಅಲರ್ಟ್ ಘೋಷಿಸಲಾಗಿತ್ತು, ಕ್ಷಿಪ್ರ ಕಾರ್ಯಾಚರಣೆ ತಂಡಗಳು ತಕ್ಷಣವೇ ಗುಂಡಿನ ದಾಳಿ ನಡೆಸಿದವು. ಈ ಸಂದರ್ಭದಲ್ಲಿ ಡ್ರೋನ್ ಗಳು ಕಣ್ಮರೆಯಾದವು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ವಹಿಸಲಾಗಿದೆ.
ನಿನ್ನೆ ಜಮ್ಮುವಿನ ವಾಯುಸೇನಾ ನೆಲೆಯಲ್ಲಿ ಎರಡು ಸ್ಫೋಟಗಳು ಸಂಭವಿಸಿತ್ತು, ಡ್ರೋನ್ ಗಳನ್ನು ಬಳಸಿ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.