ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ mYoga ಆ್ಯಪ್ ಅನ್ನು ಘೋಷಿಸಿದ್ದು, ಇದು ವಿಶ್ವದಾದ್ಯಂತ ಅನೇಕ ಭಾಷೆಗಳಲ್ಲು ಲಭ್ಯವಾಗಲಿದೆ.
“ಡಬ್ಲ್ಯುಎಚ್ಒ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ನಾವು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುವ mYoga ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದೇವೆ. ಇದು ನಮ್ಮ ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯವಾಕ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ, ”ಎಂದು ಅವರು ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನದ ಸಮ್ಮಿಲನಕ್ಕೆ mYoga ಆ್ಯಪ್ ಅತ್ಯುತ್ತಮ ಉದಾಹರಣೆ ಎಂದು ಮೋದಿ ಬಣ್ಣಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ಅಪ್ಲಿಕೇಶನ್ ಅನ್ನು ವೈಜ್ಞಾನಿಕ ವಿಮರ್ಶೆ ಮತ್ತು ವ್ಯಾಪಕವಾದ ಅಂತರರಾಷ್ಟ್ರೀಯ ತಜ್ಞರ ಸಮಾಲೋಚನೆ ಪ್ರಕ್ರಿಯೆಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ ಮತ್ತು ಫ್ರೆಂಚ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ, ಮುಂಬರುವ ತಿಂಗಳುಗಳಲ್ಲಿ ಇತರ ಭಾಷೆಗಳಲ್ಲಿ ಇದು ಲಭ್ಯವಾಗಲಿದೆ. ಅಪ್ಲಿಕೇಶನ್ ಸುರಕ್ಷಿತವಾಗಿದೆ, ಬಳಕೆದಾರರಿಂದ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಮತ್ತು 12-65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ದೈನಂದಿನ ಯೋಗ ಒಡನಾಡಿಯಾಗಲಿದೆ.
ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗವು ಜಾಗತಿಕವಾಗಿ ‘ಭರವಸೆಯ ಕಿರಣ’ವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
“ಯೋಗವು ನಮಗೆ ಒತ್ತಡದಿಂದ ಬಲಿಷ್ಠತೆಯತ್ತ ಮತ್ತು ನಕಾರಾತ್ಮಕತೆಯಿಂದ ಕ್ರೀಯಾಶೀಲತೆಯತ್ತ ದಾರಿ ತೋರಿಸುತ್ತದೆ. ಯೋಗವು ಖಿನ್ನತೆಯಿಂದ ಉತ್ಸಾಹ ಮತ್ತು ಆನಂದದೆಡೆಗೆ ಕೊಂಡೊಯ್ಯುತ್ತದೆ. ಮಾನವತೆಗೆ ಬೆದರಿಕೆಗಳು ಎದುರಾದಾಗ ಯೋಗವು ನಮಗೆ ಸಮಗ್ರ ಆರೋಗ್ಯದೆಡೆಗೆ ಮಾರ್ಗವನ್ನು ತೋರಿಸುತ್ತದೆ. ಯೋಗವು ನಮಗೆ ಸಂತೋಷದಾಯಕ ಜೀವನ ವಿಧಾನವನ್ನು ನೀಡುತ್ತದೆ. ಯೋಗವು ತನ್ನ ರೋಗ ತಡೆಗಟ್ಟುವಿಕೆಯ ಪಾತ್ರವನ್ನು ಮುಂದುವರೆಸುತ್ತದೆ, ಜೊತೆಗೆ ಜನರ ಆರೋಗ್ಯ ರಕ್ಷಣೆಯಲ್ಲಿ ಉತ್ತೇಜಕ ಪಾತ್ರವನ್ನು ವಹಿಸುತ್ತದೆ ಎಂಬ ಭರವಸೆ ನನಗಿದೆ” ಎಂದಿದ್ದಾರೆ.
Addressing the #YogaDay programme. https://t.co/tHrldDlX5c
— Narendra Modi (@narendramodi) June 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.