ನವದೆಹಲಿ: ವೆಂಟಿಲೇಟರ್ಗಳ ಅಗತ್ಯವಿರುವ ಕೊರೋನಾ ಸೋಂಕಿತರನ್ನು ಆರಂಭದಲ್ಲೇ ಪತ್ತೆ ಮಾಡಲು ‘ಕೋವಿಡ್ ಸಿವಿಯಾರಿಟಿ ಸ್ಕೋರ್’ ಎಂಬ ತಂತ್ರಜ್ಞಾನ ವೃದ್ಧಿ ಮಾಡುತ್ತಿರುವುದಾಗಿ ಸರ್ಕಾರ ತಿಳಿಸಿದೆ.
ಈ ಹೊಸ ತಂತ್ರಜ್ಞಾನವು ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ನೆರವಿನ ಅಗತ್ಯ ಹೊಂದಿರುವ ರೋಗಿಗಳನ್ನು ಗುರುತಿಸುವಂತಹ ಪ್ಯಾರಾಮೀಟರ್ಗಳನ್ನು ಒಳಗೊಂಡಿದೆ. ಈ ತಂತ್ರಾಂಶದಿಂದ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ಸಾಧ್ಯವಾಗಲಿದೆ. ಜೊತೆಗೆ ರೋಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದಕ್ಕೂ ಪರಿಹಾರವಾಗಲಿದೆ.
ಈ ತಂತ್ರಜ್ಞಾನ ತೀವ್ರವಾಗಿ ಆರೈಕೆಯ ಅಗತ್ಯವಿಲ್ಲದ ರೋಗಿಗಳಿಗೆ ಆಸ್ಪತ್ರೆಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿಯೂ ಸಹಕರಿಸಲಿದೆ. ಇದರಿಂದ ಹಾಸಿಗೆಗಳ ಕೊರತೆಯೂ ಕಡಿಮೆಯಾಗಲಿದೆ. ಈ ತಂತ್ರಾಂಶ ಕೊರೋನಾ ರೋಗಿಗಳ ಲಕ್ಷಣ, ಚಿಹ್ನೆ, ಪ್ರಮುಖ ಪ್ಯಾರಾಮೀಟರ್ಗಳು, ಪರೀಕ್ಷಾ ವರದಿಗಳು ಮತ್ತು ಇತರೆ ರೋಗಗಳನ್ನು ಸಹ ಅಳೆಯುತ್ತದೆ.
ಈ ಹೊಸ ತಂತ್ರಜ್ಞಾನವನ್ನು ಕೋಲ್ಕತ್ತಾದ ಬಾರಕ್ಪುರದಲ್ಲಿರುವ ಸರ್ಕಾರದ ಕೊರೋನಾ ಆರೈಕೆ ಕೇಂದ್ರ ಮತ್ತು ಉಪನಗರಗಳಲ್ಲಿರುವ ಸಹಾಯಕ ಆರೈಕೆ ಕೇಂದ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.