ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿಯ ಸಂಶೋಧಕರು ‘ವರ್ಚುವಲ್ ವಾಟರ್ ಫ್ಲೋ’ ಎಂಬ ಪ್ರಕ್ರಿಯೆಯ ಮೂಲಕ ನೀರಿನ ಉತ್ತಮ ನಿರ್ವಹಣೆ ಮತ್ತು ಭಾರತದಲ್ಲಿನ ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ವರ್ಚುವಲ್ ವಾಟರ್ (ವಿಡಬ್ಲ್ಯೂ) ಎನ್ನುವುದು ಆಹಾರ ಮತ್ತು ಆಹಾರೇತರ ಸರಕುಗಳು ಮತ್ತು ಸೇವೆಗಳ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ತೊಡಗಿಸಲಾದ ನೀರು. ಉತ್ಪನ್ನ ಅಥವಾ ಸೇವೆಯ ಜೀವನಚಕ್ರದುದ್ದಕ್ಕೂ ಬಳಸಲ್ಪಟ್ಟ ‘ಅದೃಶ್ಯ’ ನೀರು.
ಅಧ್ಯಯನಕ್ಕಾಗಿ, ಸಂಶೋಧಕರು ‘ವರ್ಚುವಲ್ ವಾಟರ್ ಫ್ಲೋ’ ಅನ್ನು ನಿಯಂತ್ರಿಸುವ ಸಾಮಾಜಿಕ-ರಾಜಕೀಯ ಅಂಶಗಳನ್ನು ಅಧ್ಯಯನ ಮಾಡಲು ಪರಿಸರ ಅರ್ಥಶಾಸ್ತ್ರವನ್ನು ಬಳಸಿದ್ದಾರೆ. ನೀರಿನ ಒತ್ತಡದ ದೇಶಗಳು ಜನರಿಗೆ ಆಹಾರ, ಬಟ್ಟೆ ಮತ್ತು ಆಶ್ರಯದಂತಹ ಅಗತ್ಯ ವಸ್ತುಗಳನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು 1990 ರ ದಶಕದಲ್ಲಿ ವರ್ಚುವಲ್ ವಾಟರ್ ಪರಿಕಲ್ಪನೆಯನ್ನು ಮೊದಲು ಆರಂಭಿಸಲಾಯಿತು.
ಐಐಟಿ ಗುವಾಹಟಿಯ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಅನಮಿಕಾ ಬರುವಾ ಮತ್ತು ಸ್ಪೇನ್ನ ಜರಗೋಝ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆಯನ್ನು ನಡೆಸಿದ್ದಾರೆ. ಸಂಶೋಧನೆಯ ಫಲಿತಾಂಶಗಳನ್ನು ಜರ್ನಲ್ ಆಫ್ ಕ್ಲೀನರ್ ಪ್ರೊಡಕ್ಷನ್, ಜರ್ನಲ್ ಆಫ್ ವಾಟರ್ ರಿಸೋರ್ಸಸ್ ರಿಸರ್ಚ್ ಮತ್ತು ಜರ್ನಲ್ ಆಫ್ ವಾಟರ್ ನಲ್ಲಿ ಪ್ರಕಟಿಸಲಾಗಿದೆ.
ಸಂಶೋಧನೆಯ ಬಗ್ಗೆ ವಿವರಿಸಿರುವ ಡಾ. ಬರುವಾ, “ವರ್ಚುವಲ್ ನೀರಿನ ಹರಿವಿನ ಮೌಲ್ಯಮಾಪನವು ನೀರಿನ ಸುರಕ್ಷತೆಗೆ ಕಾರಣವಾಗುವ ಸುಸ್ಥಿರ ಬಳಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ” ಎಂದು ಹೇಳಿದ್ದಾರೆ.
.@IITGuwahati researchers have invented ‘Virtual Water Flow,’ a process that will help in developing better water management policies and solving the issue of water scarcity in India.
All the best!https://t.co/kzZCaTPw7i pic.twitter.com/ceqYBpEUvV— Ministry of Education (@EduMinOfIndia) June 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.