ಕುವೈಟ್: ಕುವೈಟ್ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗಲ್ಫ್ ರಾಷ್ಟ್ರಗಳ ಭಾರತದ ರಾಯಭಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ.
ವಿಮಾನಯಾನ ಪುನರಾರಂಭ, ಕೋವಿಡ್ ಕಾರಣದಿಂದ ಪ್ರತ್ಯೇಕಗೊಂಡ ಕುಟುಂಬಗಳನ್ನು ಮತ್ತೆ ಒಟ್ಟುಗೂಡಿಸಲು ನೆರವಾಗುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಕುವೈಟ್ ಪ್ರವಾಸದ ಸಂದರ್ಭದಲ್ಲಿ ಜೈಶಂಕರ್ ಅವರು ಭಾರತದ ರಾಯಭಾರ ಕಚೇರಿ ಮುಂಭಾಗದಲ್ಲಿ ಸ್ಥಾಪಿಸಲಾದ ಮಹಾತ್ಮಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಸಭೆಯ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, “ಸೌದಿ ಅರೇಬಿಯ, ಯುಎಇ, ಇರಾನ್, ಕುವೈಟ್, ಒಮನ್, ಕತಾರ್ ಮತ್ತು ಬಹರೈನ್ ನಲ್ಲಿ ಇರುವ ಭಾರತದ ರಾಯಭಾರಿಗಳ ಫಲಪ್ರದ ಚರ್ಚೆಯ ನೇತೃತ್ವ ವಹಿಸಿದೆ” ಎಂದು ತಿಳಿಸಿದ್ದಾರೆ.
Chaired a fruitful meeting of Indian Ambassadors in Saudi Arabia, UAE, Iran, Kuwait, Oman, Qatar and Bahrain today. Discussions focused on:
1. Ensuring utmost welfare of the Indian community in respective jurisdictions. pic.twitter.com/LvfoPACso5
— Dr. S. Jaishankar (@DrSJaishankar) June 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.