ಕೊರೋನ ಬಂದರೆ 18 -20 ವಯಸ್ಸಿನವರೂ ಕೂಡ ಒಮ್ಮೆ ಭಯ ಪಡುವಾಗ ಮತ್ತು ಕೆಲವಾರು ಬದುಕುವುದೇ ಕಷ್ಟ ಎನ್ನುವಾಗ, ಇಲ್ಲೊಬ್ಬರೂ ಮೈಸೂರಿನ 98 ವಯಸ್ಸಿನ ಸೂರ್ಯನಾರಾಯಣ ಎಂಬವರು ಕೊರೋನ ಗೆದ್ದು ಆರೋಗ್ಯವಂತರಾಗಿ ಮನೆಗೆ ಬಂದು ನಮಗೆಲ್ಲಾ ಸ್ಫೂರ್ತಿಯಾಗಿದ್ದಾರೆ. ಆ ಮೂಲಕ ಇನ್ನಷ್ಟು ಧೈರ್ಯ ತುಂಬಿದ್ದಾರೆ.
ಮೈಸೂರು ವಿದ್ಯಾರಣ್ಯ ಪುರಂನಲ್ಲಿರುವ ಸೂರ್ಯನಾರಾಯಣ ಇವರು ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಅವರನ್ನು ಕೋವಿಡ್ ಟಾಸ್ಕ್ಫೋರ್ಸ್ ಸಮಿತಿ ಹಾಗೂ ಕುಟುಂಬಸ್ಥರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದ್ದಾರೆ. ಇದು ಇನ್ನಷ್ಟು ಆತ್ಮಸ್ಥೈರ್ಯ ತುಂಬುತ್ತದೆ.
ಜನರು ಕೋವಿಡ್ ಸೋಂಕಿತರನ್ನು ಮಾತನಾಡಿಸಲು, ಮುಟ್ಟಲು ಹೆದರುತ್ತಿದ್ದಾರೆ. ಇಂಥಾ ಸಮಯದಲ್ಲಿ ಮಾನವೀಯತೆಯೇ ಮುಖ್ಯವಾಗಿದೆ. ಸೂರ್ಯ ನಾರಾಯಣ್ ಅವರು ಕೋವಿಡ್ ಸೋಂಕಿತರಾಗಿರುವುದು ತಿಳಿಯುತ್ತಿದ್ದಂತೆಯೇ ಅವರನ್ನು ತುಳಸಿದಾಸ್ ಎಂಬವರು ವಯಸ್ಸನ್ನು ಲೆಕ್ಕಿಸದೆ ಆಸ್ಪತ್ರೆಗೆ ದಾಖಲಿಸಲಿಸಿದ್ದರು. ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತುಳಸಿದಾಸ್ ಅವರ ಕರ್ತವ್ಯ ಪರತೆ ಸಹ ಎಲ್ಲರಿಗೂ ಆದರ್ಶವೇ ಹೌದು.
ಕೋವಿಡ್ ಸೋಂಕಿನ ಕುರಿತು ತಪ್ಪು ತಿಳುವಳಿಕೆ ಹೊಂದಿರುವವರು ಹಾಗೂ ಸೋಂಕು ತಗುಲಿದರೆ ಎಲ್ಲಿ ಸಾಯುತ್ತೇವೋ ಎಂದು ಭಯಪಡುವವರು ಒಮ್ಮೆ 98 ವರ್ಷದ ಸೂರ್ಯನಾರಾಯಣ ಅವರು ಕೊರೋನ ಗೆದ್ದು ಬಂದದ್ದು ಕಂಡಾಗ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸುತ್ತದೆ. ಭಯ ಪಡುವ ಅವಶ್ಯಕತೆ ಇಲ್ಲ ಎಷ್ಟೇ ವಯಸ್ಸಾದರೂ ಕೊರೋನ ಗೆಲ್ಲಬಹುದು ಎನ್ನುವುದಕ್ಕೆ ಸೂರ್ಯ ನಾರಾಯಣ ಇವರೇ ನಮಗೆಲ್ಲಾ ಮಾದರಿಯಾಗಿದ್ದಾರೆ. ಸ್ಪೂರ್ತಿಯಾಗಿದ್ದಾರೆ.
ಕೊರೋನಾ ಬಗ್ಗೆ ನಾವು ಭಯ ಪಟ್ಟಷ್ಟು ಅಪಾಯವೂ ಹೆಚ್ಚು. ಕೊರೋನಾ ವಿರುದ್ಧ ಹೋರಾಡುವ ಆತ್ಮವಿಶ್ವಾಸದ ಮುಂದೆ ವಯಸ್ಸು ಎಂಬುದು ಕೇವಲ ಅಂಕೆಯಷ್ಟೇ. ಸೂಕ್ತ ಚಿಕಿತ್ಸಾ ವಿಧಾನ, ಕೊರೋನಾ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾದಿಂದ ಗುಣಪಡಿಸಿಕೊಳ್ಳಬಹುದು. ಆತ್ಮಸ್ಥೈರ್ಯ, ಧೈರ್ಯ ನಮ್ಮಲ್ಲಿದ್ದರೆ ಕೊರೋನಾ ಗೆಲ್ಲಬಹುದು, ಅಲ್ಲಿ ವಯಸ್ಸು ಮುಖ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಸೂರ್ಯನಾರಾಯಣ ಅವರು. ಕೊರೋನಾ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸಲು ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ?.. ಕೊರೋನಾ ವಿರುದ್ಧ ಧೈರ್ಯದಿಂದ ಹೋರಾಡಿ, ಕೊರೋನ ಗೆಲ್ಲೋಣ.
✍️ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.