ನವದೆಹಲಿ: 2020 ರಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿ ಪಡೆದ ಮಹಾರಾಷ್ಟ್ರದ ಶಾಲಾ ಶಿಕ್ಷಕ ರಂಜಿತ್ಸಿನ್ಹಾ ದಿಸಾಲೆ ಅವರನ್ನು ಜೂನ್ 2021 ರಿಂದ 2024 ರ ಜೂನ್ ವರೆಗೆ ವಿಶ್ವಬ್ಯಾಂಕ್ ಶಿಕ್ಷಣ ಸಲಹೆಗಾರರಾಗಿ ಆಯ್ಕೆ ಮಾಡಲಾಗಿದೆ.
ವಿಶ್ವ ಬ್ಯಾಂಕ್ ಇತ್ತೀಚೆಗೆ ಹೊಸ ಕೋಚ್ ಪ್ರಾಜೆಕ್ಟ್ ಅನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಪಾಠಗಳನ್ನು ವೇಗವಾಗಿ ಕಲಿಯಲು ಸಹಾಯ ಮಾಡುವ ಸಲುವಾಗಿ ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಸುಧಾರಿಸುವ ಉದ್ದೇಶವನ್ನು ಈ ಪ್ರಾಜೆಕ್ಟ್ ಒಳಗೊಂಡಿದೆ.
“ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ ವೈಯಕ್ತಿಕವಾಗಿ, ದೂರಸ್ಥ ಅಥವಾ ಹೈಬ್ರಿಡ್ ವಿಧಾನಗಳ ಮೂಲಕ ಟಿಪಿಡಿಯ ವಿವಿಧ ಸ್ವರೂಪಗಳನ್ನು ಸುಧಾರಿಸಲು ಕೋಚ್ ಪ್ರಾಜೆಕ್ಟ್ ದೇಶಗಳಿಗೆ ಬೆಂಬಲವನ್ನು ನೀಡಲಿದೆ. ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪ್ರಮುಖವಾದ ಶಿಕ್ಷಕ-ವಿದ್ಯಾರ್ಥಿಗಳ ನಡುವೆ ಗುಣಮಟ್ಟದ ಸಂವಹನಗಳನ್ನು ಇದು ಒಳಗೊಂಡಿದೆ ”ಎಂದು ವಿಶ್ವಬ್ಯಾಂಕ್ ವೆಬ್ಸೈಟ್ನಲ್ಲಿ ಅಧಿಕೃತ ಹೇಳಿಕೆ ತಿಳಿಸಿದೆ.
ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗೈಕ್ವಾಡ್ ಕೂಡ ಟ್ವಿಟ್ಟರ್ ಮೂಲಕ ದಿಸಾಲೆ ಅವರನ್ನು ಅಭಿನಂದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.