ನವದೆಹಲಿ: ಸಾಂಕ್ರಾಮಿಕ ರೋಗದ ಕಾರಣದಿಂದಾಗಿ, ಜನರ ವೃತ್ತಿ ಮಾತ್ರವಲ್ಲದೆ ಶಾಲೆಗಳು ಮತ್ತು ಕಾಲೇಜುಗಳು ಸಹ ಆನ್ಲೈನ್ಗೆ ಶಿಫ್ಟ್ ಆಗಿವೆ. ಪುಟ್ಟ ಪುಟ್ಟ ಮಕ್ಕಳಿಗೆ ದೀರ್ಘಾವಧಿ ಆನ್ಲೈನ್ ಕ್ಲಾಸ್ ನಡೆಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ಮನವಿ ಮಾಡಿರುವ ಮುದ್ದಾದ ಪುಟಾಣಿಯೊಬ್ಬಳ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋವೊಂದರಲ್ಲಿ ಕಾಶ್ಮೀರದ 6 ವರ್ಷದ ಬಾಲಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದು, ದೀರ್ಘಾವಧಿಯ ಆನ್ಲೈನ್ ತರಗತಿಗಳ ಬಗ್ಗೆ ದೂರಿದ್ದಾಳೆ.
ವೀಡಿಯೊದಲ್ಲಿ ಪುಟಾಣಿ, ” ‘ಮೋದಿ ಸಹಾಬ್’ ಸಣ್ಣ ತರಗತಿಗಳ ಪುಟ್ಟ ಮಕ್ಕಳನ್ನು ಯಾಕೆ ಹೆಚ್ಚು ಗಂಟೆಗಳ ಕಾಲ ಆನ್ಲೈನ್ ತರಗತಿಗೆ ಹಾಜರಾಗುವಂತೆ ಮಾಡುತ್ತಾರೆ?, ದೊಡ್ಡ ತರಗತಿಯ ಮಕ್ಕಳಂತೆಯೇ ಯಾಕೆ ಹೋಂವರ್ಕ್ ಹೊರಿಸುತ್ತಾರೆ ಎಂದು ಪ್ರಶ್ನಿಸಿದ್ದಾಳೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕು, ಇಂಗ್ಲಿಷ್ನಿಂದ ಪ್ರಾರಂಭವಾಗುವ ತರಗತಿ, ನಂತರ ಗಣಿತ ನಂತರ ಉರ್ದು, ಇವಿಎಸ್ ಮತ್ತು ಕಂಪ್ಯೂಟರ್ ಅನ್ನು ಒಳಗೊಳ್ಳುತ್ತದೆ” ಎಂದಿದ್ದಾಳೆ.
ಬಾಲಕಿಯ ವಿಡಿಯೋಗೆ ಉತ್ತರ ನೀಡಿರುವ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರು, ” ಇದು ಅತ್ಯಂತ ಮುದ್ದಾದ ದೂರು. ಶಾಲಾ ಮಕ್ಕಳ ಮೇಲೆ ಹೋಂವರ್ಕ್ ಹೊರೆ ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿ ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಬಾಲ್ಯದ ಮುಗ್ಧತೆ ದೇವರ ಕೊಡುಗೆಯಾಗಿದೆ ಮತ್ತು ಮಕ್ಕಳ ದಿನಗಳು ಉತ್ಸಾಹಭರಿತವಾಗಿರಬೇಕು, ಸಂತೋಷ ಮತ್ತು ಆನಂದದಿಂದ ತುಂಬಿರಬೇಕು” ಎಂದಿದ್ದಾರೆ.
Very adorable complaint. Have directed the school education department to come out with a policy within 48 hours to lighten burden of homework on school kids. Childhood innocence is gift of God and their days should be lively, full of joy and bliss. https://t.co/8H6rWEGlDa
— Office of LG J&K (@OfficeOfLGJandK) May 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.