ಬೆಂಗಳೂರು: ಕೊರೋನಾ ದೃಢಪಡುವ ಪ್ರಮಾಣ 5% ವರೆಗೆ ಇಳಿಕೆಯಾಗುವವರೆಗೂ, ಮರಣ ಪ್ರಮಾಣ 1% ಗಿಂತ ಕಡಿಮೆಯಾಗುವವರೆಗೂ ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಮುಂದುವರಿಸುವಂತೆ ತಜ್ಞರು ಶಿಫಾರಸ್ಸು ಮಾಡಿರುವುದಾಗಿ ತಿಳಿದು ಬಂದಿದೆ.
ಸೋಮವಾರ ರಾಜ್ಯದಲ್ಲಿ ಕೊರೋನಾ ದೃಢ ಪ್ರಮಾಣ 13.57% ಗಳಷ್ಟು ಮತ್ತು ಮರಣ ಪ್ರಮಾಣ 2.47% ಗಳಷ್ಟು ಇತ್ತು. ಸದ್ಯ ದಿನೇ ದಿನೇ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ರಾಜ್ಯದಲ್ಲಿ 5 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುವವರೆಗೆ ಲಾಕ್ಡೌನ್ ಮಾಡುವುದು ಅಥವಾ ಕಠಿಣ ನಿಯಮಗಳ ಮುಂದುವರಿಕೆ ಸೂಕ್ತ ಎಂದು ಈ ಸಮಿತಿ ಹೇಳಿದೆ.
ಈ ವರದಿಯನ್ನು ಈಗಾಗಲೇ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರಿಗೂ ಸಲ್ಲಿಕೆ ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ, ಸಾವಿನ ಬಗ್ಗೆ ಅವಲೋಕಿಸಿ ಈ ವರದಿ ರಚಿಸಿರುವುದಾಗಿ ಸಮಿತಿ ತಿಳಿಸಿದೆ. ಯಾವ ರೀತಿಯ ಲಾಕ್ಡೌನ್ ಕ್ರಮ ಮುಂದುವರಿಸಬೇಕು ಎಂಬ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.