ಭಾರತದ ಅನೇಕ ಹಳ್ಳಿಗಳು ಕೊರೋನದ ಬಗ್ಗೆ ತಮ್ಮ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಒಗ್ಗಟ್ಟಿನಿಂದ ಕೊರೋನ ಗೆಲ್ಲುತ್ತಿರುವುದು ಉಳಿದ ಹಳ್ಳಿಗಳಿಗೆ ಮಾದರಿಯಾಗಿದೆ.
ಭಾರತದ ಗ್ರಾಮೀಣ ಪ್ರದೇಶಗಳಿಗೆ ಕೊರೋನ ಅತಿ ವೇಗವಾಗಿ ಹರಾಡುತ್ತಿದೆ ಎನ್ನುವ ಸಂದರ್ಭದಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಖಾಲಿಕೋಟೆ ಬ್ಲಾಕ್ ದಾನಪುರ ಪಂಚಾಯತ್ ಕರಂಜಾರ ಗ್ರಾಮ ನಮಗೆ ಆದರ್ಶ ಪ್ರಾಯವಾಗಿದೆ. 261 ಮನೆಗಳನ್ನು ಹೊಂದಿರುವ ಪ್ರದೇಶದಲ್ಲಿ 1234 ವಾಸಿಸುತ್ತಿದ್ದಾರೆ. ಆದರೆ ಆಶ್ಚರ್ಯ ಎಂದರೆ ಇದುವರೆಗೂ ಒಂದು ಪ್ರಕರಣವನ್ನೂ ವರದಿ ಮಾಡಿಲ್ಲ. ಅನೇಕರ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದ್ದು ಆರೋಗ್ಯ ಕಾರ್ಯಕರ್ತರು ಈ ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದಕ್ಕೆ ಕಾರಣ ಜನರಲ್ಲಿರುವ ಕೊರೋನ ಜಾಗೃತಿ. ಕೋವಿಡ್-19 ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ಗ್ರಾಮಸ್ಥರು ಅರಿವು ಹೊಂದಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬ ಗ್ರಾಮಸ್ಥರು ಮಾಸ್ಕ್ ಧರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಯಿಂದ ಹೊರ ಬಂದಾಗಲೆಲ್ಲಾ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಹಲವು ಯುವಕರು ಮುಂಬೈನಲ್ಲಿ ಕೆಲಸ ಮಾಡುತ್ತಿರುವವರು ಹಳ್ಳಿಗೆ ಮರಳಿದಾಗ ತಾವು ಮೊದಲು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ 14 ದಿನಗಳ ಕಾಲ ಸ್ವಯಂ-ನಿರ್ಬಂಧದಲ್ಲಿ ಇದ್ದು ನಂತರ ಮನೆಗೆ ಬಂದಿದ್ದು, ಸರ್ಕಾರದ ನೀತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಕರಂಜಾರ ಗ್ರಾಮ ಸಮುದಾಯದ ಅಧ್ಯಕ್ಷ ತ್ರಿನಾಥ್ ಬೆಳೆರಾ ಹೇಳುತ್ತಾರೆ.
ಈ ಎಲ್ಲಾ ಕಾರಣಗಳಿಂದ ಇಂದು ಯಶಸ್ವಿಯಾಗಿ ಕೊರೋನ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ ಈ ಹಳ್ಳಿಯ ಜನತೆ. ಹಾಗಾಗಿ ಬಹುಶಃ ಸಂಪೂರ್ಣ ಹಳ್ಳಿಯ ಜನರೆಲ್ಲಾ ಕೊರೋನ ಯೋಧರೆಂದೇ ಹೇಳಬಹುದು. ಈ ಗ್ರಾಮ ನಮ್ಮ ದೊಡ್ಡ ದೊಡ್ಡ ಸಿಟಿಗಳಿಗೂ ಮಾದರಿಯಾಗಿದೆ, ಏಕೆಂದರೆ ಸರಿಯಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಕೋರೋನವನ್ನೂ ಗೆಲ್ಲಬಹುದು ಎಂಬುದನ್ನು ಈ ಹಳ್ಳಿಯ ಜನರು ತೋರಿಸಿಕೊಟ್ಟಿದ್ದಾರೆ.
ದೇಶದಲ್ಲಿ ಇಂತಹ ಅನೇಕ ಹಳ್ಳಿಗಳಿವೆ. ಇವರಂತೆಯೇ ನಾವು ಸಹ ನಿಯಮ ಪಾಲಿಸಿ ಕೊರೋನ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿ ಗೆಲ್ಲೋಣ.
✍️ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.