News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಪ್ಪು ಶಿಲೀಂಧ್ರವನ್ನು ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಕೋವಿಡ್ -19 ಚೇತರಿಕೆ ಪ್ರಮಾಣ ಭಾರತದಲ್ಲಿ ಸತತ ಏಳು ದಿನಗಳಿಂದ ಏರುತ್ತಿದ್ದರೂ, ಕಪ್ಪು ಶಿಲೀಂಧ್ರ ಸೋಂಕು ಅಥವಾ ಮ್ಯೂಕಾರ್ಮೈಕೋಸಿಸ್‌ಗೆ ಸಂಬಂಧಿಸಿದ ಹಲವಾರು ಪ್ರಕರಣಗಳು ವರದಿಯಾಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.

ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಈ ಬಗ್ಗೆ ಪ್ರಕಟನೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಗಮನಿಸಬಹುದಾದ ರೋಗವಾಗಿ ಮ್ಯೂಕಾರ್ಮೈಕೋಸಿಸ್ ಅನ್ನು ಘೋಷಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಐಸಿಎಂಆರ್ ಹೊರಡಿಸಿದ ಮ್ಯೂಕಾರ್ಮೈಕೋಸಿಸ್‌ಗೆ ಸಂಬಂಧಿಸಿದ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಯ ಮಾರ್ಗಸೂಚಿಗಳನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು, ವೈದ್ಯಕೀಯ ಕಾಲೇಜುಗಳು ಅನುಸರಿಸಬೇಕೆಂದು ಸಚಿವಾಲಯ ನಿರ್ದೇಶಿಸಿದೆ.

ಕೋವಿಡ್‌ ನಂತರ ಮ್ಯೂಕೋರ್ಮೈಕೋಸಿಸ್ ಸಂಬಂಧಿತ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಬಿಹಾರದಲ್ಲಿ ಹೊಸದಾಗಿ ಪತ್ತೆಯಾದ ‘ಬಿಳಿ ಶಿಲೀಂಧ್ರ’ ಸೋಂಕು ಮತ್ತಷ್ಟು ಭಯಭೀತಗೊಳಿಸಿದೆ. ಇದು ಕಪ್ಪು ಶಿಲೀಂಧ್ರಕ್ಕಿಂತಲೂ ಭಯಾನಕವೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top