ನವದೆಹಲಿ : ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸುವ ಮೂಲಕ ಪರಿಹಾರವನ್ನು ತಲುಪಿಸುವ ಕಾರ್ಯವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು ಸುಮಾರು 675ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ಸುಮಾರು 11030 ಮೆ.ಟನ್ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ಗಳು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒಗಳನ್ನು ರಾಷ್ಟ್ರದಲ್ಲಿ ತಲುಪಿಸುತ್ತಿವೆ.
ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್ ನ್ನೊಂದಿಗೆ ಆಕ್ಸಿಜನ್ ಎಕ್ಸ್ಪ್ರೆಸ್ಗಳು ತಮ್ಮ ವಿತರಣೆಯ ಕಾರ್ಯವನ್ನು ಪ್ರಾರಂಭಿಸಿತು ಎನ್ನುವುದನ್ನು ಗಮನಿಸಬಹುದು.
ಕಳೆದ 24 ದಿನಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ, ರೈಲ್ವೆಯು ತನ್ನ ಆಕ್ಸಿಜನ್ ಎಕ್ಸ್ಪ್ರೆಸ್ ಕಾರ್ಯಾಚರಣೆಯನ್ನು ಉನ್ನತ ಮಟ್ಟಕ್ಕೇರಿಸಿ 11030 ಮೆ.ಟನ್ ಗಿಂತ ಹೆಚ್ಚಿನ ವೈದ್ಯಕೀಯ ಆಮ್ಲಜನಕವನ್ನು 13 ರಾಜ್ಯಗಳಿಗೆ ತಲುಪಿಸಿದೆ.
ದೇಶದ ಉದ್ದಗಲಕ್ಕೆ ಸಂಚರಿಸುತ್ತಾ ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು , ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶದ ರಾಜ್ಯಗಳಿಗೆ ಕ್ಲಿಷ್ಟಕರವಾದ ಕಾರ್ಯಾಚರಣೆ ಮಾರ್ಗ ಯೋಜನೆ ಸನ್ನಿವೇಶಗಳಲ್ಲಿ ತಲುಪಿಸುತ್ತಿದೆ.
ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮತ್ತು ಸಮರ್ಪಕ ಮಾನದಂಡಗಳನ್ನು ರಚಿಸುತ್ತಿದೆ. ಈ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ ಹೆಚ್ಚಿನದಾಗಿರುತ್ತದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ನಲ್ಲಿ ಚಾಲನೆಯಲ್ಲಿರುವ, ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಇಪ್ಪತ್ತನಾಲ್ಕು ಘಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತ ಪಡಿಸುತ್ತವೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.
ಟ್ರ್ಯಾಕ್ಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ಪ್ರೆಸ್ ತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ವಹಿಸಿಲಾಗುತ್ತಿದೆ. ಇತರ ಸರಕು ಸಾಗಣಿಕೆಯ ವೇಗವು ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ಇದನ್ನು ಮಾಡಲಾಗುತ್ತದೆ.
ಸುಮಾರು 175 ಆಕ್ಸಿಜನ್ ಎಕ್ಸ್ಪ್ರೆಸ್ಗಳು ಈವರೆಗೆ ತಮ್ಮ ಯಾನವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ ಎನ್ನುವುದನ್ನು ಗಮನಿಸಬಹುದು. ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒ ತಲುಪಿಸಲು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.
ಇದುವರೆಗೆ, ಮಹಾರಾಷ್ಟ್ರದಲ್ಲಿ 521 ಮೆ.ಟನ್ ಆಕ್ಸಿಜನ್, ಉತ್ತರ ಪ್ರದೇಶದಲ್ಲಿ ಸುಮಾರು 2858 ಮೆ.ಟನ್, ಮಧ್ಯಪ್ರದೇಶದಲ್ಲಿ 476 ಮೆ.ಟನ್, ಹರಿಯಾಣದಲ್ಲಿ 1427 ಮೆ.ಟನ್, ತೆಲಂಗಾಣದಲ್ಲಿ 565 ಮೆ.ಟನ್, ರಾಜಸ್ಥಾನದಲ್ಲಿ 40 ಮೆ.ಟನ್, ಕರ್ನಾಟಕದಲ್ಲಿ 480 ಮೆ.ಟನ್, ಉತ್ತರಾಖಂಡದಲ್ಲಿ 200 ಮೆ.ಟನ್, ತಮಿಳುನಾಡಿನಲ್ಲಿ 350 ಮೆ.ಟನ್, ಪಂಜಾಬ್ ನಲ್ಲಿ 81 ಮೆ.ಟನ್, ಕೇರಳದಲ್ಲಿ 118 ಮೆ.ಟನ್ ಮತ್ತು ದೆಹಲಿಯಲ್ಲಿ ಸುಮಾರು 3794 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.
ಹೊಸ ಆಮ್ಲಜನಕ ಎಕ್ಸ್ಪ್ರೆಸ್ಗಳನ್ನು ಚಲಾಯಿಸುವುದು ಬಹಳ ಕ್ರಿಯಾತ್ಮಕ ಕ್ರಿಯೆಯಾಗಿದ್ದು ಮತ್ತು ಅಂಕಿಅಂಶಗಳು ಸಾರ್ವಕಾಲಿಕ ಹೊಸದಾಗಿ ಬದಲಾಗುತ್ತಿರುತ್ತವೆ. ಮತ್ತಷ್ಟು ಆಮ್ಲಜನಕ ತುಂಬಿಕೊಂಡ ಆಕ್ಸಿಜನ್ ಎಕ್ಸ್ಪ್ರೆಸ್ಗಳು ರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ರೈಲ್ವೆಯು ವಿವಿಧ ಮಾರ್ಗಗಳನ್ನು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ಯೋಜಿಸಿಕೊಂಡಿದೆ ಮತ್ತು ರಾಜ್ಯಗಳ ಯಾವುದೇ ಮುಂದಿನ ಅಗತ್ಯಗಳೊಂದಿಗೆ ಸಿದ್ಧವಾಗಿದೆ. ಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ಗಳನ್ನು ಒದಗಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.