News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಇನ್‌ಕ್ರೆಡಿಬಲ್‌ʼ ಭಾರತದ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅನಿಸಿಕೆ

ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು The Pioneer ಪತ್ರಿಕೆಗೆ “Incredible India deserves respect” ಲೇಖನ ಬರೆದಿದ್ದು, ಭಾರತದ ಶ್ರೀಮಂತ ಪರಂಪರೆ, ಭಾರತದ ಬಗೆಗೆ ತನಗಿರುವ ಅಭಿಮಾನ ಮತ್ತು ಭಾರತದ ಪ್ರಸ್ತುತ ಸ್ಥಿತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

“ಭಾರತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಾಂಕ್ರಾಮಿಕದ ಎರಡನೇ ಅಲೆಯ ಪ್ರಕೋಪ ಎದುರಿಸುತ್ತಿದೆ. ವೈರಸ್‌ ಪ್ರಸರಣದ ವಿರುದ್ಧ ಅದು ಸಮರ ಸಾರಿರುವ ಈ ಸಂದರ್ಭದಲ್ಲಿ, ಜಗತ್ತಿನ ಮಾಧ್ಯಮಗಳು ಭಾರತವ ಚಿತ್ರಣವನ್ನು ಕೆಟ್ಟದಾಗಿ ಬಿಂಬಿಸುವ ಯಾವ ಅವಕಾಶವನ್ನೂ ಕೈ ಚೆಲ್ಲುತ್ತಿಲ್ಲ. ಭಾರತ 1.4 ಬಿಲಿಯನ್‌ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ, ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಮತ್ತು ಅದನ್ನು ಯಶಸ್ಸುಗೊಳಿಸುವುದು ಸುಲಭದ ಮಾತಲ್ಲ.

ಸುಮಾರು ದಶಕಗಳಿಂದ ನಾನು ಭಾರತಕ್ಕೆ ಭೇಟಿ ನೀಡುತ್ತಾ ಬಂದಿದ್ದೇನೆ, ಈ ದೇಶದ ಹಲವು ಭಾಗಗಳನ್ನು ಸುತ್ತಿದ್ದೇನೆ. ಅದರಲ್ಲೂ ತಮಿಳುನಾಡನ್ನು ನಾನು ನನ್ನ ʼಆಧ್ಯಾತ್ಮಿಕ ಕೇಂದ್ರʼ ಎಂದು ಪರಿಗಣಿಸುತ್ತೇನೆ. ಇಂತಹ ವೈವಿಧ್ಯಮಯ ಮತ್ತು ವಿಶಾಲ ದೇಶವನ್ನು ಮುನ್ನಡೆಸುವ ಟಾಸ್ಕ್‌ ತೆಗೆದುಕೊಂಡಿರುವ ಇಲ್ಲಿನ ರಾಜಕಾರಣಿಗಳು ಮತ್ತು ನಾಯಕರ ಬಗ್ಗೆಯೂ ನನಗೆ ಅತೀವ ಗೌರವವಿದೆ.

ಇಲ್ಲಿಗೆ ಬಂದಾಗಲೆಲ್ಲಾ ಜನರು ನನ್ನನ್ನು ಪ್ರೀತಿ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಚಿರಋಣಿ. ಹಲವು ವರ್ಷಗಳಿಂದ ಭಾರತವನ್ನು ನಾನು ತುಂಬಾ ಸನಿಹದಿಂದ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಮತ್ತು ಈಗಿನ ಪರಿಸ್ಥಿತಿ ನೋಡಿ ನನ್ನ ಹೃದಯ ನೋವಿನಿಂದ ನರಳುತ್ತಿದೆ. ಆದರೆ ಕೆಟ್ಟ ಮಾಧ್ಯಮಗಳು ಭಾರತದ ಚಿತ್ರಣವನ್ನು ತೋರಿಸುತ್ತಿರುವ ರೀತಿ ನನಗೆ ಬೇಸರ ತರಿಸಿದೆ. ಭಾರತವನ್ನು, ಅದರ ಜನರನ್ನು ಮತ್ತು ಅವರ ಸವಾಲುಗಳನ್ನು ಅರಿಯಲು,  ಅವುಗಳು  ಭಾರತದಲ್ಲಿ ತುಸು ಸಮಯ ಕಳೆದಿವೆ ಎಂದು ನನಗನಿಸುತ್ತಿಲ್ಲ.

ಒಬ್ಬ ಕ್ರಿಕೆಟರ್‌ ಆಗಿ ಮತ್ತು ಕ್ರೀಡಾಪ್ರೇಮಿಯಾಗಿ, ನಾನು ಕ್ರೀಡೆಯೊಂದಿಗೆ ಬೆಸೆದುಕೊಂಡಿದ್ದೇನೆ, ಇದೇ ಕಾರಣದಿಂದ  ಐಪಿಎಲ್‌ಗಾಗಿ ಭಾರತಕ್ಕೆ ಬರುವ ಅವಕಾಶ ಸಿಕ್ಕಿವೆ. ನನ್ನ ದೇಶವಾಸಿಗಳು ಕೂಡ ವರ್ಷಗಳಿಂದ ಐಪಿಎಲ್‌ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಜಗತ್ತು ಭಾರತಕ್ಕೆ ತನ್ನ ಬಾಗಿಲನ್ನು ಮುಚ್ಚುತ್ತಿರುವಾಗ ಮತ್ತು ಇಲ್ಲಿನ ಸರ್ಕಾರವನ್ನು ದೂಷಿಸುತ್ತಿರುವಾಗ, ಭಾರತದಲ್ಲಿರುವ ನಾನು ನನ್ನ ಚಿಂತನೆಗಳನ್ನು ಇಲ್ಲಿ  ಹಂಚಿಕೊಳ್ಳಲು ಮುಂದಾಗಿದ್ದೇನೆ, ಸಾವಿರಾರು ಮೈಲಿ ದೂರದಲ್ಲಿರುವವರಿಗೆ ಲಭ್ಯವಾಗದ ಭಾರತದ ಚಿತ್ರಣವನ್ನು ಈ ಮೂಲಕ ನೀಡುತ್ತಿದ್ದೇನೆ.

ನಾನು ದತ್ತಾಂಶವನ್ನು ಹೊಂದಿಲ್ಲ, ಆದರೆ ಕೆಲವು ಮಾಧ್ಯಮಗಳು ನೀಡುತ್ತಿರುವ ದತ್ತಾಂಶಗಳು ನನ್ನನ್ನು ಆಶ್ಚರ್ಯಚಕಿತಗೊಳಿಸಿದೆ. ಭಾರತ ಈಗಾಗಲೇ ಸುಮಾರು 160 ಮಿಲಿಯನ್‌ ಜನರಿಗೆ (ಆಸ್ಟ್ರೇಲಿಯಾದ ಜನಸಂಖ್ಯೆಗಿಂತ ಐದು ಪಟ್ಟು ಹೆಚ್ಚು) ಲಸಿಕೆ ನೀಡಿದೆ ಮತ್ತು 1.3 ಮಿಲಿಯನ್‌ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಸಂಖ್ಯೆಗಳನ್ನು ಕಡೆಗಣಿಸಲಾದ ಬಗ್ಗೆ ನನ್ನ ಉಲ್ಲೇಖವಲ್ಲ, ಆದರೆ ಇದಕ್ಕೆ ಸಂಬಂಧಿಸಿದ ಸವಾಲುಗಳನ್ನು ನಿರ್ಲಕ್ಷ್ಯ ಮಾಡಿದ ಬಗ್ಗೆ.

ಭಾರತದ ಬಗ್ಗೆ ಒಬ್ಬರು ಯೋಚಿಸುವಾಗ ಮೊದಲ ಬರುವ ಶಬ್ದ ʼಇನ್‌ಕ್ರೆಡಿಬಲ್‌ʼ. ಭಾರತೀಯ ಪ್ರವಾಸೋದ್ಯಮದ ಘೋಷಣೆ ʼಇನ್‌ಕ್ರೆಡಿಬಲ್‌ ಇಂಡಿಯಾʼ ಈ ಪದವನ್ನು ಜನಪ್ರಿಯಗೊಳಿಸಿದೆ. ಈಗಲೂ, ಸ್ಕಾಟ್‌ ಮಾರಿಷನ್‌ ಸರ್ಕಾರ ಭಾರತದಿಂದ ಆಸ್ಟ್ರೇಲಿಯಾಗೆ ಪ್ರಯಾಣವನ್ನು ನಿರ್ಬಂಧಿಸಿರುವ ಈ ಸಂದರ್ಭದಲ್ಲೂ, ಈ ಪ್ರಾಚೀನ ನಾಗರಿಕತೆಯ ಬಗೆಗಿನ ನನ್ನ ಅನಿಸಿಕೆ ಎಳ್ಳಷ್ಟೂ ಬದಲಾಗಿಲ್ಲ.

ಮಾನವ ಸಮೂಹವೇ ಇಂದು ಸಾಂಕ್ರಾಮಿಕದಿಂದ ತತ್ತರಿಸಿದೆ. ಧಾರ್ಮಿಕ ಹಬ್ಬಗಳನ್ನು, ವೈಭವದ ಮದುವೆಗಳನ್ನು, ಜನಜಂಗುಳಿಯ ಮಧ್ಯದಲ್ಲಿದ್ದ ಬೀದಿ ವ್ಯಾಪಾರಗಳನ್ನು, ಜೀವನೋಪಾಯಗಳನ್ನು ಕೊರೋನಾ ನಿಯಮಗಳು ಅತಿಕ್ರಮಣ ಮಾಡಿವೆ. ಮಾರಿಷನ್‌ ಸರ್ಕಾರದ ಪ್ರಯಾಣ ನಿರ್ಬಂಧದಂತೆ ಎಲ್ಲದಕ್ಕೂ ತಾತ್ಕಾಲಿಕ ನಿರ್ಬಂಧ ಬಿದ್ದಿದೆ.

ಬೆಂಗಳೂರಿನ ನಾನಿರುವ ರೂಮ್‌ನಲ್ಲಿನ ಕಿಟಕಿಯಿಂದ ಹೊರ ನೋಡುವಾಗ, ಆರೋಗ್ಯ ಅಧಿಕಾರಿಗಳು ʼಐಸೋಲೇಟ್‌ ಆಗಿ, ಕೈ ತೊಳೆಯಿರಿ, ಮಾಸ್ಕ್‌ ಹಾಕಿ, ಸ್ಯಾನಿಟೈಸ್‌ ಮಾಡಿ, ಸಾಮಾಜಿಕ ಅಂತರ ಕಾಪಾಡಿʼ ಎನ್ನುವುದನ್ನು ಕೇಳಿ ಇದುವೇ ಜಾಗತಿಕ ರಾಷ್ಟ್ರಗೀತೆಯಾಯಿತಲ್ಲ ಎಂದೆನಿಸುತ್ತದೆ. ಆಮ್ಲಜನಕ, ನಿರ್ಣಾಯಕ ವೈದ್ಯಕೀಯ ಪರಿಕರಗಳನ್ನು ಉತ್ಪಾದನಾ ಘಟಕಗಳಿಂದ ಆಸ್ಪತ್ರೆಗಳಿಗೆ, ಕಾಳಜಿ ಕೇಂದ್ರಗಳಿಗೆ ಸಾಗಿಸುವುದನ್ನು ನೋಡಿದರೆ ಅದರ ಹಿನ್ನೆಲೆಯ ಓಟದ ತೀವ್ರತೆ ಕಾಣಸುತ್ತದೆ. ಸರಳ ಸತ್ಯವೆಂದರೆ: ಮೂಲ ವೈದ್ಯಕೀಯ ಪರಿಕರಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಪೂರೈಕೆಯು ಉಸೇನ್‌ ಬೋಲ್ಟ್‌ನ ಪ್ರತಿಸ್ಪರ್ಧಿಯಂತೆ ಕಾಣಿಸಲಾರಂಭಿಸಿದೆ.

ಸುಲಭವಾಗಿ ಹೇಳಬೇಕೆಂದರೆ, ಒತ್ತಡವನ್ನು ವಿಚಲಿತ ಮನಸ್ಥಿತಿ ರಿಪ್ಲೇಸ್‌ ಮಾಡಿದೆ. ಈ ಭಯಾನಕ ಸಾಂಕ್ರಾಮಿಕದ ವಿರುದ್ಧ ಭಾರತದ ಸವಾಲಿನ ಹೋರಾಟವನ್ನು ನೋಡುತ್ತಿರುವ ಯಾರಿಗಾದರೂ ಭಯ, ಆತಂಕ ಆವರಿಸುವುದು ಸಹಜ. ಇಂತಹ ಸಂದರ್ಭದಲ್ಲಿ, ಯಾಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಂತಹ ಕಠಿಣ ಸಂದರ್ಭದಲ್ಲಿ ತನ್ನ ಪ್ರೀತಿಯ ದೇಶ ಮತ್ತು ಕುಟುಂಬದಿಂದ ದೂರವಿದ್ದಾನೆ ಎಂಬ ಪ್ರಶ್ನೆಗಳು ಮೂಡುವುದು ಸಹಜ. 2008ರಲ್ಲಿ ಐಪಿಎಲ್‌ ಆರಂಭವಾಗಿನಿಂದ ಅದರಲ್ಲಿ ಆಡಿದ್ದೇನೆ, ಕೆಲಸ ಮಾಡಿದ್ದೇನೆ. ಹೀಗಾಗಿ ಮೇಲ್ನೋಟಕ್ಕೆ ಇದು ನನ್ನ ಕುಟುಂಬದ ಆರ್ಥಿಕ ವಿಷಯ.

ಹೌದು, ನನ್ನ ಸಂಭಾವಣೆ ದೊಡ್ಡದಿದೆ ಮತ್ತು ಇದು ನನ್ನ ಕುಟುಂಬದ ಖರ್ಚುವೆಚ್ಚ ಸರಿದೂಗಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ಭಾರತ ಮಾತೆಯೊಂದಿಗೆ ನನಗೆ ಆಳವಾದ ಬೆಸುಗೆ ಇದೆ, ಇದು ಜನರನ್ನು ಸಂಪರ್ಕಿಸುವ ಮತ್ತು ಉದ್ದೇಶಿತ ಸಂಘಟನೆಯ ಮತ್ತು ತಂತ್ರಗಾರಿಕೆಯ ನನ್ನ ಜೀವನ ಮಿಷನ್‌ಗೆ ಹತ್ತಿರವಾಗಿದೆ.  ಈ ಋತುವಿನಲ್ಲಿ ಐಪಿಎಲ್ ಅನ್ನು ಬೆಂಬಲಿಸುವ ನನ್ನ ಉದ್ದೇಶವೆಂದರೆ, ವಿಸ್ತೃತ ಅವಧಿಯ,  ಭಾಗಶಃ ಅಥವಾ ಕಠಿಣ ಲಾಕ್ಡೌನ್ ಏಕತಾನತೆಯಲ್ಲಿರುವ ಜನರಿಗೆ ಮಹತ್ವದ ನಿರಾಳತೆಯನ್ನು ನೀಡುವುದು. ಪ್ರತಿದಿನ ಸಂಜೆ 6.30 ರಿಂದ ಕ್ರಿಕೆಟ್ ಪ್ರಿಯರು  ಆನ್‌ಲೈನ್‌ಗೆ ಹೋಗಿ ಅಥವಾ ಟಿವಿ ಮುಂದೆ ಕುಳಿತು ತಮ್ಮ ನೆಚ್ಚಿನ ಫ್ರ್ಯಾಂಚೈಸ್ ಆಟವನ್ನು ವೀಕ್ಷಣೆ ಮಾಡುತ್ತಾರೆ.

ನಾಲ್ಕು ವರ್ಷದವನಾಗಿದ್ದಾಗಿನಿಂದ ಆಟದ ನಿಜವಾದ ಪ್ರೇಮಿಯಾಗಿದ್ದೇನೆ, ಕ್ರಿಕೆಟ್‌ ಆಟಕ್ಕೆ ನನ್ನ ಧ್ವನಿ ಉತ್ಸಾಹದಿಂದ ತುಂಬಿ ಕ್ರಿಕೆಟ್ ಸಮುದಾಯಕ್ಕೆ ಸಕಾರಾತ್ಮಕ ದೃಷ್ಟಿಕೋನವನ್ನು ತರಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದೇವೆ. ಕ್ರಿಕೆಟ್‌ ಆಟಕ್ಕೂ ಕೋವಿಡ್‌ ಎಂಬ ಮೋಡ ಆಗಾಗ ಆವರಿಸುತ್ತದೆ. ಕ್ರಿಕೆಟಿಗರು, ವಿಶೇಷವಾಗಿ ಐಪಿಎಲ್‌ ಮಾಧ್ಯಮಗಳ  ಗುರಿಗಳಾಗಿವೆ. ಒಪ್ಪಂದದ ಕಟ್ಟುಪಾಡುಗಳ ಕಾರಣದಿಂದಾಗಿ ಆಟಗಾರರಿಗೆ ಈ ಬಗ್ಗೆ ಚಕಾರವೆತ್ತಲಾಗುವುದಿಲ್ಲ.

ಒಂದು ಕಾಲದಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದ ಆದರೆ ಈಗ ಹೊರಗಿನಿಂದ “ಆಟಗಾರನ ದೃಷ್ಟಿಕೋನವನ್ನು” ಹಂಚಿಕೊಳ್ಳುತ್ತಿರುವ ನನ್ನಂತವರಿಗೆ ಆಟಗಾರರ ಬಗ್ಗೆ ಮಾತನಾಡುವುದು ಮುಖ್ಯವಾಗುತ್ತದೆ. ಭಾರತವು ಶ್ರೀಮಂತ ನಾಗರಿಕತೆಯಾಗಿದ್ದು, ಇದಕ್ಕೆ ಜಗತ್ತಿನಲ್ಲಿ ಅತಿ ಕಡಿಮೆ ಪರ್ಯಾಯಗಳಿವೆ. ಅದರ ಅಗತ್ಯದ ಸಮಯದಲ್ಲಿ, ನಾವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಭಾರತದ ಬಗ್ಗೆ ಯಾವುದೇ ತೀರ್ಪು ನೀಡುವ ಮೊದಲು, ಅದರ ಸಾಂಸ್ಕೃತಿಕ, ಪ್ರಾದೇಶಿಕ, ಭಾಷಾ, ಮಾನವ ಅಭಿವೃದ್ಧಿ ಮತ್ತು ಇತರ ಸಂಕೀರ್ಣತೆಗಳ ಬಗ್ಗೆ  ಪ್ರಶಂಸಿಸುವುದು”.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top