
ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ “ಮಾ, ಮಾಟಿ, ಮನುಷ್ (ತಾಯಿ, ಮಣ್ಣು, ಮನುಷ್ಯರು)” ಘೋಷಣೆಯ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಈ ಮೂರೂ “ಅಸುರಕ್ಷಿತ” ಎಂದು ಹೇಳಿದ್ದಾರೆ.
ಕೋಲ್ಕತ್ತಾ ಮಹಾನಗರದ ನಾಲ್ಕು ಜಿಲ್ಲೆಗಳ ಬಿಜೆಪಿ)ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ನುಸುಳುಕೋರರು ಆರ್ಥಿಕತೆಯ ಮೇಲೆ ಹೊರೆಯಾಗುವುದಲ್ಲದೆ, ರಾಷ್ಟ್ರೀಯ ಭದ್ರತೆ ಮತ್ತು ಬಂಗಾಳದ ಸಾಂಸ್ಕೃತಿಕ ಗುರುತಿಗೂ ಬೆದರಿಕೆಯಾಗಿದ್ದಾರೆ ಎಂದಿದ್ದಾರೆ.
“ಮಮತಾ ಬ್ಯಾನರ್ಜಿ ಅವರ ಸರ್ಕಾರ ‘ಮಾ, ಮಾತಿ, ಮಾನುಷ್’ ಘೋಷಣೆಯನ್ನು ನೀಡಿತು, ಆದರೆ ಇಂದು ಮೂವರೂ ಅಸುರಕ್ಷಿತರಾಗಿದ್ದಾರೆ. ಮಮತಾ ಸರ್ಕಾರದ ಅಡಿಯಲ್ಲಿ, ಮಹಿಳೆಯರ ಸುರಕ್ಷತೆ ಅಪಾಯದಲ್ಲಿದೆ, ಭೂಮಿ ಮಾಫಿಯಾಗಳ ನಿಯಂತ್ರಣದಲ್ಲಿದೆ ಮತ್ತು ಜನರು ವಲಸೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ. ಮಮತಾ ಸರ್ಕಾರ ಭ್ರಷ್ಟಾಚಾರವನ್ನು ಉತ್ತೇಜಿಸಿದೆ. ಕೋಟ್ಯಂತರ ರೂಪಾಯಿಗಳ ಹಗರಣಗಳು ನಡೆದಿವೆ, ಶಿಕ್ಷಕರ ನೇಮಕಾತಿ ಹಗರಣ, ಎಸ್ಎಸ್ಸಿ ಹಗರಣ, ಪುರಸಭೆ ನೇಮಕಾತಿ ಹಗರಣಗಳು, ಕಲ್ಲಿದ್ದಲು ಹಗರಣ, ಪಡಿತರ ಹಗರಣ, ಎಂಜಿಎನ್ಆರ್ಇಜಿಎ ಹಗರಣ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಗರಣ” ಎಂದು ಶಾ ವಾಗ್ದಾಳಿ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


