News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದುವರೆಗೆ 100 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು 6,260 ಮೆ.ಟನ್ ಆಮ್ಲಜನಕ ತಲುಪಿಸಿವೆ: ರೈಲ್ವೆ

ನವದೆಹಲಿ: ಇದುವರೆಗೆ  100 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು  6,260 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ದೇಶಾದ್ಯಂತ ತಲುಪಿಸಿವೆ ಎಂದು ಭಾರತೀಯ ರೈಲ್ವೆ  ತಿಳಿಸಿದೆ.

ರೈಲ್ವೆ ಸಚಿವಾಲಯದ ವಕ್ತಾರ ಡಿ.ಜೆ. ನರೈನ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ರೈಲ್ವೆ ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ ತಲುಪಿಸುವ ಮೂಲಕ ಪರಿಹಾರವನ್ನು ತರುವ ಪ್ರಯಾಣವನ್ನು ಮುಂದುವರಿಸಿದೆ” ಎಂದಿದ್ದಾರೆ.

“ಇಲ್ಲಿಯವರೆಗೆ, ರೈಲ್ವೆ ಸುಮಾರು 6,260 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು 396 ಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ” ಎಂದಿದ್ದಾರೆ.

ಮಂಗಳವಾರ, ಆಕ್ಸಿಜನ್ ಎಕ್ಸ್‌ಪ್ರೆಸ್ ಸುಮಾರು 800 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ವಿತರಿಸಿದೆ ಎಂದು ನರೈನ್ ಹೇಳಿದ್ದಾರೆ.

“ರೈಲ್ವೆ ಮಹಾರಾಷ್ಟ್ರಕ್ಕೆ 407 ಮೆ.ಟನ್, ಯುಪಿಗೆ ಸುಮಾರು 1,680 ಮೆ.ಟನ್, ಮಧ್ಯಪ್ರದೇಶಕ್ಕೆ 360 ಮೆ.ಟನ್, ಹರಿಯಾಣಕ್ಕೆ 939 ಮೆ.ಟನ್, ತೆಲಂಗಾಣಕ್ಕೆ 123 ಮೆ.ಟನ್, ರಾಜಸ್ಥಾನಕ್ಕೆ 40 ಮೆ.ಟನ್, ಕರ್ನಾಟಕಕ್ಕೆ 120 ಮೆ.ಟನ್ ಮತ್ತು ದೆಹಲಿಗೆ  2,404 ಮೆ.ಟನ್ ಗಿಂತ ಹೆಚ್ಚು ಆಮ್ಲಜನಕ ಸಾಗಿಸಿದೆ” ಎಂದು ಅವರು ಹೇಳಿದ್ದಾರೆ.

ಡೆಹ್ರಾಡೂನ್ ಮತ್ತು ಪುಣೆ  ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಸಹ ಸ್ವೀಕರಿಸಿದೆ ಎಂದು ನರೇನ್ ಹೇಳಿದ್ದಾರೆ. ಉತ್ತರಾಖಂಡಕ್ಕೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ಕಳೆದ ರಾತ್ರಿ ಜಾರ್ಖಂಡ್‌ನ ಟಾಟಾನಗರದಿಂದ 120 ಮೆ.ಟನ್ ಆಮ್ಲಜನಕ ತಲುಪಿದ್ದರೆ, ಪುಣೆಗೆ ಆಕ್ಸಿಜನ್ ಎಕ್ಸ್‌ಪ್ರೆಸ್ ಒಡಿಶಾದ ಅಂಗುಲ್‌ನಿಂದ 50 ಮೆ.ಟನ್ ಆಮ್ಲಜನಕ ಹೊತ್ತು ತಲುಪಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top