https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ತನ್ನ ತಾಯಿಯ ಜೀವ ಉಳಿಸಿದ ಮೈಸೂರು ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುತ್ತಿರುವ ವೈದ್ಯ

ಮೈಸೂರು: ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಅದೆಷ್ಟೋ ವೈದ್ಯರು, ದಾದಿಯರು ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಜನರ ಪ್ರಾಣ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಶ್ರೇಷ್ಠರ ನಡುವೆ ಒಬ್ಬ ವೈದ್ಯ ಅತ್ಯಂತ ವಿಶೇಷ ಅನಿಸುತ್ತಾರೆ. ಅವರೇ ಡಾ. ಹರ್ಷ. ಪ್ರಸ್ತುತ ಅವರು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.

ಚಂಡೀಗಢದಿಂದ ಬಂದು ಅವರು ಮೈಸೂರಿನ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುತ್ತಿರುವುದಕ್ಕೂ ಕಾರಣವಿದೆ. ಅದೇನೆಂದರೆ ಗಂಭೀರ ಸ್ಥಿತಿಯಲ್ಲಿದ್ದ ಅವರ ತಾಯಿಯ ಜೀವವನ್ನು ಈ ಆಸ್ಪತ್ರೆ ಉಳಿಸಿತ್ತು. ಹೀಗಾಗಿ ಋಣ ತೀರಿಸುವ ಸಲುವಾಗಿ ಅವರುರು ಸ್ವಯಂಪ್ರೇರಿತರಾಗಿ ಉಚಿತ ಸೇವೆ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದಾರೆ.

ಮಂಡ್ಯ ಜಿಲ್ಲೆಯ ರೈತ ಕುಟುಂಬದಿಂದ ಬಂದಿರುವ ಡಾ.ಹರ್ಷ ಅವರು ಚಂಡೀಗಢದ ಪ್ರತಿಷ್ಠಿತ ಪಿಜಿಐಎಂಆರ್‌ನಲ್ಲಿ ರೇಡಿಯೊ ಡಯಾಗ್ನೋಸಿಸ್‌ನಲ್ಲಿ ಔಷಧಿಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ರಜೆ ತೆಗೆದುಕೊಂಡು ಬಂದು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.

ಹರ್ಷ ಅವರ ತಾಯಿ 48 ವರ್ಷದ ರಾಜಲಕ್ಷ್ಮೀ ಅವರು ಕೋವಿಡ್ ಕಾರಣದಿಂದ ಮಂಡ್ಯದ ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಿ ತುರ್ತಾಗಿ ಐಸಿಯು ಬೆಡ್ ನ ಅವಶ್ಯಕತೆ ಬಿತ್ತು. ಹೀಗಾಗಿ ಅನೇಕ ಆಸ್ಪತ್ರೆಗಳನ್ನು ಸುತ್ತಿದರೂ ಅವರಿಗೆ ಬೆಡ್ ಸಿಗಲಿಲ್ಲ. ನಂತರ ಮೈಸೂರಿನ ಕೋವಿಡ್ 19 ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ರಾಜಲಕ್ಷ್ಮಿ ಅವರನ್ನು ಪರೀಕ್ಷಿಸಿದ ವೈದ್ಯರು ಪರಿಸ್ಥಿತಿ ಕೈಮೀರಿ ಹೋಗಿದೆ ಜೀವ ಉಳಿಸುವುದು ಕಷ್ಟ ಎಂದು ಹೇಳಿ ಕೈಚೆಲ್ಲಿದ್ದರು. ಆದರೆ ಮೈಸೂರು ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಾಜೇಶ್ವರಿ ಎಚ್ ಆರ್ ಅವರು ಆಸ್ಪತ್ರೆಗೆ ದಾಖಲಿಸಿಕೊಂಡು ಭರವಸೆಯ ಮಾತುಗಳನ್ನು ಹೇಳಿ ಅವರ ಜೀವ ಉಳಿಸಿಕೊಟ್ಟಿತು.

10 ದಿನಗಳ ಆರೈಕೆಯ ನಂತರ ರಾಜಲಕ್ಷ್ಮಿ ಅವರು ಐಸಿಯುನಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾರೆ  ಆಸ್ಪತ್ರೆಯಲ್ಲಿನ ಸೇವೆಯಿಂದ ತನ್ನ ತಾಯಿ ಪುನರ್ ಜನ್ಮ ಪಡೆದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top