News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ ಘಟಕದಲ್ಲಿ ತಿಂಗಳಿಗೆ 2 ಕೋಟಿ ಡೋಸ್ ಲಸಿಕೆ ತಯಾರಿಸಲಿದೆ ಭಾರತ್‌ ಬಯೋಟೆಕ್

ಲಕ್ನೋ: ರಾಜ್ಯಗಳು ಕೋವಿಡ್ -19 ಲಸಿಕೆಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಕಾರ್ಪೊರೇಶನ್ ಲಿಮಿಟೆಡ್ (ಬಿಬಿಸಿಒಎಲ್) ನ ಹೊಸ ಘಟಕವನ್ನು ಸ್ಥಾಪಿಸುವ ಭಾರತ್ ಬಯೋಟೆಕ್ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ವರದಿಗಳ ಪ್ರಕಾರ, ಈ ಹೊಸ ಪಿಎಸ್‌ಯು ಪ್ರತಿ ತಿಂಗಳು 2 ಕೋಟಿ ಡೋಸ್ ಕೋವಾಕ್ಸಿನ್ ತಯಾರಿಸಲಿದೆ ಮತ್ತು ಈ ಯೋಜನೆಗಾಗಿ ಕೇಂದ್ರ ಸರ್ಕಾರ ಬಿಬಿಬಿಸಿಒಲ್‌ಗೆ 30 ಕೋಟಿ ರೂ ನೀಡಲಿದೆ.

ಬುಲಂದ್‌ಶಹರ್‌ನಲ್ಲಿ ಬಿಬಿಸಿಒಎಲ್ ಅನ್ನು 1989 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಮೌಖಿಕ ಪೋಲಿಯೊ ಲಸಿಕೆಗಳು ಮತ್ತು ಇತರ ರೋಗನಿರೋಧಕ ಲಸಿಕೆಗಳನ್ನು ತಯಾರಿಸುತ್ತದೆ.

ಭಾರತದಲ್ಲಿ ಲಸಿಕೆಗಳ ಕೊರತೆ ಹೆಚ್ಚಾಗಿದೆ, ಇದರ ಪರಿಣಾಮವಾಗಿ, ಕೆಲವು ರಾಜ್ಯಗಳು 18-44 ವಯಸ್ಸಿನ ಜನರಿಗೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಸ್ಥಗಿತಗೊಳಿಸಿವೆ.

ಹೀಗಾಗಿ ಭಾರತ್ ಬಯೋಟೆಕ್ ರಸಿಕ ಉತ್ಪಾದನೆಯನ್ನು ವೃದ್ಧಿಸಲು ಮುಂದಾಗಿದೆ.

ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಮುಂದಿನ ನಾಲ್ಕು ತಿಂಗಳುಗಳವರೆಗಿನ ತಮ್ಮ ಉತ್ಪಾದನಾ ಯೋಜನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಆಗಸ್ಟ್ ವೇಳೆಗೆ ಕ್ರಮವಾಗಿ 10 ಕೋಟಿ ಮತ್ತು 7.8 ಕೋಟಿ ಡೋಸ್ ವರೆಗೆ ಉತ್ಪಾದನೆಯನ್ನು ಹೆಚ್ಚಳ ಮಾಡಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕಚೇರಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಉತ್ಪಾದನಾ ಯೋಜನೆಯನ್ನು ಎರಡೂ ಸಂಸ್ಥೆಗಳಿಂದ ಕೋರಿವೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top