News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್-19 ನ ಕ್ಲಿನಿಕಲ್ ನಿರ್ವಹಣೆಗಾಗಿ ತರಬೇತಿ ಪಡೆದ ಆಯುಷ್ ವೃತ್ತಿಪರರು

ನವದೆಹಲಿ: ಕೋವಿಡ್-19 ನ ಕ್ಲಿನಿಕಲ್ ನಿರ್ವಹಣೆಗಾಗಿ ತರಬೇತಿ ಪಡೆದ ಆಯುಷ್ ಮಾನವ ಸಂಪನ್ಮೂಲವನ್ನು ಸೇರ್ಪಡೆಗೊಳಿಸಲು ಸರ್ಕಾರ ಸಲಹೆ ನೀಡಿದೆ. ಕೋವಿಡ್- 19 ಕರ್ತವ್ಯಗಳಿಗೆ ಎಂಟು ಲಕ್ಷ ಅರ್ಹ ಆಯುಷ್ ವೃತ್ತಿಪರರ ಸೇವೆ ಲಭ್ಯವಾಗಲಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.

ಕೋವಿಡ್-19 ವಿರುದ್ಧದ ಹೋರಾಟದ ಮುಂಚೂಣಿಗೆ ಆಯುಷ್ ವೃತ್ತಿಪರರನ್ನು ನಿಯೋಜಿಸುವ ನಿರ್ಧಾರವು ಕೋವಿಡ್-19 ರ ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸಲು ಕೆಲವು ದಿನಗಳ ಹಿಂದೆ ತೆಗೆದುಕೊಂಡ ನಿರ್ಧಾರಗಳ ಮುಂದುವರಿದ ಭಾಗವಾಗಿದೆ.

ಆಯುಷ್ ವೈದ್ಯರು ಸಾಂಸ್ಥಿಕವಾಗಿ ಅರ್ಹ ವೃತ್ತಿಪರರು, ವೈದ್ಯಕೀಯ ಆರೈಕೆಯ ವಿವಿಧ ಅಂಶಗಳಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್-19 ಆರೈಕೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಪ್ರಸ್ತುತ ಕೋವಿಡ್ -19 ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಅದು ಹೇಳಿದೆ. ‌

ಆಯುಷ್ ಆಸ್ಪತ್ರೆಗಳನ್ನು ಕೋವಿಡ್ ಸೂಕ್ತ ಸೌಲಭ್ಯಗಳಾಗಿ ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುತ್ತದೆ. ಇದು ಕೋವಿಡ್ -19 ಮೂಲಸೌಕರ್ಯಕ್ಕೆ 50 ಸಾವಿರ ಹಾಸಿಗೆಗಳು, 750 ಆಯುಷ್ ಆಸ್ಪತ್ರೆಗಳು ಮತ್ತು 86 ಕ್ಲಿನಿಕಲ್ ಸೌಲಭ್ಯಗಳನ್ನು ಸೇರಿಸಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top