News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಾಖಲೆಯ ಗರಿಷ್ಠ ರೂ 1,41,384 ಕೋಟಿ ತಲುಪಿದ ಎಪ್ರಿಲ್‌ ತಿಂಗಳ ಜಿಎಸ್‌ಟಿ ಸಂಗ್ರಹ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಡುವೆಯೂ ಏಪ್ರಿಲ್ 2021 ರಲ್ಲಿ ಸಂಗ್ರಹಿಸಿಲ್ಪಟ್ಟ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ಒಟ್ಟು ಆದಾಯವು ದಾಖಲೆಯ ಗರಿಷ್ಠ 1,41,384 ಕೋಟಿ ರೂ.ಗೆ ತಲುಪಿದೆ.

ಇದರಲ್ಲಿ ಸಿಜಿಎಸ್‌ಟಿ 27,837 ಕೋಟಿ ರೂ., ಎಸ್‌ಜಿಎಸ್‌ಟಿ 35,621 ರೂ., ಐಜಿಎಸ್‌ಟಿ 68,481 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 29,599 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 9,445 ಕೋಟಿ ರೂ.ಆಗಿದೆ

“ಭಾರತೀಯ ವ್ಯವಹಾರಗಳು ರಿಟರ್ನ್ ಫೈಲಿಂಗ್ ಅವಶ್ಯಕತೆಗಳನ್ನು ಅನುಸರಿಸುವ ಮೂಲಕ ಮಾತ್ರವಲ್ಲದೆ ತಮ್ಮ ಜಿಎಸ್‌ಟಿ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತೊಮ್ಮೆ ಗಮನಾರ್ಹ ಸ್ಪೂರ್ತಿ ತೋರಿಸಿದೆ” ಎಂದು ಹಣಕಾಸು ಸಚಿವಾಲಯ ಹೇಳಿದೆ.

ಜಿಎಸ್‌ಟಿ ಆದಾಯವು ಕಳೆದ ಏಳು ತಿಂಗಳಿಂದ ಸತತವಾಗಿ ಒಂದು ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಮಾತ್ರವಲ್ಲದೆ ಸ್ಥಿರವಾದ ಏರಿಕೆಯನ್ನೂ ತೋರಿಸಿದೆ. ಇದು ನಿರಂತರ ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top