News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಷ್ಯಾದಿಂದ ಮೊದಲ ಬ್ಯಾಚ್ ಸ್ಪುಟ್ನಿಕ್‌ ವಿ ಲಸಿಕೆ ಇಂದು ಭಾರತಕ್ಕೆ

ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್‌ ವಿ ಯ ಮೊದಲ ಬ್ಯಾಚ್ ಇಂದು ಭಾರತಕ್ಕೆ ಬರಲಿದೆ. ರಷ್ಯಾದ ಲಸಿಕೆಯ ಆಗಮನವು ಹೆಚ್ಚಿನ ಜನರಿಗೆ ಲಸಿಕೆ ನೀಡುವ ಭಾರತದ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉತ್ತುಂಗದ ಈ ಸಂದರ್ಭದಲ್ಲಿ  ಮೇ 1 ರಿಂದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಪ್ರಮಾಣವನ್ನು ರವಾನಿಸಲು ಪ್ರಾರಂಭಿಸಲಾಗುತ್ತಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ಜೂನ್ ವೇಳೆಗೆ ಭಾರತವು ಸ್ಪಟ್ನಿಕ್‌ ವಿ 5 ಮಿಲಿಯನ್ ಡೋಸ್ ಲಸಿಕೆ ಪಡೆಯುವ ನಿರೀಕ್ಷೆಯಿದೆ.

ಮಾಧ್ಯಮ ವರದಿಗಳ ಪ್ರಕಾರ, ಸುಮಾರು 150,000 ರಿಂದ 200,000 ಡೋಸ್ ಲಸಿಕೆಗಳನ್ನು ಮೇ ಆರಂಭದ ವೇಳೆಗೆ ರಷ್ಯಾ ರವಾನಿಸಲಿದೆ ಮತ್ತು ಮೇ ಅಂತ್ಯದ ವೇಳೆಗೆ ಇನ್ನೂ 3 ಮಿಲಿಯನ್ ಡೋಸ್‌ಗಳನ್ನು ರವಾನಿಸಲಿದೆ.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ನಂತರ, ಮಾಸ್ಕೋದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ, ಭಾರತದಲ್ಲಿ ತುರ್ತು ಬಳಕೆಯ ಅನುಮೋದನೆ ಪಡೆದ ಮೂರನೇ ಕೋವಿಡ್ -19 ಲಸಿಕೆ.

ಮಾರ್ಗಸೂಚಿಗಳ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕೋವಿಡ್ -19 ಅನ್ನು ತಡೆಗಟ್ಟಲು ಲಸಿಕೆಯನ್ನು ಸಕ್ರಿಯ ರೋಗನಿರೋಧಕ ಶಕ್ತಿಗಾಗಿ ಸೂಚಿಸಲಾಗುತ್ತದೆ ಮತ್ತು ಇದನ್ನು ಮೈನಸ್ 18-ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ದ್ರವ ರೂಪದಲ್ಲಿ ಸಂಗ್ರಹಿಸಬೇಕಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top