ದೇವಾಲಯಗಳನ್ನು ರಕ್ಷಿಸಲು ರೂಪಿಸಿರುವ ಕಾನೂನಿನ ನಿಯಮದ ಬಗ್ಗೆ ಕ್ರೈಸ್ಥ ಮಿಷನರಿಗಳು ನಿಜಕ್ಕೂ ಭಯಭೀತರಾಗಿದ್ದಾರೆ. ಒಂದು ವೇಳೆ ಈ ಕಾನೂನು ಸಂಪೂರ್ಣವಾಗಿ ಜಾರಿಗೆ ತಂದರೆ ಅವರ ಅಜೆಂಡಾ ಖಂಡಿತಾ ಬುಡಮೇಲಾಗುತ್ತದೆ ಎಂಬ ಆತಂಕ ಅವರನ್ನು ಕಾಡುತ್ತಿದೆ.
ಇತ್ತೀಚೆಗೆ, ಕ್ರಿಶ್ಚಿಯನ್ ಪೋರ್ಟಲ್ ಆದ Persecution.Org, ತೆಲಂಗಾಣದಲ್ಲಿ ದೇವಾಲಯದ ಬಳಿಯ ಅಕ್ರಮ ಚರ್ಚ್ ಅನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿತ್ತು. ಅದರ ಪ್ರಕಾರ, ಆಡಳಿತ ಆದೇಶ (ಜಿಒ) 746 ಮಸೂದೆಯನ್ನು ಭಾರತದಲ್ಲಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲಿನ ಕಿರುಕುಳವೆಂದು ಪರಿಗಣಿಸಲಾಗಿದೆ. ಮಿಷನರಿಗಳ ಕಾನೂನುಬಾಹಿರ ಕ್ರಮಗಳನ್ನು ಪ್ರಶ್ನಿಸುವುದನ್ನು ಧಾರ್ಮಿಕ ಮೂಲಭೂತವಾದ ಎಂದು ಪರಿಗಣಿಸಲಾಗುತ್ತದೆ. ಆದರೆ ದೇವಾಲಯಗಳ ಮೇಲೆ ಹಿಂದೆ ಮತ್ತು ಇತ್ತೀಚಿಗೆ ನಡೆಯುತ್ತಿರುವ ದಾಳಿಯನ್ನು ಪರಿಗಣಿಸಿದರೆ ಹಿಂದೂಗಳಿಗೆ ತಮ್ಮ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ಮೂಲ ಪ್ರವೃತ್ತಿಯಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ ಅಲ್ಲವೇ?.
Persecution.org ಮತ್ತು ಅಪರಾಧ ಕಾಯ್ದೆಗಳನ್ನು ದೋಷಪೂರಿತಗೊಳಿಸುವ ಅದರ ಪ್ರಯತ್ನ
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ 2021 ರ ಜನವರಿ 12 ರಂದು ಆಂಧ್ರಪ್ರದೇಶದ ಕ್ರೈಸ್ಥ ಪಾದ್ರಿ ಪ್ರವೀಣ್ ಚಕ್ರವರ್ತಿಯನ್ನು ಬಂಧಿಸಲಾಯಿತು. ವೀಡಿಯೊವೊಂದರಲ್ಲಿ ಆತ ಒಂದು ಇಡೀ ಹಳ್ಳಿಯನ್ನು ಮತಾಂತರ ಮಾಡುವ ತನಕ ವಿಶ್ರಾಂತಿ ಪಡೆಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ನಂತರ ಆತ ಹಿಂದೂ ದೇವತೆಗಳ ಬಗ್ಗೆ ಅಸಹ್ಯ ಮಾತನ್ನಾಡಿದ್ದಾನೆ. ಆತ ಮಾಡಿದ್ದು ಬೇರೆಯವರ ದೃಷ್ಟಿಯಲ್ಲಿ ಅಪರಾಧ ಆದರೆ ಆತನ ಬಂಧನ Persecution.org ಪ್ರಕಾರ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲಿನ ಆಕ್ರಮಣ. ಈ ಪಾದ್ರಿ ತನ್ನ ವಿರುದ್ಧ ಧ್ವನಿ ಎತ್ತಿದ ಹಿಂದೂಗಳನ್ನು ಮೂಲಭೂತವಾದಿಗಳು ಎಂದಿದ್ದಾನೆ ಮತ್ತು ಅಲ್ಪಸಂಖ್ಯಾತರಿಗೆ ಭಾರತ ಸುರಕ್ಷಿತವಲ್ಲ ಎಂದು ಘೋಷಿಸಿದ್ದಾನೆ. ಹಾಗಾದರೆ ಟೆಂಪಲ್ ಟೌನ್ ಕಾನೂನಿನ ಬಗ್ಗೆ ಈ ಕ್ರಿಶ್ಚಿಯನ್ ಮಿಷನರಿಗಳಿಗಿರುವ ಚಿಂತೆ ಏನು?
ಹಾಗಾದರೆ ಟೆಂಪಲ್ ಟೌನ್ ನಿಯಮ ಏನು?
ಜೂನ್ 2, 2007 ರಂದು ಆಂಧ್ರಪ್ರದೇಶದ ಸರ್ಕಾರವು ಜಿ.ಒ. 746 ಅನ್ನು ಪರಿಚಯಿಸಿತು, ಇದು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಬೇರೆ ಯಾವುದೇ ಧರ್ಮದ ಪ್ರಚಾರವನ್ನು ಅನುಮತಿಸುವುದಿಲ್ಲ ಎಂದು ಹೇಳುತ್ತದೆ. ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಭೂಮಿಯನ್ನು ಕಾಂಗ್ರೆಸ್ ಸರ್ಕಾರ ವಶಪಡಿಸಿಕೊಳ್ಳುವ ಕಾರ್ಯಸೂಚಿಯೊಂದಿಗೆ ಈ ಮಸೂದೆಯನ್ನು ವಾಸ್ತವವಾಗಿ ಅಂಗೀಕರಿಸಲಾಯಿತು. ಈ ಮಸೂದೆಯಲ್ಲಿನ ಒಂದು ಸಣ್ಣ ಬದಲಾವಣೆಯು ಹಿಂದೂ ದೇಗುಲ ನಗರಗಳನ್ನು ರಕ್ಷಿಸುತ್ತದೆ. ಹೇಗೆ ಎಂದು ನೋಡೋಣ
ಟೆಂಪಲ್ ಟೌನ್ ನಿಯಮವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಜಾರಿಗೊಳಿಸಿದರೆ, ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರ್ಚ್ ಅಥವಾ ಮಸೀದಿಯನ್ನು ನಿರ್ಮಿಸುವುದು ಅಥವಾ ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಪ್ರಚಾರ ಮಾಡುವುದು ಕಾನೂನುಬಾಹಿರವಾಗುತ್ತದೆ. ಮತಾಂತರಗೊಳಿಸುವ ಮಿಷನರಿಗಳಿಗೆ ದೇವಾಲಯದ ನಿರ್ದಿಷ್ಟ ವ್ಯಾಪ್ತಿಯ ಒಳಗೆ ತಮ್ಮ ಅಜೆಂಡ ಅನುಷ್ಠಾನಕ್ಕೆ ತರಲು ಅನುಮತಿ ಇರುವುದಿಲ್ಲ.
ಟೆಂಪಲ್ ಟೌನ್ ನಿಯಮದ ಮಹತ್ವ.
ದೇಶದಾದ್ಯಂತದ ಅನೇಕ ಹಿಂದೂ ಪವಿತ್ರ ಸ್ಥಳಗಳು ಯುಪಿಯ ಕಾಶಿ ವಿಶ್ವನಾಥ ದೇವಾಲಯದಿಂದ ಹಿಡಿದು ತಮಿಳುನಾಡಿನ ರಾಮೇಶ್ವರಂವರೆಗೆ ಚರ್ಚುಗಳು ಮತ್ತು ಮಸೀದಿಗಳಿಂದ ಸಂಪೂರ್ಣವಾಗಿ ಸುತ್ತುವರೆದಿದೆ. ಹೀಗಾಗಿ ಈ ನಿಯಮವನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಇತರ ಧಾರ್ಮಿಕ ಗುಂಪುಗಳು ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ನಿಯಂತ್ರಿಸಬಹುದು ಮತ್ತು ದೇವಾಲಯದ ಪ್ರದೇಶಗಳ ಸಮೀಪ ನಡೆಯುವ ಮತಾಂತರಗಳನ್ನು ಸಹ ನಿಯಂತ್ರಿಸಬಹುದು.
ಜಿ. ಒ. 746 ಮಸೂದೆ ದೇವಾಲಯದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಭೂ ಅತಿಕ್ರಮಣ ಮತ್ತು ಮತಾಂತರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಅಸ್ತ್ರವಾಗಬಲ್ಲದು.
ಟೆಂಪಲ್ ಟೌನ್ ನಿಯಮಗಳ ಕಾಯ್ದೆಗೆ ಬೇಡಿಕೆ ಇಡುವುದು ಪ್ರತಿಯೊಬ್ಬ ಹಿಂದೂವಿನ ಮೂಲಭೂತ ಹಕ್ಕು. ಅಬ್ರಹಾಮಿಕ್ ಅನುಯಾಯಿಗಳು ವ್ಯಾಟಿಕನ್ನಲ್ಲಿ ಅಥವಾ ಮುಸ್ಲಿಮರು ಮಕ್ಕಾ ಬಳಿ ಹಿಂದೂ ದೇವಾಲಯವನ್ನು ಅನುಮತಿಸುತ್ತಾರೆಯೇ? ಹಾಗಾದರೆ ನಾವು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಚರ್ಚ್ ಅಥವಾ ಮಸೀದಿಯನ್ನು ಏಕೆ ಹೊಂದಿರಬೇಕು? ನಮ್ಮದನ್ನು ರಕ್ಷಿಸುವುದು ಎಂದಿಗೂ ಕೋಮುವಾದವಲ್ಲ ಮತ್ತು ಕಿರುಕುಳವಲ್ಲ ಎಂದು ಸ್ಪಷ್ಟಪಡಿಸೋಣ.
ಜೈ ಮಾ ಕಾಳಿ
ಮೂಲ ಲೇಖನ : missionkaali.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.