ನವದೆಹಲಿ: ಭಯಾನಕ ಎರಡನೇ ಕೋವಿಡ್ -19 ಅಲೆಯ ವಿರುದ್ಧದ ಭಾರತದ ಯುದ್ಧಕ್ಕೆ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ನೆರವು ನೀಡಿದೆ. ಗುರುವಾರ ಕೋವಿಡ್ ಪರಿಹಾರಕ್ಕಾಗಿ 7.5 ಕೋಟಿ ರೂಪಾಯಿಗಳ ಕೊಡುಗೆಯನ್ನು ಅದು ಘೋಷಿಸಿದೆ.
ಆಮ್ಲಜನಕದ ಕೊರತೆ ಮತ್ತು ಇತರ ಔಷಧಿಗಳ ಪೂರೈಕೆಯಲ್ಲಿ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಪ್ಯಾಟ್ ಕಮ್ಮಿನ್ಸ್ ನೇತೃತ್ವದಲ್ಲಿ ಹಲವಾರು ಆಟಗಾರರು ವಿನಮ್ರ ದೇಣಿಗೆ ನೀಡಿದ ನಂತರ ಈ ದೇಣಿಗೆ ಘೋಷಣೆಯಾಗಿದೆ. ಬ್ರಿಟಿಷ್ ಏಷ್ಯನ್ ಟ್ರಸ್ಟ್ (ಬಿಎಟಿ) ಸಹಭಾಗಿತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಸಮಾಜಸೇವಾ ಅಂಗ ರಾಯಲ್ ರಾಜಸ್ಥಾನ್ ಫೌಂಡೇಶನ್ (ಆರ್ಆರ್ಎಫ್) ಜೊತೆಗೂಡಿ ಆಟಗಾರರು ಮತ್ತು ತಂಡದ ಮಾಲೀಕರು ಈ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಫ್ರ್ಯಾಂಚೈಸ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಗ್ರಹಿಸಿದ ಮೊತ್ತವು ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಕೊರತೆಯ ಮಧ್ಯೆ ವೈದ್ಯಕೀಯ ಆಮ್ಲಜನಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಸಂಗ್ರಹಿಸಿದ ಹಣವನ್ನು ರಾಜಸ್ಥಾನ ರಾಜ್ಯಕ್ಕೆ ನೀಡಲಾಗುತ್ತಿದೆಯಾದರೂ, ಇದು ಭಾರತಕ್ಕೂ ಸಹಾಯವನ್ನು ಒದಗಿಸುತ್ತದೆ ಎಂದು ತಂಡ ಹೇಳಿದೆ.
Rajasthan Royals announce a contribution of over $1 milion from their owners, players and management to help with immediate support to those impacted by COVID-19. This will be implemented through @RoyalRajasthanF and @britishasiantst.
Complete details 👇#RoyalsFamily
— Rajasthan Royals (@rajasthanroyals) April 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.