ನವದೆಹಲಿ: ಏರ್ ಇಂಡಿಯಾ ವಿವಿಧ ದೇಶಗಳಿಂದ ಫಿಲಿಪ್ಸ್ ಕಂಪನಿ ತಯಾರಿಸಿದ 10,636 ಆಮ್ಲಜನಕ ಕಾನ್‌ಸೆಂಟ್ರೇಟರ್ಸ್ ಅನ್ನು ಏರ್‌ಲಿಫ್ಟ್ ಮಾಡಲು ಸಜ್ಜಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಅಂತಹ 636 ಕಾನ್‌ಸೆಂಟ್ರೇಟರ್ಸ್ ಈಗಾಗಲೇ ಯುಎಸ್ ನಿಂದ ಭಾರತಕ್ಕೆ ಹಾರಿವೆ ಎಂದು ಪುರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಸರಕುಗಳು ಪ್ರತಿದಿನ ಹಾರಾಟ ನಡೆಸುತ್ತಿದ್ದು, ಈ ವಾರದಲ್ಲಿ ಸಂಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
“ಸಂಜೀವಿನಿಗಾಗಿ ಹನುಮಂತ ದ್ರೋಣಗಿರಿ ಪರ್ವತವನ್ನು ಎತ್ತಿದಂತೆ, ಏರ್ ಇಂಡಿಯಾ ಪಿಲಿಫ್ಸ್ ತಯಾರಿಸಿದ 10,636 ಆಮ್ಲಜನಕ ಕಾನ್‌ಸೆಂಟ್ರೇಟರ್ಸ್ ಅನ್ನು ಏರ್‌ಲಿಫ್ಟ್ ಮಾಡಲಿದೆ. ಈಗಾಗಲೇ 636 ಯುಎಸ್‌ನಿಂದ ಬಂದಿದೆ. ಸರಕುಗಳು ನಿತ್ಯ ಹಾರಾಟ ನಡೆಸುತ್ತಿವೆ. ಈ ವಾರ ಕಾರ್ಯ ಸಮಾಪ್ತವಾಗಲಿದೆ” ಎಂದು ಟ್ವಿಟ್ ಮಾಡಿದ್ದಾರೆ.
Uplifting news on Hanuman Jayanti!
Like Lord Hanuman lifted Dronagiri in search of Sanjeevani, @airindiain is airlifting 10,636 oxygen concentrators manufactured by Philips.
636 already flown in from US. Consignments flying in every day. Will be completed with this week. pic.twitter.com/SraMbjJpRM
— Hardeep Singh Puri (@HardeepSPuri) April 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.