ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮ್ಮ ಜೀವನದಲ್ಲಿ ನಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ ದೊಡ್ಡ ನಷ್ಟ ಎದುರಾಗಬಹುದು, ಆದರೆ ಜೀವನದಲ್ಲಾಗುವ ಸಣ್ಣ ಸಣ್ಣ ಘಟನೆಗಳಲ್ಲೂ ಸಂತೋಷವನ್ನು ಕಂಡುಕೊಳ್ಳುವುದರಿಂದ ದುಃಖಕ್ಕೆ ಅಲ್ಲಿ ಜಾಗವಿರುವುದಿಲ್ಲ. ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು- ಮಂಕುತಿಮ್ಮ’ ಎನ್ನುತ್ತಾರೆ ಡಿವಿಜಿ.ಸುಖ, ಸಂತೋಷ ನಾಳೆ ಬರುತ್ತದೆ ಎಂದುಕೊಂಡು ಕಾಯುವುದರಲ್ಲಿ ಅರ್ಥ ಇಲ್ಲ. ಈಗ ಸಂತೋಷಪಟ್ಟರೆ ನಾಳೆ ದುಃಖ ಬರುತ್ತದೆಯೋ ಏನೋ ಎಂಬ ದುಗುಡದಲ್ಲೇ ದಿನ ದೂಡುತ್ತೇವೆ. ಬದುಕುವುದು ಹಾಗಲ್ಲ. ನಾಳಿನ ದುಃಖದ ಬಗ್ಗೆ ಹೆಚ್ಚು ಚಿಂತಿಸದೆ ಈ ಕ್ಷಣದ ಸುಖವನ್ನು ಅನುಭವಿಸುವ ಮೂಲಕ ಬದುಕನ್ನು ನಡೆಸುವ ಕ್ರಮ ನಮಗೆ ತಿಳಿದಿರಬೇಕು.
ಖುಷಿ ಕೊಡುವ ಗೆಳೆಯರು, ಇಷ್ಟವಾಗುವ ಸಂಗೀತ, ಸಿನಿಮಾ ನೋಡಿದಾಗ ಆಗುವ ಖುಷಿ, ಹಳೆಯ ಗೆಳತಿ ಸಿಕ್ಕಾಗ ಹಂಚಿಕೊಂಡ ನೆನಪುಗಳಿಂದ ಸ್ವಲ್ಪ ಸಮಯವಾದರೂ ಮನಸ್ಸಿಗೆ ಸಿಗುವ ನಿರಾಳತೆ ಇವೆಲ್ಲಾ ಸಣ್ಣಸಣ್ಣ ಖುಷಿಗಳೇ. ಆದರೆ ಅದನ್ನು ಸಂಭ್ರಮಿಸಲು ಹೋಗುವುದಿಲ್ಲ. ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದರ ಮೂಲಕ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸಬಹುದು. ಕ್ಷಣಗಳಿಂದ ಮಾತ್ರ ಖುಷಿ ಸಿಗುತ್ತದೆ ಎಂದೇ ಭಾವಿಸಿರುತ್ತಾರೆ. ಪುಟ್ಟ ಪುಟ್ಟ ಬದಲಾವಣೆಯೂ ಬದುಕಿನಲ್ಲಿ ಖುಷಿಯನ್ನು ತರಬಲ್ಲುದು. ನಾಳೆಯ ಚಿಂತೆ ಮಾಡಿಕೊಂಡು ಈ ಕ್ಷಣದ ಬಗ್ಗೆ ಮರೆಯುತ್ತಿದ್ದೇವೆ. ಈ ಕೋವಿಡ್ ಸಂದರ್ಭದಲ್ಲಿ ನಮ್ಮೆಲ್ಲ ಸಣ್ಣ-ಸಣ್ಣ ಖುಷಿಯನ್ನು ಮೆಲಕು ಹಾಕಲು, ಸಂಬಂಧಗಳನ್ನು ಗಟ್ಟಿಗೊಳಸಲು ಅವಕಾಶ ದೊರೆಯಿತು ಎಂದುಕೊಳ್ಳುವುದು ಉತ್ತಮವಲ್ಲವೇ?.
ಕೆಲವೊಮ್ಮೆ ನಾವು ತಪ್ಪಾಗಿ ಯೋಚನೆ ಮಾಡುತ್ತೇವೆ. ನಾವಿರುವವರೆಗೂ ಕಷ್ಟಗಳು ತಪ್ಪಿದ್ದಲ್ಲ ಎಂದುಕೊಂಡು ಖುಷಿಪಡುವುದಕ್ಕೂ ಆಯ್ಕೆ ಮಾಡಿಕೊಳ್ಳುತ್ತಾರೆ. ನಾಳೆಯ ಚಿಂತೆಗಳ ಬಗ್ಗೆ ಇಂದೇ ಯೋಚಿಸಿ, ಇಂದಿನ ಸಂತೋಷ, ಇಂದಿನ ನೆಮ್ಮದಿಯನ್ನೂ ಕಳೆದುಕೊಳ್ಳುವ ಬದಲು, ಇಂದು ಖುಷಿಯಾಗಿರೋಣ, ನಾಳೆ ಕಂಡವರಾರು ಎಂದೆಣಿಸುವ ಮನಸ್ಸು, ಪರಿವರ್ತನೆ ನಮ್ಮಲ್ಲಾದರೆ, ಅದು ಹರುಷ ಪಡುವುದಕ್ಕೆ ನಾವು ಕಂಡುಕೊಳ್ಳುವ ಹಅದಿ ಎಂದರೆ ತಪ್ಪಾಗಲಾರದು. ಹಾಗಾಗಿ ಸಣ್ಣ ಸಣ್ಣ ಖುಷಿಗಳನ್ನು ಆಸ್ವಾದಿಸುವ ಮನಸ್ಸು ನಮ್ಮಲ್ಲಿರಲಿ.
✍️ ಆಕರ್ಷ ಆರಿಗ,
ಎಸ್ ಡಿ ಎಮ್ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.