ನವದೆಹಲಿ: 24 ಗಂಟೆಗಳ ಹಿಂದೆ ನಾಪತ್ತೆಯಾದ ಇಂಡೋನೇಷ್ಯಾದ ಜಲಾಂತರ್ಗಾಮಿ ನೌಕೆ ಮತ್ತು ಅದರ 53 ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಇಂದು ಸೇರಿಕೊಂಡಿದೆ. ಬಾಲಿ ದ್ವೀಪದ ಉತ್ತರಕ್ಕೆ ಟಾರ್ಪಿಡೊ ಡ್ರಿಲ್ ನಡೆಸುತ್ತಿರುವಾಗ ಇಂಡೋನೇಷ್ಯಾದ 44 ವರ್ಷದ ಜಲಾಂತರ್ಗಾಮಿ ಕೆಆರ್ಐ ನಂಗಲ -402 ನಾಪತ್ತೆಯಾಗಿದೆ. ಹೀಗಾಗಿ ಅದರ ಶೋಧ ಕಾರ್ಯದಲ್ಲಿ ಇಂಡೋನೇಷ್ಯಾ ಭಾರತದಿಂದ ನೆರವು ಕೋರಿತ್ತು.
ರಕ್ಷಣಾ ಕಾರ್ಯಾಚರಣೆ ಇಂದು ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆ ನೌಕಾಪಡೆಯ ಆಳ ಸಮುದ್ರ ಸಂರಕ್ಷಣಾ ಹಡಗು (ಡೀಪ್-ಸಬ್ಮರ್ಜೆನ್ಸ್ ರೆಸ್ಕ್ಯೂ ವೆಸೆಲ್ (ಡಿಎಸ್ವಿಆರ್)) ಇಂದು ಬೆಳಿಗ್ಗೆ ವಿಶಾಖಪಟ್ಟಣಂನಿಂದ ಶೋಧ ಕಾರ್ಯಕ್ಕೆ ಹೊರಟಿದೆ. ಶೋಧನಾ ಉಪಕರಣ ಹೊತ್ತಿರುವ ಈ ಹಡಗು ಕಾರ್ಯಾಚರಣೆಯ ಸ್ಥಳವನ್ನು ತಲುಪಲು ಮೂರು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
“ಬಿಕ್ಕಟ್ಟಿನ ಈ ಕ್ಷಣದಲ್ಲಿ ನಮ್ಮ ಪ್ರಾರ್ಥನೆಗಳು ಇಂಡೋನೇಷ್ಯಾ ನೌಕಾಪಡೆ, ನಾಪತ್ತೆಯಾದ ಹಡಗಿನ ಸಿಬ್ಬಂದಿಗಳ ಮೇಲೆ ಇದೆ ಮತ್ತು ಅವರ ಕುಟುಂಬಗಳೊಂದಿಗೆ ಇದೆ” ಎಂದು ನೌಕಾಪಡೆ ಡೀಪ್-ಸಬ್ಮರ್ಜೆನ್ಸ್ ಪಾರುಗಾಣಿಕಾ ಹಡಗಿನ ಚಿತ್ರಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ತಿಳಿಸಿದೆ.
ಮೂಲಗಳ ಪ್ರಕಾರ ಕೆಆರ್ಐ ನಂಗಲ -402 ಹಡಗು ಸಮುದ್ರದ 600- 700 ಮೀಟರ್ ಆಳದಲ್ಲಿ ಮುಳುಗಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಜಲಾಂತರ್ಗಾಮಿಗಳು 200 ಮೀಟರ್ ಆಳಕ್ಕೆ ಇಳಿಯಬಲ್ಲವು.
#IndianNavy’s Deep Submergence Rescue Vessel (DSRV) departed from #Visakhapatnam to support #IndonesianNavy in Search & Rescue efforts for #KRINanggala.
In this moment of crisis our prayers are with the @_TNIAL_ , our brothers in arms onboard #KRINanggala & their familiesfile📷 pic.twitter.com/753Vi8o2dS
— SpokespersonNavy (@indiannavy) April 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.