ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ಇಂದು ದೆಹಲಿಯ ಏಮ್ಸ್ ನಲ್ಲಿ ಪಡೆದರು.
ದೆಹಲಿ ಏಮ್ಸ್ನಲ್ಲಿ ನರೇಂದ್ರ ಮೋದಿಯವರಿಗೆ ಪುದುಚೇರಿಯ ಪಿ.ನಿವೇದ ಮತ್ತು ಪಂಜಾಬ್ನ ನಿಶಾ ಶರ್ಮಾ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಿದರು.
ಈ ಬಗ್ಗೆ ಟ್ವಿಟ್ ಮಾಡಿರುವ ನರೇಂದ್ರ ಮೋದಿ, “ಇಂದು ಏಮ್ಸ್ ನಲ್ಲಿ ನನ್ನ ಎರಡನೇ ಡೋಸ್ ಕೋವಿಡ್ -19 ಲಸಿಕೆ ಪಡೆದುಕೊಂಡೆ. ವೈರಸ್ ಅನ್ನು ಸೋಲಿಸಲು ಲಸಿಕೆ ನಮ್ಮಲ್ಲಿರುವ ಹಲವು ವಿಧಾನಗಳಲ್ಲಿ ಒಂದಾಗಿದೆ. ನೀವು ಲಸಿಕೆಗೆ ಅರ್ಹರಾಗಿದ್ದರೆ, ಶೀಘ್ರದಲ್ಲೇ ಪಡೆಯಿರಿ. Http://CoWin.gov.in ನಲ್ಲಿ ನೋಂದಾಯಿಸಿ” ಎಂದಿದ್ದಾರೆ.
“ನಾನು ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಡೋಸ್ ಕೋವಾಕ್ಸಿನ್ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿ ಮಾಡಿ ಲಸಿಕೆ ಹಾಕಿರುವುದು ಮರೆಯಲಾಗದ ಕ್ಷಣವಾಗಿದೆ” ಎಂದು ಪಿಎಂ ಮೋದಿಗೆ ಚುಚ್ಚುಮದ್ದನ್ನು ನೀಡಿದ ದಾದಿ ನಿಶಾ ಶರ್ಮಾ ಹೇಳಿದ್ದಾರೆ.
ಇದಕ್ಕೂ ಮೊದಲು ಮಾರ್ಚ್ 1 ರಂದು ನರೇಂದ್ರ ಮೋದಿ ಅವರು ಕೋವಿಡ್ -19 ಲಸಿಕೆಯ ಮೊದಲ ಪ್ರಮಾಣ ಸ್ವೀಕರಿಸಿದ್ದರು.
Got my second dose of the COVID-19 vaccine at AIIMS today.
Vaccination is among the few ways we have, to defeat the virus.
If you are eligible for the vaccine, get your shot soon. Register on https://t.co/hXdLpmaYSP. pic.twitter.com/XZzv6ULdan
— Narendra Modi (@narendramodi) April 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.