×
Home About Us Advertise With s Contact Us

ಅಮರನಾಥ ಯಾತ್ರೆಗೆ ತೆರಳಿದ 98 ಯಾತ್ರಿಗಳ ತಂಡ

Amarnath

ಜಮ್ಮು: ಗುರುವಾರ ಮುಂಜಾನೆ 98 ಜನರ ತಂಡ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ತೆರಳಿದೆ. ಈವರೆಗೆ ಸುಮಾರ 3,44,517 ಭಕ್ತಾದಿಗಳು ಇಲ್ಲಿನ ಶಿವ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

86 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರನ್ನೊಳಗೊಂಡ ಈ ತಂಡ ಇಲ್ಲಿನ ಭಗವತಿ ನಗರ ಶಿಬಿರದಿಂದ ಬೆಳಗ್ಗೆ 4.30ಕ್ಕೆ 4 ವಾಹನಗಳಲ್ಲಿ ತೆರಳಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಸಂಜೆಯ ವೇಳೆಗೆ ಈ ಯಾತ್ರಾರ್ಥಿಗಳು ಪಹಲಘಾಮ್ ಹಾಗೂ ಬಲತಾಲ್ ಶಿಬಿಗಳನ್ನು ಸೇರಲಿವೆ.

ಇದರೊಂದಿಗೆ ಜಮ್ಮು ಮೂಲ ಶಿಬಿರದಿಂದ ಈವರೆಗೆ 48,329 ಯಾತ್ರಾರ್ಥಿಗಳು ಅಮರನಾಥಕ್ಕೆ ತೆರಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top