ನವದೆಹಲಿ: ಆಯುಷ್ ಸಚಿವಾಲಯವು ಪ್ರಧಾನ ಮಂತ್ರಿ ಯೋಗ ಪ್ರಶಸ್ತಿಗಳಿಗೆ (ಪಿಎಂವೈಎ) ಅರ್ಜಿಗಳನ್ನು ಆಹ್ವಾನಿಸಿದೆ. ಈ ವರ್ಷದ ನಾಮನಿರ್ದೇಶನ ಪ್ರಕ್ರಿಯೆಯು ಮಾರ್ಚ್ 30 ರಿಂದ ಪ್ರಾರಂಭವಾಗಿದೆ ಮತ್ತು ನಮೂದುಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 30 ಆಗಿದೆ.
ಕೋವಿಡ್-19 ಕಾರಣದಿಂದಾಗಿ 2020 ರಲ್ಲಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಿಲ್ಲ.
ಆದರೆ, ಹಿಂದಿನ ವರ್ಷಗಳಂತೆ, ಆಯುಷ್ ಸಚಿವಾಲಯವು ದೇಶದ ವಿವಿಧ ಭಾಗಗಳಿಂದ ಮತ್ತು ಪ್ರಪಂಚದಾದ್ಯಂತದ ಪ್ರಧಾನ ಮಂತ್ರಿಗಳ ಯೋಗ ಪ್ರಶಸ್ತಿಗಳಿಗೆ ಯೋಗ ಸಾಧಕರು ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಪ್ರಶಸ್ತಿಗೆ ಅಯ್ಕೆಯಾದವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.
ಈ ಪ್ರಶಸ್ತಿಯನ್ನು ಮೈ ಗೌವ್ ಪ್ಲಾಟ್ಫಾರ್ಮ್ನಲ್ಲಿ ಆಯೋಜಿಸಲಾಗುತ್ತಿದೆ ಮತ್ತು ಭಾರತೀಯ ಮೂಲದ ಸಂಸ್ಥೆಗಳಿಗೆ ಎರಡು ರಾಷ್ಟ್ರೀಯ ವಿಭಾಗಗಳು ಮತ್ತು ಭಾರತೀಯ ಅಥವಾ ವಿದೇಶಿ ಮೂಲದ ಸಂಸ್ಥೆಗಳಿಗೆ ಎರಡು ಅಂತರರಾಷ್ಟ್ರೀಯ ವಿಭಾಗಗಳನ್ನು ಒಳಗೊಂಡಿದೆ.
ಆಯುಷ್ ಸಚಿವಾಲಯವು ವಿಜೇತರಿಗೆ ಟ್ರೋಫಿ, ಪ್ರಮಾಣಪತ್ರ ಮತ್ತು 25 ಲಕ್ಷ ರೂಪಾಯಿಗಳ ನಗದು ಪ್ರಶಸ್ತಿಯನ್ನು ನೀಡುತ್ತದೆ, ಇದನ್ನು 2021 ರ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಘೋಷಿಸಲಾಗುತ್ತದೆ. ಜಂಟಿ ವಿಜೇತರ ಸಂದರ್ಭದಲ್ಲಿ, ಪ್ರಶಸ್ತಿಗಳನ್ನು ವಿಜೇತರ ನಡುವೆ ಹಂಚಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.