ಈ ತರಕಾರಿ ಬೆಲೆ ಒಂದು ಕಿಲೋಗ್ರಾಂಗೆ ಸುಮಾರು 1 ಲಕ್ಷ ರೂ!. ಅಂದರೆ ಇದು Hop-shoots ವಿಧಾನದ ಮೂಲಕ ಬೆಲೆಯಲಾದ ಕೃಷಿ. ಹೌದು, ವಿಶ್ವದ ಅತ್ಯಂತ ದುಬಾರಿ ತರಕಾರಿಗಳಾದ Hop-shootsಗಳ ಕೃಷಿಯು ಪ್ರಯೋಗದ ಆಧಾರದ ಮೇಲೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ.
2012 ರಲ್ಲಿ ಹಜಾರಿಬಾಗ್ನ ಸೇಂಟ್ ಕೊಲಂಬಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬಿಹಾರದ ಔರಂಗಾಬಾದ್ ಜಿಲ್ಲೆಯ ನವಿನಗರ ಬ್ಲಾಕ್ನ ಅಡಿಯಲ್ಲಿರುವ ಕರಮ್ದಿಹ್ ಗ್ರಾಮದ 38 ವರ್ಷದ ರೈತ ಅಮ್ರೆಶ್ ಸಿಂಗ್ (38) ತನ್ನ ಭೂಮಿಯಲ್ಲಿ Hop-shoots ಕೃಷಿಯನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
ಆರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದನ್ನು ಒಂದು ಕೆಜಿಗೆ 1000 ಪೌಂಡ್ಗಳಿಗೆ ಮಾರಾಟ ಮಾಡಲಾಗುತ್ತಿತ್ತು, ಅಂದರೆ ಸರಿಸುಮಾರು 1 ಲಕ್ಷ ರೂ. ಈ ಬೆಳೆ ಭಾರತೀಯ ಮಾರುಕಟ್ಟೆಯಲ್ಲಿ ವಿರಳವಾಗಿ ಕಂಡುಬರುತ್ತದೆ ಮತ್ತು ಸ್ಪೆಷಲ್ ಆರ್ಡರ್ ನೀಡುವ ಮೂಲಕ ಮಾತ್ರ ಇದನ್ನು ಖರೀದಿಸಲಾಗುತ್ತದೆ.
” ಶೇಕಡಾ 60 ಕ್ಕಿಂತ ಹೆಚ್ಚು ಕೃಷಿ ಯಶಸ್ವಿಯಾಗಿ ನಡೆದಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘Hop-shoots ’ಗಳ ಕೃಷಿಯನ್ನು ಉತ್ತೇಜಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದರೆ, ಒಂದೆರಡು ವರ್ಷಗಳಲ್ಲಿ ರೈತರು ಇತರ ಕೃಷಿ ವಿಧಾನಗಳಿಂದ ಮಾಡಬಹುದಾದಕ್ಕಿಂತ 10 ಪಟ್ಟು ಹೆಚ್ಚು ಗಳಿಸುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ವಾರಣಾಸಿಯಲ್ಲಿರುವ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ಲಾಲ್ ಅವರ ಮೇಲ್ವಿಚಾರಣೆಯಲ್ಲಿ Hop-shoots (ಹ್ಯೂಮುಲಸ್-ಲುಪುಲಸ್) ಕೃಷಿ ನಡೆಯುತ್ತಿದೆ.
Hop-shoots ಹಣ್ಣು, ಹೂವು ಮತ್ತು ಕಾಂಡವನ್ನು ಪಾನೀಯ ತಯಾರಿಕೆ, ಬಿಯರ್ ತಯಾರಿಕೆ ಮತ್ತು ಪ್ರತಿಜೀವಕಗಳನ್ನು ತಯಾರಿಸುವಂತಹ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ತರಕಾರಿಯ ಕಾಂಡದಿಂದ ತಯಾರಿಸಿದ ಔಷಧಿಯು ಕ್ಷಯರೋಗ (ಟಿಬಿ) ಚಿಕಿತ್ಸೆಯಲ್ಲಿ ಹೆಚ್ಚಿನ ರೋಗನಿರೋಧಕ ಪರಿಣಾಮವನ್ನು ಹೊಂದಿದೆ ಎಂದು ಹೇಳಲಾಗಿದೆ.
“ಇದರ ಹೂವನ್ನು ಹಾಪ್-ಕೋನ್ ಅಥವಾ ಸ್ಟ್ರೋಬೈಲ್ ಎಂದು ಕರೆಯಲಾಗುತ್ತದೆ, ಇದನ್ನು ಬಿಯರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಉಳಿದ ಕೊಂಬೆಗಳನ್ನು ಆಹಾರ ಮತ್ತು ಔಷಧಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ “ಎಂದು ಹೇಳಲಾಗಿದೆ.
ಯುರೋಪಿಯನ್ ದೇಶಗಳಲ್ಲಿಯೂ ಹಾಪ್-ಶೂಟ್ ಬಳಕೆಯು ಜನಪ್ರಿಯವಾಗಿದೆ, ಅಲ್ಲಿ ತರಕಾರಿ ಸಹ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿರುವುದರಿಂದ ಚರ್ಮವನ್ನು ಮಿನುಗುವಂತೆ ಮತ್ತು ಯವೌನ ಕಾಪಾಡಲು ಇದನ್ನು ಬಳಸಲಾಗುತ್ತದೆ.
ಹಾಪ್-ಶೂಟ್ ಅನ್ನು 11 ನೇ ಶತಮಾನದ ಆರಂಭದಲ್ಲಿ ಕಂಡುಹಿಡಿಯಲಾಯಿತು ಮತ್ತು ಇದನ್ನು ಬಿಯರ್ನಲ್ಲಿ ಸುವಾಸನೆ ನೀಡುವ ಏಜೆಂಟ್ ಆಗಿ ಮತ್ತು ನಂತರ ಗಿಡಮೂಲಿಕೆ ಔಷಧದಲ್ಲಿ ಮತ್ತು ತರಕಾರಿಯಾಗಿ ಕ್ರಮೇಣ ಬಳಸಲಾಯಿತು.
ಚಿಗುರುಗಳಲ್ಲಿ ಹ್ಯೂಮುಲೋನ್ಸ್ ಮತ್ತು ಲುಪುಲೋನ್ಸ್ ಎಂಬ ಆಮ್ಲವಿದೆ, ಇದು ಮಾನವನ ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ. ಔಷಧವು ಜೀರ್ಣಕಾರಿ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಖಿನ್ನತೆ, ಆತಂಕ, ನೋವು ನಿವಾರಕ ಮತ್ತು ನಿದ್ರಾಹೀನತೆಯನ್ನು ಸಹ ಗುಣಪಡಿಸುತ್ತದೆ ಎಂದು ಹೇಳಲಾಗಿದೆ.
ಹಾಪ್-ಶೂಟ್ ಕೃಷಿಯನ್ನು ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಜರ್ಮನಿ ಮತ್ತು ಇತರ ದೇಶಗಳಲ್ಲಿ ಮಾಡಲಾಗುತ್ತದೆ ಎಂದು ಸಿಂಗ್ ಹೇಳುತ್ತಾರೆ. ಭಾರತದಲ್ಲಿ, ಇದನ್ನು ಮೊದಲು ಹಿಮಾಚಲ ಪ್ರದೇಶದಲ್ಲಿ ಮಾಡಲಾಗಿತ್ತು ಆದರೆ ಹೆಚ್ಚಿನ ಬೆಲೆ ಇರುವುದರಿಂದ ಅದರ ಮಾರ್ಕೆಟಿಂಗ್ ಕಷ್ಟವಾಗಿ ಅದನ್ನು ನಿಲ್ಲಿಸಲಾಯಿತು.
ಅಮ್ರೆಶ್ ಅವರು ಅನೇಕ ಇತರ ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯಗಳನ್ನು ಸಹ ಬೆಳೆಸುತ್ತಾರೆ. “ಕೃಷಿ ಕ್ಷೇತ್ರದಲ್ಲಿ, ಆತ್ಮವಿಶ್ವಾಸದಿಂದ ರಿಸ್ಕ್ ತೆಗೆದುಕೊಳ್ಳುವುದು ಅಂತಿಮವಾಗಿ ರೈತನಿಗೆ ಗೆಲ್ಲಲು ಸಹಾಯ ಮಾಡುತ್ತದೆ. ಬಿಹಾರದಲ್ಲಿ ಹಾಪ್-ಶೂಟ್ ಕೃಷಿಯನ್ನು ಪ್ರಯೋಗಿಸು ರಿಸ್ಕ್ ಅನ್ನು ನಾನು ತೆಗೆದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ.
ಅದು ಏನೇ ಇರಲಿ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವುದು ಇಂದಿನ ಅನಿವಾರ್ಯ. ರೈತನ ಆದಾಯ ಹೆಚ್ಚಿಸಲು ಇದು ಅಗತ್ಯ. ಈ ನಿಟ್ಟಿನಲ್ಲಿ ಯುವ ಕೃಷಿಕ ಅಮ್ರೇಶ್ ಅವರ ಪ್ರಯತ್ನ ಮೆಚ್ಚುವಂತದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.