ನವದೆಹಲಿ: ಉದಯೋನ್ಮುಖ ಬಾಹ್ಯಾಕಾಶ ಉದ್ಯಮಿಗಳಿಗೆ ದೊಡ್ಡ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಗ್ಪುರ, ಭೋಪಾಲ್ ಮತ್ತು ರೂರ್ಕೆಲಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ಕ್ಯಾಂಪಸ್ಗಳಲ್ಲಿ ಮೂರು ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ ಕೇಂದ್ರ (ಎಸ್-ಟಿಐಸಿ)ಗಳನ್ನುಉದ್ಘಾಟಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಮೂರು ಹೊಸ ಕೇಂದ್ರಗಳನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಉದ್ಘಾಟಿಸಿದ್ದಾರೆ.
ಅಗರ್ತಲಾ, ಜಲಂಧರ್ ಮತ್ತು ತಿರುಚಿರಾಪಳ್ಳಿಯಲ್ಲಿನ ಎನ್ಐಟಿಗಳಲ್ಲಿ ಇಸ್ರೋ ಈಗಾಗಲೇ ಸ್ಥಾಪಿಸಿರುವ ಇಂತಹ ಮೂರು ಸೌಲಭ್ಯಗಳಿಗೆ ಹೆಚ್ಚುವರಿಯಾಗಿ ಈ ಮೂರು ಹೊಸ ತಂತ್ರಜ್ಞಾನ ಇನ್ಕ್ಯುಬೇಟರ್ ಕೇಂದ್ರಗಳು ಸ್ಥಾಪನೆಯಾಗಿವೆ.
ಮೂರು ಹೊಸ ಎಸ್-ಟಿಐಸಿಗಳನ್ನು ತೆರೆಯುವುದರೊಂದಿಗೆ, ದೇಶದ ಆರು ಪ್ರದೇಶಗಳಲ್ಲಿ ಅಂತಹ ಒಂದು ಕೇಂದ್ರವನ್ನು ಸ್ಥಾಪಿಸುವ ಇಸ್ರೋ ಗುರಿಯನ್ನು ಸಾಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.