ನವದೆಹಲಿ: ಭಾರತವು ವಿಶ್ವದ ಅತೀದೊಡ್ಡ ಲಸಿಕಾ ಅಭಿಯಾನವನ್ನು ಮುನ್ನಡೆಸುತ್ತಿದ್ದು, ಮಹತ್ವದ ಪ್ರಗತಿಯನ್ನು ಸಾಧಿಸುತ್ತಿದೆ. ಭಾರತವು 4 ಕೋಟಿ ಕೋವಿಡ್-19 ಡೋಸ್ಗಳನ್ನು ತನ್ನ ನಾಗರಿಕರಿಗೆ ನೀಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ತನ್ನ ಹೆಗ್ಗುರುತನ್ನು ಹೆಚ್ಚಿಸಿದೆ. ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ ಇದುವರೆಗೆ 4 ಕೋಟಿಗಿಂತ ಹೆಚ್ಚಿನ ಡೋಸ್ಗಳನ್ನು ನೀಡಲಾಗಿದೆ.
ನಿನ್ನೆ ಸಂಜೆ 7 ಗಂಟೆಯವರೆಗೆ ಒಟ್ಟು 4 ಕೋಟಿ 11 ಲಕ್ಷ 55 ಸಾವಿರ 978 ಲಸಿಕೆ ಡೋಸ್ ಅನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಆರಂಭಿಸಿದ 63 ನೇ ದಿನವಾಗಿದ್ದು, ನಿನ್ನೆ ಒಂದೇ ದಿನ ಸಂಜೆ 7 ಗಂಟೆಯವರೆಗೆ 18 ಲಕ್ಷ 16 ಸಾವಿರ 161 ಲಸಿಕೆ ಡೋಸ್ ಅನ್ನು ನೀಡಲಾಯಿತು.
ಕೊರೋನಾವೈರಸ್ ಪ್ರಕರಣಗಳು ಕಳೆದ 9 ದಿನಗಳಿಂದ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಪಡೆಯಬೇಕೆಂದು ಸರ್ಕಾರ ಮನವಿ ಮಾಡಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.