ನವದೆಹಲಿ: ಆಲ್ ಇಂಡಿಯಾ ರೇ
ಡಿಯೊದಲ್ಲಿ ಮಾರ್ಚ್ 28ರಂದು ಅಂದರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಪ್ರಧಾನಿ ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 75ನೇ ಸಂಚಿಕೆಯಾಗಿದೆ.
ತಮ್ಮ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ ಸೂಚನೆ ನೀಡುವಂತೆ ಮೋದಿ ಟ್ವಿಟರ್ ಮೂಲಕ ದೇಶದ ಜನರಿಗೆ ಕರೆ ನೀಡಿದ್ದಾರೆ. ಮೈಗೌವ್, ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಜನರು ಈ ಕಾರ್ಯಕ್ರಮಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ.
ಕಾರ್ಯಕ್ರಮ ಎಐಆರ್ ಮತ್ತು ದೂರದರ್ಶನದ ಸಂಪೂರ್ಣ ನೆಟ್ವರ್ಕ್ನಲ್ಲಿ ಮತ್ತು ಎಐಆರ್ ನ್ಯೂಸ್ ವೆಬ್ಸೈಟ್ www.newsonair.com ಮತ್ತು ನ್ಯೂಸ್ ಆನ್ ಏರ್ ಮೊಬೈಲ್ ಆ್ಯಪ್ನಲ್ಲಿ ಪ್ರಸಾರವಾಗಲಿದೆ. ಎಐಆರ್, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್ಗಳಲ್ಲಿ ಇದನ್ನು ನೇರ ಪ್ರಸಾರ ಮಾಡಲಾಗುತ್ತದೆ.
ಹಿಂದಿ ಪ್ರಸಾರವಾದ ಕೂಡಲೇ ಆಕಾಶವಾಣಿಯು ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ಸಂಜೆ ಎಂಟು ಗಂಟೆಗೆ ಪುನರಾವರ್ತಿಸಲಾಗುತ್ತದೆ.
28th March…this year’s third #MannKiBaat and yet another opportunity to highlight interesting topics, and inspiring life journeys from across India.
Post your views on MyGov or the NaMo App, or record your message. https://t.co/oOBxXc69Vv pic.twitter.com/Ecy0s1QRFL
— Narendra Modi (@narendramodi) March 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.